ETV Bharat / sports

WTCಯಲ್ಲಿ ಕಿವೀಸ್​ಗಿಂತ ಅತ್ಯುತ್ತಮ ತಂಡ ಭಾರತ.. ದಾಖಲೆಗಳು ಹೀಗಿವೆ ನೋಡಿ

ದಾಖಲೆಗಳನ್ನು ನೋಡಿದರೆ ಭಾರತ ತಂಡವೇ ಮೇಲುಗೈ ಸಾಧಿಸಿದೆ. ಆದರೆ, ಕಿವೀಸ್​ ಮತ್ತು ಇಂಗ್ಲೆಂಡ್​ ಪಿಚ್​ಗಳು ಹೆಚ್ಚು ಕಡಿಮೆ ಒಂದೇ ರೀತಿ ಇರುವುದರಿಂದ ಭಾರತಕ್ಕಿಂತ ನ್ಯೂಜಿಲ್ಯಾಂಡ್​ ತಂಡಕ್ಕೆ WTC ಗೆಲ್ಲುವ ಅವಕಾಶ ಇದೆ ಎಂದು ಬ್ರೆಟ್​ ಲೀ, ಗ್ಲೇನ್ ಟರ್ನರ್​ ಅಂತಹ ಮಾಜಿ ಕ್ರಿಕೆಟರ್‌ಗಳು ಅಭಿಪ್ರಾಯ ಪಟ್ಟಿದ್ದಾರೆ..

author img

By

Published : Jun 9, 2021, 5:02 PM IST

WTC ಫೈನಲ್
WTC ಫೈನಲ್

ಸೌತಾಂಪ್ಟನ್ : ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಜೂನ್ 18ರಂದು ನಡೆಯುವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ನಡೆಯುತ್ತಿರುವ WTCಯಲ್ಲಿ ವಿರಾಟ್​ ಕೊಹ್ಲಿ ಪಡೆ ಪ್ರಾಬಲ್ಯಯುತ ಪ್ರದರ್ಶನ ತೋರಿದೆ. ವಿದೇಶದಲ್ಲಿ ಆಡಿದ 3 ಸರಣಿಗಳಲ್ಲಿ 2ರಲ್ಲಿ ಗೆದ್ದಿದ್ದರೆ, ಪ್ರತಿಸ್ಪರ್ಧಿ ನ್ಯೂಜಿಲ್ಯಾಂಡ್​ 2 ವಿದೇಶಿ ಸರಣಿಯಲ್ಲಿ ಕೇವಲ ಒಂದೇ ಒಂದು ಪಂದ್ಯ ಮಾತ್ರ ಗೆದ್ದಿದೆ. ಗೆದ್ದಿರುವ ಮೂರು ಸರಣಿಗಳು ತವರಿನಲ್ಲಿ ನಡೆದಿವೆ ಎನ್ನುವುದು ಗಮನಾರ್ಹ ಸಂಗತಿ.

WTCಯಲ್ಲಿ 2019-21ರ ಅವಧಿಯಲ್ಲಿ ನ್ಯೂಜಿಲ್ಯಾಂಡ್ ತನ್ನ ನೆಲದಲ್ಲಿ ಭಾರತ, ಪಾಕಿಸ್ತಾನ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧ ಸರಣಿ ಗೆದ್ದಿದೆ. ಇದೇ ಅವರನ್ನು ಫೈನಲ್​ ಪ್ರವೇಶಿಸುವಂತೆ ಮಾಡಿದೆ. ಆದರೆ, ವಿಲಿಯಮ್ಸನ್​ ಪಡೆ WTCಯಲ್ಲಿ ಕಳಪೆ ಆರಂಭ ಪಡೆದಿತ್ತು. ಮೊದಲು 2019ರ ಶ್ರೀಲಂಕಾ ಪ್ರವಾಸದಲ್ಲಿ 1-1ರಲ್ಲಿ ಡ್ರಾ ಸಾಧಿಸಿದರೆ, ನಂತರ 2019-20ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ 0-3ರಲ್ಲಿ ಹೀನಾಯ ಸೋಲು ಕಂಡಿತ್ತು.

