ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟರ್ ಕನ್ನಡತಿ ವನಿತಾ ವಿ.ಆರ್. ಸೋಮವಾರ ತಮ್ಮ ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 31 ವರ್ಷದ ವನಿತಾ ಕುಟುಂಬಸ್ಥರು, ಸ್ನೇಹಿತರು, ಕೋಚ್ಗಳು ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗೆ ಧನ್ಯವಾದ ಅರ್ಪಿಸಿ ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ 19 ವರ್ಷದ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
-
And this lovely innings comes to an END ! pic.twitter.com/ZJw9ieXHSO
— Vanitha VR || ವನಿತಾ.ವಿ.ಆರ್ (@ImVanithaVR) February 21, 2022 " class="align-text-top noRightClick twitterSection" data="
">And this lovely innings comes to an END ! pic.twitter.com/ZJw9ieXHSO
— Vanitha VR || ವನಿತಾ.ವಿ.ಆರ್ (@ImVanithaVR) February 21, 2022And this lovely innings comes to an END ! pic.twitter.com/ZJw9ieXHSO
— Vanitha VR || ವನಿತಾ.ವಿ.ಆರ್ (@ImVanithaVR) February 21, 2022
ಕರ್ನಟಕ ತಂಡದ ಪರ ಡೊಮೆಸ್ಟಿಕ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವನಿತಾ, ಕೆಲ ಕಾಲ ಬೆಂಗಾಲ್ ತಂಡದ ಪರವೂ ಆಡಿದ್ದರು. 2014ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು, ರಾಷ್ಟ್ರೀಯ ತಂಡದ ಪರ 6 ಏಕದಿನ ಮತ್ತು 16 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 85 ಮತ್ತು 216 ರನ್ಗಳಿಸಿದ್ದಾರೆ.
ಇದನ್ನೂ ಓದಿ:ವೃದ್ಧಿಮಾನ್ ಸಹಾಗೆ ಪತ್ರಕರ್ತನಿಂದ ಬೆದರಿಕೆ, ಹೆಸರು ಬಹಿರಂಗಪಡಿಸುವಂತೆ ಬಿಸಿಸಿಐ ಸೂಚನೆ