ETV Bharat / sports

West Indies vs India, 1st ODI: ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಮಣಿಸಿದ ಭಾರತ - ಈಟಿವಿ ಭಾರತ ಕನ್ನಡ

ಭಾರತ-ವೆಸ್ಟ್​ ಇಂಡೀಸ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.

ವಿಂಡೀಸ್ ವಿರುದ್ಧ ಭಾರತಕ್ಕೆ 5ವಿಕೆಟ್​ಗಳ ಜಯ
ವಿಂಡೀಸ್ ವಿರುದ್ಧ ಭಾರತಕ್ಕೆ 5ವಿಕೆಟ್​ಗಳ ಜಯ
author img

By

Published : Jul 28, 2023, 8:12 AM IST

ಬಾರ್ಬಡೋಸ್​: ಭಾರತ ಮತ್ತು ವೆಸ್ಟ್​ ಇಂಡೀಸ್ ​ನಡುವಿನ 3 ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್​ಗಳಿಂದ ಗೆದ್ದಿದೆ. ಇಲ್ಲಿಯ ಬ್ರಿಡ್ಜ್​​ಟೌನ್‌ ಓವೆಲ್​ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ​ಭಾರತದ ಸ್ಪಿನ್​​ ದಾಳಿಗೆ ತತ್ತರಿಸಿದ ವಿಂಡೀಸ್ 114 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಭಾರತ 23 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 118 ರನ್​ಗಳಿಸಿ ಜಯಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ರಿಂದ ಮುನ್ನಡೆ ಗಳಿಸಿದೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ವಿಂಡೀಸ್ 45 ರನ್​ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟೆಸ್ಟ್‌ ಬಳಿಕ ತಂಡದ ಬ್ಯಾಟರ್‌ಗಳು ಏಕದಿನ ಸರಣಿಯಲ್ಲೂ ಕಳಪೆ ಪ್ರದರ್ಶನ ಮುಂದುವರೆಸಿದರು. ಆರಂಭದ ಏಳು ಓವರ್​​ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಆಟಗಾರರು ನಂತರ ಭಾರತದ ಸ್ಪಿನ್ನರ್​ಗಳ ದಾಳಿಗೆ ಸಿಲುಕಿ ನಲುಗಿದರು. 7.4 ಓವರ್‌ಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ 45 ರನ್‌ಗಳನ್ನು ಕಲೆ ಹಾಕಿದ್ದ ವಿಂಡೀಸ್ ಉತ್ತಮ ಸ್ಕೋರ್​ ಗಳಿಸಲಿದೆ ಎಂದು ಒಂದು ಹಂತದಲ್ಲಿ ಅಂದಾಜಿಸಲಾಗಿತ್ತು.

ಆದರೆ, ವೇಗಿ ಮುಕೇಶ್​ ಕುಮಾರ್ ಅವರು ತಮ್ಮ ಕರಾರುವಾಕ್ ಬೌಲಿಂಗ್‌ ಮೂಲಕ ಅಥನ್ಜೆ (22), ಬ್ರಾಂಡನ್ ಕಿಂಗ್ (17) ಅವರ ವಿಕೆಟ್​ ಪಡೆಯುವ ಮೂಲಕ ಕೆರಿಬಿಯನ್ನರ ರನ್‌ ಬೇಟೆಗೆ ಕಡಿವಾಣ ಹಾಕಿದರು. ಶಾಹಿ ಹೋಪ್​ ಮತ್ತು ಹೆಟ್ಮಾಯರ್​ ಕೆಲಕಾಲ ಕ್ರೀಸ್​ನಲ್ಲಿ ಉತ್ತಮ ಇನ್ನಿಂಗ್ಸ್​ ಕಟ್ಟಲು ಪ್ರಯತ್ನಿಸಿದರು. ಜಡೇಜಾ ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಅವರೂ ಹೊರ ನಡೆದರು. ಇಲ್ಲಿಂದ ವಿಂಡೀಸ್​ ಒಂದರ ಹಿಂದೊಂದಂತೆ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ಜಡೇಜಾ, ಕುಲ್ದೀಪ್ ಬಿಗು ಬೌಲಿಂಗ್​ ದಾಳಿಗೆ ಸಿಲುಕಿದ ವಿಂಡೀಸ್​ 26 ರನ್​ಗಳಲ್ಲಿ 7 ವಿಕೆಟ್​ಗಳನ್ನು ಕಳೆದುಕೊಂಡು ದಿಢೀರ್ ಅಲ್ಪಮೊತ್ತಕ್ಕೆ ಕುಸಿಯಿತು. ​​ನಾಯಕ ಶೈ ಹೋಪ್ (45 ಎಸೆತಗಳಲ್ಲಿ 43; 4 ಬೌಂಡರಿ, 1 ಸಿಕ್ಸರ್) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕನಿಷ್ಠ 25 ಓವರ್​ಗಳನ್ನೂ ಪೂರೈಸದೇ ವಿಂಡೀಸ್ 23 ಓವರ್​ಗಳಲ್ಲಿ 114 ರನ್​ಗಳಿಸಲಷ್ಟೇ ಶಕ್ತವಾಯಿತು. ​

