ETV Bharat / sports

ಬೆಂಗಳೂರಿನಲ್ಲಿ ಭಾರತ-ಅಫ್ಘಾನಿಸ್ತಾನ 'ಸೂಪರ್' ಟಿ20: ಸರಣಿ ಸ್ವೀಪ್‌ ಮಾಡಿದ ರೋಹಿತ್ ಟೀಂ

author img

By ETV Bharat Karnataka Team

Published : Jan 18, 2024, 8:08 AM IST

IND vs AFG T20 Series: ರೋಚಕ ಸೂಪರ್​ ಓವರ್ ಕಾದಾಟದಲ್ಲಿ ಗೆದ್ದ ಟೀಂ ಇಂಡಿಯಾವು ​​ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್​ ಸ್ವೀಪ್​ ಮಾಡುವಲ್ಲಿ ಯಶಸ್ವಿಯಾಗಿದೆ.

india-beat-afghanistan-in-2nd-super-over-clash-and-win-t20-series-by-3-0
ಅಫ್ಘನ್​ ವಿರುದ್ಧ ರಣರೋಚಕ ಸೂಪರ್​ ಓವರ್ಸ್​:​ 3-0 ಕ್ಲೀನ್​​ಸ್ವೀಪ್​ ಮಾಡಿದ ರೋಹಿತ್​ ಪಡೆ

ಬೆಂಗಳೂರು: ಎರಡನೇ ಸೂಪರ್ ​ಓವರ್​ ಹಣಾಹಣಿಯಲ್ಲಿ ರೋಚಕ ಜಯ ಸಾಧಿಸಿದ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್​ ಸ್ವೀಪ್​ ಮಾಡಿತು. 213 ರನ್‌ಗಳ ಬೃಹತ್​ ಮೊತ್ತದ ಗುರಿ ನಡುವೆಯೂ ಅಮೋಘ ಪ್ರದರ್ಶನ ತೋರಿದ ಅಫ್ಘನ್ನರು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಮೊದಲ ಸೂಪರ್​ ಓವರ್​​ ಫೈಟ್​ ಕೂಡ ಟೈ ಆಗಿದ್ದು, ಎರಡನೇ ಸೂಪರ್​ ಓವರ್​ ಹೋರಾಟದಲ್ಲಿ ಭಾರತ 10 ರನ್​ ಜಯಭೇರಿ ಬಾರಿಸಿತು.

213 ರನ್​ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ರಹಮತುಲ್ಲಾ ಗುರ್ಬಾಜ್ (50)​ ಹಾಗೂ ನಾಯಕ ಇಬ್ರಾಹಿಂ ಜದ್ರಾನ್ (50)​ ತಲಾ ಅರ್ಧಶತಕ ಬಾರಿಸಿ 11 ಓವರ್​ಗಳಲ್ಲಿ 93 ರನ್‌ಗಳೊಂದಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಗುರ್ಬಾಜ್ ವಿಕೆಟ್​ ಪತನದ ಬಳಿಕ ಕ್ರೀಸ್​ಗಿಳಿದ ಗುಲ್ಬದ್ದಿನ್​ ನೇಬ್ (55)​ ಅಜೇಯ ಆಟವಾಡುವ ಮೂಲಕ ಟೈ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

