ಕ್ವೀನ್ಸ್ಲ್ಯಾಂಡ್ : ಭಾರತ ಮಹಿಳಾ ತಂಡ ಕೊನೆಯ ಟಿ20 ಪಂದ್ಯದಲ್ಲಿ 14 ರನ್ಗಳಿಂದ ಪರಾಭವಗೊಳ್ಳುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ಸೋಲು ಕಂಡಿದೆ. ಜೊತೆಗೆ ಬಹುಮಾದರಿ ಸರಣಿಯನ್ನು 11-5 ಅಂಕಗಳ ಅಂತರದಿಂದ ಕಳೆದುಕೊಂಡಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು 2-1ರಲ್ಲಿ ಸೋಲು ಕಂಡಿದ್ದ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಡ್ರಾ ಸಾಧಿಸಿತ್ತು. ಇದೀಗ ಟಿ20 ಸರಣಿಯನ್ನ 2-0 ಅಂತರದಲ್ಲಿ ಕಳೆದುಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 20 ಓವರ್ಗಳಲ್ಲಿ 149 ರನ್ಗಳಿಸಿತ್ತು. ಬೆತ್ ಮೂನಿ 43 ಎಸೆತಗಳಲ್ಲಿ 10 ಬೌಂಡರಿ ಸಹಿತ 61 ಹಾಗೂ ತಹಿಲಾ ಮೆಕ್ಗ್ರಾತ್ ಅಜೇಯ 44 ರನ್ಗಳಿಸಿದ್ದರು.
-
India fall short by 14 runs in their chase of 150 in the final T20I.
— ICC (@ICC) October 10, 2021 " class="align-text-top noRightClick twitterSection" data="
The multi-format series ends 11 points to 5 in favour of Australia 👏#AUSvIND | https://t.co/V2sEcMWQVY pic.twitter.com/GU5VnAubm6
">India fall short by 14 runs in their chase of 150 in the final T20I.
— ICC (@ICC) October 10, 2021
The multi-format series ends 11 points to 5 in favour of Australia 👏#AUSvIND | https://t.co/V2sEcMWQVY pic.twitter.com/GU5VnAubm6India fall short by 14 runs in their chase of 150 in the final T20I.
— ICC (@ICC) October 10, 2021
The multi-format series ends 11 points to 5 in favour of Australia 👏#AUSvIND | https://t.co/V2sEcMWQVY pic.twitter.com/GU5VnAubm6
150 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 136 ರನ್ಗಳಿಸಲಷ್ಟೇ ಶಕ್ತವಾಗಿ 14 ರನ್ಗಳಿಂದ ಸೋಲುಂಡಿತು. ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ 52 ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳು ಆಸೀಸ್ ದಾಳಿಯನ್ನು ಸಮರ್ಥವಾಗಿ ಎದರಿಸುವಲ್ಲಿ ವಿಫಲರಾದರು.
ಜಮೀಮಾ ರೋಡ್ರಿಗಸ್ 26 ಎಸೆತಗಳನ್ನ ಎದುರಿಸಿ ಕೇವಲ 23 ರನ್ಗಳಿಸಿದರೆ, ಶೆಫಾಲಿ 1, ಹರ್ಮನ್ಪ್ರೀತ್ ಕೌರ್ 13, ಪೂಜಾ ವಸ್ತ್ರಾಕರ್ 5, ರಿಚಾ ಘೋಷ್ 23 ರನ್ಗಳಿಸಿದರು.
ಆಸ್ಟ್ರೇಲಿಯಾ ಪರ ನಿಕೋಲ ಕ್ಯಾರಿ 42ಕ್ಕೆ 2, ಅನಾಬೆಲ್ ಸುದರ್ಲೆಂಡ್ 13ಕ್ಕೆ1, ವಾರೆಮ್15ಕ್ಕೆ 1 ಹಾಗೂ ಗಾರ್ಡ್ನರ್ 22ಕ್ಕೆ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಎರಡೂ ಇನ್ನಿಂಗ್ಸ್ನಲ್ಲಿ ಉತ್ತಮ ಆಲ್ರೌಂಡ್ ಪ್ರದರ್ಶನ ತೋರಿದ ತಹಿಲಾ ಮೆಕ್ಗ್ರಾತ್ ಸರಣಿ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನು ಓದಿ:ಶಿಖಾ ಪಾಂಡೆ ಸ್ವಿಂಗ್ಗೆ ಅಲಿಸಾ ಹೀಲಿ ಕ್ಲೀನ್ ಬೌಲ್ಡ್.. ಇದು ಶತಮಾನದ ಎಸೆತ ಎಂದ ನೆಟ್ಟಿಗರು!