7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್‌: ಈ ಅಲ್ಪಮೊತ್ತದ ಗುರಿ ಪಡೆದ ಭಾರತ ಬ್ಯಾಟಿಂಗ್​ ಕ್ರಮಾಂಕದಲ್ಲಿ ಬದಲಾವಣೆ ಮಾಡಿತ್ತು. ರೋಹಿತ್​ ಬದಲಿಗೆ ಇಶಾನ್​ ಕಿಶನ್​ ಮತ್ತು ಶುಭ್​ಮನ್​ಗಿಲ್ ಆರಂಭಿಕರಾಗಿ ಕಣಕ್ಕಿಳಿದರು. ಶುಭಮನ್ ಗಿಲ್ (7) ಜೈಡೆನ್​ ಎಸೆತದಲ್ಲಿ ​ವಿಕೆಟ್​ ಒಪ್ಪಿಸುವ ಮೂಲಕ ಮತ್ತೊಮ್ಮೆ ಉತ್ತಮ ಸ್ಕೋರ್​ ಗಳಿಸುವಲ್ಲಿ ವಿಫಲರಾದರು. ಸೂರ್ಯಕುಮಾರ್ ಯಾದವ್ ಸಹ ಏಕದಿನದಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದ್ದು, 19 ರನ್ ಗಳಿಸಿ ಮೋತಿಗೆ ವಿಕೆಟ್​ ನೀಡಿ ಪೆವಿಲಿಯನ್​ ಸೇರಿದರು. ಉಳಿದಂತೆ ಹಾರ್ದಿಕ್ ಪಾಂಡ್ಯ (5), ಶಾರ್ದೂಲ್ ಠಾಕೂರ್ (1), ರವೀಂದ್ರ ಜಡೇಜಾ (16 ಅಜೇಯ), ನಾಯಕ ರೋಹಿತ್ ಶರ್ಮಾ (12 ಅಜೇಯ) ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ 52 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಇದರೊಂದಿಗೆ ವೆಸ್ಟ್​ ಇಂಡೀಸ್​ ವಿರುದ್ದ ಏಕದಿನ ಪಂದ್ಯಗಳಲ್ಲಿ ಭಾರತ ಸತತ 9ನೇ ಗೆಲುವು ಗಳಿಸಿತು.

ಸಂಕ್ಷಿಪ್ತ ಸ್ಕೋರ್​ ಕಾರ್ಡ್ -​ ವೆಸ್ಟ್​ ಇಂಡೀಸ್:​ ಬ್ರಂಡನ್ ​ಕಿಂಗ್ (17), ಅಲಿಕ್​ ಅಥನ್ಜೆ (22), ಶಾಹಿ ಹೋಪ್​ (43)

ಬೌಲಿಂಗ್​ : ಕುಲ್ದೀಪ್​ ಯಾದವ್​ (6/4), ಜಡೇಜಾ (37/3), ಹಾರ್ದಿಕ್​​ ಪಾಂಡ್ಯಾ, ಶಾರ್ದೂಲ್​, ಮುಕೇಶ್​ ಕುಮಾರ್​ ತಲಾ ಒಂದು ವಿಕೆಟ್

ಭಾರತ : ಇಶಾನ್​ ಕಿಶನ್​ (52), ಸೂರ್ಯಕುಮಾರ್​ ಯಾದವ್​ (19), ಜಡೇಜಾ (16)

ಬೌಲಿಂಗ್​ : ಗುಡಕೇಶ್​ ಮೋತಿ (26/2), ಜೈಡೇನ್​ ಯಾನ್ನಿಕಾ ತಲಾ ಒಂದು ವಿಕೆಟ್​

ಇದನ್ನೂ ಓದಿ: 4 ರಾಷ್ಟ್ರಗಳ ಪಂದ್ಯಾವಳಿ: ಭಾರತ ಜೂನಿಯರ್​ ಪುರುಷರ ಹಾಕಿ ತಂಡ ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.