ಸಿಡ್ನಿ : ಕುಟುಂಬದ ಅನಾರೋಗ್ಯದ ಕಾರಣ ಸಹಾನುಭೂತಿಯ ಆಧಾರದ ಮೇಲೆ ಭಾರತ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಉಳಿದ ಎರಡು ಟಿ- 20 ಪಂದ್ಯಗಳಿಂದ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ತಂಡದಿಂದ ಹೊರ ನಡೆದಿದ್ದಾರೆ.
-
JUST IN: Mitch Starc has withdrawn from Aussie T20 squad for personal reasons https://t.co/Uzb8pIOh5a #AUSvIND pic.twitter.com/pN5NzmVVYo
— cricket.com.au (@cricketcomau) December 5, 2020 " class="align-text-top noRightClick twitterSection" data="
">JUST IN: Mitch Starc has withdrawn from Aussie T20 squad for personal reasons https://t.co/Uzb8pIOh5a #AUSvIND pic.twitter.com/pN5NzmVVYo
— cricket.com.au (@cricketcomau) December 5, 2020JUST IN: Mitch Starc has withdrawn from Aussie T20 squad for personal reasons https://t.co/Uzb8pIOh5a #AUSvIND pic.twitter.com/pN5NzmVVYo
— cricket.com.au (@cricketcomau) December 5, 2020
ಶನಿವಾರ ಕ್ಯಾನ್‌ಬೆರಾದಿಂದ ಸಿಡ್ನಿಗೆ ಆಗಮಿಸಿದ ಸ್ಟಾರ್ಕ್, ಕುಟುಂಬದ ಅನಾರೋಗ್ಯದ ಬಗ್ಗೆ ತಿಳಿದ ನಂತರ ತಂಡ ತೊರೆದರು ಎಂದು ಕ್ರಿಕೆಟ್ ಡಾಟ್ ಕಾಮ್ ವರದಿ ಮಾಡಿದೆ. ಈ ಬಗ್ಗೆ ಪ್ರತಿಕ್ರಯಿಸಿದ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ "ಜಗತ್ತಿನಲ್ಲಿ ಕುಟುಂಬಕ್ಕಿಂತ ಮುಖ್ಯವಾದುದು ಏನೂ ಇಲ್ಲ. ಈ ಸಂದರ್ಭದಲ್ಲಿ ಮಿಚಲ್ ಸ್ಟಾರ್ಕ್ ಇದಕ್ಕೆ ಹೊರತಾಗಿಲ್ಲ" ಎಂದು ಹೇಳಿದ್ದಾರೆ.
"ನಾವು ಮಿಚ್‌ಗೆ ಅಗತ್ಯವಿರುವ ಎಲ್ಲಾ ಸಮಯ ನೀಡುತ್ತೇವೆ. ಅವರ ಕುಟುಂಬಕ್ಕೆ ಈಗ ಅವರ ಅವಶ್ಯಕತೆ ತುಂಬಾ ಮುಖ್ಯವಾಗಿದೆ. ಅದಕ್ಕಾಗಿ ಅವರು ಅವರ ಕುಟುಂಬದ ಜೊತೆ ತೆರಳಿದ್ದಾರೆ. ಅವರ ಕುಟುಂಬದಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಮುಕ್ತವಾದ ಮೇಲೆ ಅವರು ತಂಡಕ್ಕೆ ಮರಳಬಹುದು" ಎಂದು ಅವರು ಹೇಳಿದರು.
ಓದಿ: ಭಾರತ - ಆಸ್ಟ್ರೇಲಿಯಾ ಟಿ20 ಪಂದ್ಯ: ಸರಣಿ ಗೆಲುವಿನತ್ತ ಟೀಂ ಇಂಡಿಯಾ ಚಿತ್ತ
ಮೊದಲ ಟಿ-20 ಪಂದ್ಯದಲ್ಲಿ ಮಿಚಲ್ ಸ್ಟಾರ್ಕ್ 4 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಇನ್ನು, ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಅಶ್ಟನ್ ಅಗರ್ ಗಾಯಗೊಂಡು ಟಿ-20 ತಂಡದಿಂದ ಹೊರ ಬಿದ್ದಿರುವುದರಿಂದ ಅವರ ಸ್ಥಾನಕ್ಕೆ ಹಿರಿಯ ಸ್ಪಿನ್ನರ್ ನಥನ್ ಲಿಯಾನ್ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ನಾಯಕ ಫಿಂಚ್ ಕೂಡ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.