ನಾಯಕ ಇಬ್ರಾಹಿಂ 50 ರನ್​ಗೆ ಔಟಾಗಿದ್ದು, ಬಳಿಕ ಬಂದ ಅಜ್ಮತುಲ್ಲಾ ಓಮರ್ಜೈ ಶೂನ್ಯಕ್ಕೆ ಮರಳಿದರು. ತದನಂತರ ಅನುಭವಿ ಬ್ಯಾಟರ್​ ಮೊಹಮದ್​ ನಬಿ ಹಾಗೂ ಗುಲ್ಬದ್ದಿನ್​ ಆಕ್ರಮಣಕಾರಿ ಆಟದ ಮೂಲಕ ಪಂದ್ಯದ ರೋಚಕತೆ ಹೆಚ್ಚಿಸಿದರು. 16 ಎಸೆತಗಳಲ್ಲಿ 34 ರನ್​ ಸಿಡಿಸಿ ನಬಿ ಔಟಾದರು. ಆದರೆ, ಇನ್ನೊಂದೆಡೆ ಹೋರಾಟ ಮುಂದುವರೆಸಿದ ಗುಲ್ಬದ್ದಿನ್​ ಪಂದ್ಯವನ್ನು ಟೈ ಮಾಡುವಲ್ಲಿ ಯಶ ಕಂಡರು. 20ನೇ ಓವರ್​ನಲ್ಲಿ ಅಫ್ಘನ್​ ಗೆಲುವಿಗೆ 19 ರನ್​ ಅಗತ್ಯವಿತ್ತು. ನಿರ್ಣಾಯಕ ಓವರ್​ ಎಸೆದ ಮುಕೇಶ್​ 18 ರನ್​ ಬಿಟ್ಟುಕೊಟ್ಟಿದ್ದರಿಂದ ಪಂದ್ಯ ಟೈ ಆಗಿತ್ತು.

A tied match 😮
A tied Super Over 😱

India win the second Super Over to seal a 3-0 whitewash 🙌#INDvAFG 📝: https://t.co/DWK9Rn6PsN pic.twitter.com/gvQGEJVHMC

— ICC (@ICC) January 17, 2024

ಮೊದಲ ಸೂಪರ್​ ಓವರ್​: ಬಳಿಕ ಸೂಪರ್​ ಓವರ್​ನಲ್ಲೂ ಭಾರತಕ್ಕೆ ಪೈಪೋಟಿ ನೀಡಿದ ಅಫ್ಘಾನಿಸ್ತಾನ 16 ರನ್​ ಬಾರಿಸಿತು. ಮುಕೇಶ್​ ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲೇ ಗುಲ್ಬದ್ದಿನ್ 1 ರನ್‌ಗೆ ರನೌಟ್​ ಆದರು. ಬಳಿಕ ಗುರ್ಬಾಜ್​ ಒಂದು ಬೌಂಡರಿಯೊಂದಿಗೆ 5 ರನ್​ ಹಾಗೂ ನಬಿ ಸಿಕ್ಸರ್​ ಸಹಿತ 10 ರನ್​ ಸಿಡಿಸಿದರು. 17 ರನ್​ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್​ ಶರ್ಮಾ ಎರಡು ಸಿಕ್ಸರ್​ ಚಚ್ಚುವ ಮೂಲಕ ಗೆಲುವಿನ ಸಮೀಪಕ್ಕೆ ತಂದರು. 6ನೇ ಎಸೆತದಲ್ಲಿ 2 ರನ್​ ಬೇಕಿದ್ದಾಗ, ಯುವ ಬ್ಯಾಟರ್​ ಜೈಸ್ವಾಲ್​ ಒಂದೇ ರನ್​ ಗಳಿಸಿದ್ದರಿಂದ ಪಂದ್ಯ ಮತ್ತೆ ಟೈ ಆಯಿತು.

ಎರಡನೇ ಸೂಪರ್ ​ಓವರ್​: ಈ ಸಲ ಮೊದಲು ಬ್ಯಾಟ್​ ಮಾಡಿದ ಭಾರತ 11 ರನ್​ ಗಳಿಸಲಷ್ಟೇ ಶಕ್ತವಾಯಿತು. ರಿಂಕು ಸಿಂಗ್​ ಜೊತೆ ಬಂದ ರೋಹಿತ್, ಮೊದಲೆರಡು ಎಸೆತಗಳಲ್ಲೇ ತಲಾ ಸಿಕ್ಸರ್​, ಬೌಂಡರಿ ಸಿಡಿಸಿದರು. ಮೂರನೇ ಎಸೆತದಲ್ಲಿ ಒಂದು ರನ್​ ತೆಗೆದುಕೊಂಡರು. ಬಳಿಕ 4ನೇ ಬಾಲ್​ಗೆ ರಿಂಕು ಔಟಾದರು. ತದನಂತರ ಸಂಜು ಸ್ಯಾಮ್ಸನ್​ ಬಾಲ್​​ ಅಡುವಲ್ಲಿ ವಿಫಲರಾಗಿದ್ದು, ರನ್​ ಕದಿಯುವ ಭರದಲ್ಲಿ ರೋಹಿತ್​ ಗುರ್ಜಾಜ್ ಡೈರೆಕ್ಟ್​ ಹಿಟ್​​​ನಿಂದ​ ರನೌಟ್​ ಬಲೆಗೆ ಬಿದ್ದರು. ಇದರಿಂದ ಎರಡೂ ವಿಕೆಟ್​ ಕಳೆದುಕೊಂಡ ಭಾರತ ಅಫ್ಘನ್ನರಿಗೆ 12 ರನ್​ ಗುರಿ ನೀಡಿತು.

