ಬೆಂಗಳೂರು: ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯವನ್ನು 238ರನ್ಗಳಿಂದ ಗೆಲುವು ಸಾಧಿಸಿ, ಸರಣಿಯನ್ನು 2-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಭಾರತ ನೀಡಿದ್ದ 447 ರನ್ಗಳ ಗುರಿ ಬೆನ್ನತ್ತಿದ ಪ್ರವಾಸಿ ಶ್ರೀಲಂಕಾ ತಂಡ ಕೇವಲ 208ರನ್ಗಳಿಗೆ ಆಲೌಟ್ ಆಗುವ ಮೂಲಕ ಮತ್ತೊಂದು ಹೀನಾಯ ಸೋಲಿಗೆ ತುತ್ತಾಯಿತು.
ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಮೊದಲ ಓವರ್ನಲ್ಲೇ ಲಹಿರು ತಿರಿಮನ್ನೆ(0) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. 2ನೇ ದಿನದಂತ್ಯಕ್ಕೆ 7 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 28 ರನ್ಗಳಿಸಿದ್ದ ಪ್ರವಾಸಿ ತಂಡ, 3ನೇ ದಿನವಾದ ಇಂದು 2ನೇ ವಿಕೆಟ್ಗೆ 97 ರನ್ ಸೇರಿಸಿತು. 60 ಎಸೆತಗಳಲ್ಲಿ 8ಬೌಂಡರಿ ಸಹಿತ 54 ರನ್ಗಳಿಸಿದ್ದ ಕುಸಾಲ್ ಮೆಂಡಿಸ್ ಔಟಾಗುತ್ತಿದ್ದಂತೆ ಲಂಕಾ ತಂಡದ ಪತನ ಆರಂಭವಾಯಿತು.
-
CLEAN SWEEP COMPLETE 💥
— ICC (@ICC) March 14, 2022 " class="align-text-top noRightClick twitterSection" data="
A clinical India prove to be too strong for Sri Lanka, winning the second Test by 238 runs in Bengaluru.#WTC23 | #INDvSL | https://t.co/g6fD3n4ID2 pic.twitter.com/4URHMdFsjU
">CLEAN SWEEP COMPLETE 💥
— ICC (@ICC) March 14, 2022
A clinical India prove to be too strong for Sri Lanka, winning the second Test by 238 runs in Bengaluru.#WTC23 | #INDvSL | https://t.co/g6fD3n4ID2 pic.twitter.com/4URHMdFsjUCLEAN SWEEP COMPLETE 💥
— ICC (@ICC) March 14, 2022
A clinical India prove to be too strong for Sri Lanka, winning the second Test by 238 runs in Bengaluru.#WTC23 | #INDvSL | https://t.co/g6fD3n4ID2 pic.twitter.com/4URHMdFsjU
ನಂತರ ಬಂದತಂಗಹ ಮ್ಯಾಥ್ಯೂಸ್(1), ಧನಂಜಯ ಡಿ ಸಿಲ್ವಾ(4), ನಿರೋಷನ್ ಡಿಕ್ವೆಲ್ಲಾ(12), ಅಸಲಂಕಾ(5), ಎಂಬುಲ್ದೇನಿಯಾ(2), ಸುರಂಗ ಲಕ್ಮಲ್(1) ವಿಶ್ವ ಫರ್ನಾಂಡೊ(2) ಭಾರತೀಯ ಬೌಲರ್ಗಳ ದಾಳಿಗೆ ಉತ್ತರಿಸಲಾಗದೆ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆದರೆ ನಾಯಕ ದಿಮುತ್ ಕರುಣರತ್ನೆ ಏಕಾಂಗಿ ಹೋರಾಟ ನಡೆಸಿ ವೃತ್ತಿ ಜೀವನದ 14ನೇ ಶತಕ ಸಿಡಿಸಿದರು. ಅವರು 174 ಎಸೆತಗಳಲ್ಲಿ 15 ಬೌಂಡರಿ ಸಹಿತ 107ರನ್ಗಳಿಸಿ ಬುಮ್ರಾ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಇವರು ವಿಕೆಟ್ ಒಪ್ಪಿಸಿದ 4 ರನ್ ಅಂತದಲ್ಲಿ ಲಂಕಾ ತಂಡ ಕೊನೆಯ 4 ವಿಕೆಟ್ ಕಳೆದುಕೊಂಡಿತು.
ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 55ಕ್ಕೆ 4, ಜಸ್ಪ್ರೀತ್ ಬುಮ್ರಾ 23ಕ್ಕೆ3, ಅಕ್ಷರ್ ಪಟೇಲ್ 37ಕ್ಕೆ2, ಮತ್ತು ಜಡೇಜಾ 48ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ ಅವರ 92 ರನ್ಗಳ ನೆರವಿನಿಂದ 252 ರನ್ಗಳಿಸಿದರೆ, ಇದಕ್ಕುತ್ತರವಾಗಿ ಶ್ರೀಲಂಕಾ 109ರನ್ಗಳಿಸಿತ್ತು. 2ನೇ ಇನ್ನಿಂಗ್ಸ್ನಲ್ಲಿ ಭಾರತ 303ರನ್ಗಳಿಸಿ ಡಿಕ್ಲೇರ್ ಘೋಷಿಸಿ 447ರನ್ಗಳ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ:ಆಸೀಸ್ ವಿರುದ್ಧ ತವರಿನಲ್ಲೇ ಮುಖಭಂಗ ಅನುಭವಿಸಿದ ಪಾಕ್.. 148ಕ್ಕೆ ಆಲೌಟ್, 408 ರನ್ಗಳ ಬೃಹತ್ ಹಿನ್ನಡೆ..