ETV Bharat / sports

ಅಯ್ಯರ್​ ಹ್ಯಾಟ್ರಿಕ್ ಫಿಫ್ಟಿ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಕ್ಲೀನ್​ ಸ್ವೀಪ್ ಸಾಧಿಸಿದ ರೋಹಿತ್ ಪಡೆ - ಟಿ20 ಸರಣಿ ಕ್ಲೀನ್ ಸ್ವೀಪ್​

ಕೊನೆಯ ಟಿ20 ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 147 ರನ್​ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 16.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0ಯಲ್ಲಿ ವಶಪಡಿಸಿಕೊಂಡಿತು.

ಶ್ರೀಲಂಕಾ ವಿರುದ್ಧ ಟಿ20 ಸರಣಿ ಕ್ಲೀನ್​ ಸ್ವೀಪ್ ಸಾಧಿಸಿದ ರೋಹಿತ್ ಪಡೆ

author img

By

Published : Feb 27, 2022, 10:39 PM IST

ಧರ್ಮಶಾಲಾ: ಶ್ರೇಯಸ್​ ಅಯ್ಯರ್​ ಅವರ ಅಮೋಘ ಅರ್ಧಶತಕದ ನೆರವಿನಿಂದ ಭಾರತ ತಂಡ ಕೊನೆಯ ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದು ಟಿ20 ಸರಣಿಯನ್ನು 3-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.

ಕೊನೆಯ ಟಿ20 ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 147 ರನ್​ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 16.5 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 3-0ಯಲ್ಲಿ ವಶಪಡಿಸಿಕೊಂಡಿತು.

ತಮ್ಮ ಅಮೋಘ ಫಾರ್ಮ್​ ಮುಂದುವರಿಸಿದ ಶ್ರೇಯಸ್​ ಅಯ್ಯರ್​ 45 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 73 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಜಡೇಜಾ 15 ಎಸೆತಗಳಲ್ಲಿ ಅಜೇಯ 22 ರನ್​ಗಳಿಸಿದರು.

ಆರಂಭಿಕರಾಗಿ ಬಡ್ತಿ ಪಡೆದಿದ್ದ ಸಂಜು ಸಾಮ್ಸನ್​ 18, ರೋಹಿತ್ ಶರ್ಮಾ 5, ದೀಪಕ್ ಹೂಡ 21 ಮತ್ತು ವೆಂಕಟೇಶ್​ ಅಯ್ಯರ್ 5 ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಶ್ರೀಲಂಕಾ ಪರ ಲಹಿರು ಕುಮಾರ 32ಕ್ಕೆ 2, ಚಮಿಕಾ ಕರುಣರತ್ನೆ 31ಕ್ಕೆ1, ದುಷ್ಮಂತ ಚಮೀರಾ 19ಕ್ಕೆ1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್​ ಗೆದ್ದ ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 146 ರನ್​ಗಳಿಸಿದ್ದರು. ಶನಕ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಿತ 74 ರನ್​ಗಳಿಸಿದ್ದರು.

ಭಾರತದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಆವೇಶ್ ಖಾನ್​ 23ಕ್ಕೆ 2, ರವಿ ಬಿಷ್ಣೋಯ್​ 32ಕ್ಕೆ1, ಹರ್ಷಲ್ ಪಟೇಲ್ 29ಕ್ಕೆ1, ಮೊಹಮ್ಮದ್ ಸಿರಾಜ್ 22ಕ್ಕೆ1 ವಿಕೆಟ್​ ಪಡೆದರು.

ಇದನ್ನೂ ಓದಿ: ಕೌರ್ ಶತಕ; ಅಭ್ಯಾಸ ಪಂದ್ಯದಲ್ಲಿ ದ. ಆಫ್ರಿಕಾ ವಿರುದ್ಧ ಭಾರತ ವನಿತೆಯರಿಗೆ 2 ರನ್​ಗಳ ರೋಚಕ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.