ಗೆಲುವು ತಂದ ರವಿ: ಈ ಬಾರಿ ಆಶ್ಚರ್ಯವೆಂಬಂತೆ ಯುವ ಸ್ಪಿನ್ನರ್​ ರವಿ ಬಿಷ್ಣೋಯಿ ಬೌಲಿಂಗ್‌ಗಿಳಿದರು. ಮೊದಲ ಎಸೆತದಲ್ಲೇ ಮೊಹಮದ್​ ನಬಿ ಲಾಂಗ್​ಆಫ್​ನಲ್ಲಿ ರಿಂಕುಗೆ ಕ್ಯಾಚಿತ್ತು ಔಟಾದರು. ಬಳಿಕ ಕ್ರೀಸ್​ಗೆ ಬಂದ ಜನತ್​ ಒಂದು ರನ್​ ತೆಗೆದುಕೊಂಡರು. ಆದರೆ ಮೂರನೇ ಎಸೆತದಲ್ಲೇ ಗುರ್ಬಾಜ್​ ಕೂಡ ರಿಂಕುಗೆ ಕ್ಯಾಚ್​ ನೀಡಿದ್ದರಿಂದ ಅಫ್ಘಾನಿಸ್ತಾನ ಸೋಲಿನೊಂದಿಗೆ ನಿರಾಸೆ ಅನುಭವಿಸಿತು. ಅಂತಿಮವಾಗಿ 10 ರನ್​ಗಳಿಂದ ಗೆದ್ದ ಟೀಂ ಇಂಡಿಯಾ 3-0 ಅಂತರದೊಂದಿಗೆ ಸರಣಿ ಎತ್ತಿಹಿಡಿಯಿತು.

ರೋಹಿತ್​-ರಿಂಕು ಅಬ್ಬರ: ಇದಕ್ಕೂ ಮುನ್ನ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ನಾಯಕ ರೋಹಿತ್​ ಶರ್ಮಾ ದಾಖಲೆಯ ಅಜೇಯ ಶತಕ (121, 69 ಎಸೆತ) ಹಾಗೂ ರಿಂಕು ಸಿಂಗ್​ ಅಜೇಯ ಅರ್ಧಶತಕ (69)ದ ಬಲದಿಂದ 212 ರನ್​ ಕಲೆಹಾಕಿತ್ತು. ಒಂದು ಹಂತದಲ್ಲಿ ಶರ್ಮಾ ಪಡೆ 22 ರನ್​ಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಯಶಸ್ವಿ 4, ವಿರಾಟ್​ 0, ಶಿವಂ ದುಬೆ 1 ಹಾಗೂ ಸ್ಯಾಮ್ಸನ್ ಶೂನ್ಯಕ್ಕೆ ಪೆವಿಲಿಯನ್​ ಪರೇಡ್​ ನಡೆಸಿದ್ದರು. ಬಳಿಕ ರೋಹಿತ್​-ರಿಂಕು ಜೋಡಿ 190 ರನ್​ಗಳ ಅಜೇಯ ದಾಖಲೆಯ ಜೊತೆಯಾಟವಾಡಿತ್ತು.

ಇದನ್ನೂ ಓದಿ: 3ನೇ ಟಿ20: ರೋಹಿತ್, ರಿಂಕು ಅಬ್ಬರ, ಅಫ್ಘಾನ್​ಗೆ 212 ರನ್​ಗಳ​ ಬೃಹತ್​ ಗುರಿ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.