ಆದರೆ, ಭಾರತ ತಂಡದ 2019ರಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ 2-0ಯಲ್ಲಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅದ್ಭುತವಾಗಿ ತನ್ನ ಅಭಿಯಾನವನ್ನು ಆರಂಭಿಸಿತ್ತು. ನಂತರ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0, ಬಾಂಗ್ಲಾದೇಶದ ವಿರುದ್ಧ 2-0 ಗೆದ್ದರೆ, ಕಿವೀಸ್​ನಲ್ಲಿ 0-2ರಲ್ಲಿ ಸೋಲು ಕಂಡಿತ್ತು.

ಕೋವಿಡ್ ವಿರಾಮದ ನಂತರ ಆಸ್ಟ್ರೇಲಿಯಾದಲ್ಲಿ ಆಸೀಸ್ ತಂಡದ ವಿರುದ್ಧ 4 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದು ದಾಖಲೆ ಬರೆದರೆ ಮತ್ತೆ ತವರಿನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಗೆದ್ದು ಅಗ್ರಸ್ಥಾನಿಯಾಗಿ ಫೈನಲ್​ ಪ್ರವೇಶ ಪಡೆದಿದೆ.

ದಾಖಲೆಗಳನ್ನು ನೋಡಿದರೆ ಭಾರತ ತಂಡವೇ ಮೇಲುಗೈ ಸಾಧಿಸಿದೆ. ಆದರೆ, ಕಿವೀಸ್​ ಮತ್ತು ಇಂಗ್ಲೆಂಡ್​ ಪಿಚ್​ಗಳು ಹೆಚ್ಚು ಕಡಿಮೆ ಒಂದೇ ರೀತಿ ಇರುವುದರಿಂದ ಭಾರತಕ್ಕಿಂತ ನ್ಯೂಜಿಲ್ಯಾಂಡ್​ ತಂಡಕ್ಕೆ WTC ಗೆಲ್ಲುವ ಅವಕಾಶ ಇದೆ ಎಂದು ಬ್ರೆಟ್​ ಲೀ, ಗ್ಲೇನ್ ಟರ್ನರ್​ ಅಂತಹ ಮಾಜಿ ಕ್ರಿಕೆಟರ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ಟೂರ್ನಿಯುದ್ದಕ್ಕೂ ಮತ್ತು ಆಸ್ಟ್ರೇಲಿಯಾದಲ್ಲಿ ಆದ್ಭುತ ಪ್ರದರ್ಶನ ತೋರಿರುವ ಭಾರತ ತಂಡವನ್ನು ಮಣಿಸುವುದು ನಮ್ಮ ತಂಡಕ್ಕೆ ದೊಡ್ಡ ಸವಾಲು ಎಂದು ಸ್ಪಿನ್ನರ್​ ಇಶ್​ ಸೋಧಿ ಅಭಿಪ್ರಾಯ ಪಟ್ಟಿದ್ದಾರೆ.

ದಾಖಲೆಗಳು ಭಾರತದ ಪರವಾಗಿದ್ದರೆ, ಇಂಗ್ಲೆಂಡ್ ಪರಿಸ್ಥಿತಿ ಕಿವೀಸ್​ ಪರವಾಗಿವೆ. ಆದರೆ, ಭಾರತ ತಂಡ ಆಸ್ಟ್ರೇಲಿಯಾದಲ್ಲಿ ನೀಡಿದ ಪ್ರದರ್ಶನವನ್ನು ಮರುಕಳಿಸಿದರೆ ನಿಜಕ್ಕೂ ಚೊಚ್ಚಲ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಗೆಲ್ಲುವುದು ಅಸಾಧ್ಯವೇನಲ್ಲ.

ಇದನ್ನು ಓದಿ:WTC ಫೈನಲ್​​​ಗೆ ಕಿವೀಸ್​​ ತಯಾರಿ : 2ನೇ ಟೆಸ್ಟ್​ ಪಂದ್ಯದಿಂದ ಪ್ರಮುಖ ಆಟಗಾರರ ಕೈಬಿಡಲು ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.