ETV Bharat / sports

India Asia Cup 2023 Squad: ತಂಡಕ್ಕೆ ಮರಳಿದ ರಾಹುಲ್​, ಅಯ್ಯರ್​.. ಏಷ್ಯಾಕಪ್​ನಲ್ಲಿ ಏಕದಿನಕ್ಕೆ ತಿಲಕ್​ ಪದಾರ್ಪಣೆ - ETV Bharath Kannada news

India squad for AsiaCup: 17 ಜನ ಸದಸ್ಯರ ಏಷ್ಯಾಕಪ್​ನ ತಂಡವನ್ನು ಬಿಸಿಸಿಐಯ ಇಂದು ಪ್ರಕಟಿಸಿದ್ದು, ಗಾಯದಿಂದ ಚೇತರಿಸಿಕೊಂಡ ಅಯ್ಯರ್​, ರಾಹುಲ್​, ಬುಮ್ರಾ, ಪ್ರಸಿದ್ಧ್​ ಕೃಷ್ಣಾ ಸ್ಥಾನ ಪಡೆದುಕೊಂಡಿದ್ದಾರೆ.

India Asia Cup 2023 Squad
India Asia Cup 2023 Squad
author img

By

Published : Aug 21, 2023, 2:12 PM IST

Updated : Aug 21, 2023, 2:50 PM IST

ಹೈದರಾಬಾದ್​​: ವಿಶ್ವಕಪ್​ಗೂ ಮುನ್ನ ನಡೆಯಲಿರುವ ಏಷ್ಯಾ ರಾಷ್ಟ್ರಗಳ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಟ್ರೋಪಿ ಏಷ್ಯಾಕಪ್​ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಗಾಯದಿಂದ ಚೇತರಿಸಿಕೊಂಡ ಕೆ.ಎಲ್​. ರಾಹುಲ್​, ಶ್ರೇಯಸ್​ ಅಯ್ಯರ್​​, ಜಸ್ಪ್ರೀತ್​ ಬುಮ್ರಾ ಮತ್ತು ಪ್ರಸಿದ್ಧ ಕೃಷ್ಣ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ವೆಸ್ಟ್​ ಇಂಡೀಸ್​ ವಿರುದ್ಧ ಭಾರತ ಟಿ20 ತಂಡಕ್ಕೆ ಪದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ನೀಡಿದ 20 ವರ್ಷ ತಿಲಕ್​ ವರ್ಮಾ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವದ ನಂಬರ್ ಒನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಏಕದಿನ ಸ್ವರೂಪದಲ್ಲಿ ಅಷ್ಟು ಯಶಸ್ಸು ಕಂಡಿಲ್ಲವಾದರೂ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. 26 ಏಕದಿನ ಪಂದ್ಯಗಳನ್ನು ಆಡಿರುವ ಅವರು 24 ಇನ್ನಿಂಗ್ಸ್‌ಗಳಲ್ಲಿ ಅವರು ಎರಡು ಅರ್ಧಶತಕಗಳೊಂದಿಗೆ 24.33 ಸರಾಸರಿಯಲ್ಲಿ ಕೇವಲ 511 ರನ್‌ಗಳನ್ನು ಗಳಿಸಿದ್ದಾರೆ.

  • #WATCH | BCCI chief selector Ajit Agarkar announces Indian Men's Cricket team for Asia Cup 2023

    "Rohit Sharma (C), Shubman Gill, Virat Kohli, Shreyas Iyer, KL Rahul, Suryakumar Yadav, Tilak Varma, Ishan Kishan, Hardik Pandya (VC), Ravindra Jadeja, Shardul Thakur, Axar Patel,… pic.twitter.com/hG6Y6YkZQr

    — ANI (@ANI) August 21, 2023 " class="align-text-top noRightClick twitterSection" data=" ">

ವಿಕೆಟ್​ ಕೀಪರ್​ ಸ್ಥಾನಕ್ಕೆ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಗುಣಮುಖ ರಾಗಿ ತಂಡಕ್ಕೆ ಸೇರಿಕೊಂಡ ಕೆ. ಎಲ್. ರಾಹುಲ್​ ಮತ್ತು ಇಶಾನ್​ ಕಿಶನ್​ ಪ್ರಕಟವಾದ 17 ಜನರ ತಂಡದಲ್ಲಿ ಇದ್ದರೆ, ಸಂಜು ಸ್ಯಾಮ್ಸನ್ ಅವರನ್ನು ಟ್ರಾವೆಲಿಂಗ್ ಸ್ಟ್ಯಾಂಡ್-ಬೈ ಆಟಗಾರ ಎಂದು 18ನೇ ಪ್ಲೇಯರ್​ ಆಗಿ ಸೆಲೆಕ್ಟ್ ಆಗಿದ್ದಾರೆ. ಒಂದು ವೇಳೆ ಇಬ್ಬರು ಕೀಪರ್​ಗಳು ಅಲಭ್ಯರಾದಲ್ಲಿಇವರಿಗೆ ಸ್ಥಾನ ಸಿಗಲಿದೆ.

ಮರಳಿದ ಗಾಯಾಳುಗಳು: ಐರ್ಲೆಂಡ್​ ಪ್ರವಾಸದ ಮೂಲಕ ಜಸ್ಪ್ರೀತ್ ಬುಮ್ರಾ ಟಿ20ಗೆ ಮರಳಿದರು. ಅವರು ಇದೇ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಏಷ್ಯಾಕಪ್​ನಲ್ಲೂ ಆಡಲಿದ್ದಾರೆ. ಅವರ ಜೊತೆಗೆ ಪ್ರಸಿದ್ಧ ಕೃಷ್ಣಾ ಸಹ ತಂಡವನ್ನು ಸೇರಿಕೊಂಡಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಲೈನ್​ ಅಪ್​ ವೀಕ್​ ಎಂದು ಭಾಸವಾಗುತ್ತಿದ್ದ ತಂಡಕ್ಕೆ ಈಗ ಶ್ರೇಯಸ್​ ಅಯ್ಯರ್​ ಮತ್ತು ಕೆ ಎಲ್​ ರಾಹುಲ್​ ಮರಳಿದ್ದು ಬಲ ಬಂದಂತಾಗಿದೆ. ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಚೇತರಿಸಿಕೊಂಡ ಇಬ್ಬರು ಆಟಗಾರರು ಫಿಟ್​ ಆಗಿ ತಂಡಕ್ಕೆ ಮರಳಿದ್ದಾರೆ.

ತಿಲಕ್​ ಅಚ್ಚರಿಯ ಆಯ್ಕೆ: ಐಪಿಎಲ್​ ಆಟದ ಆಧಾರದಲ್ಲಿ ವೆಸ್ಟ್​ ಇಂಡೀಸ್​ ಟಿ20 ಸರಣಿಗೆ ಆಯ್ಕೆ ಆಗಿ ಉತ್ತಮ ಪ್ರದರ್ಶನ ನೀಡದ ತಿಲಕ್​ ವರ್ಮಾ ಏಷ್ಯಾಕಪ್​ನಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಲಿದ್ದಾರೆ. ವೆಸ್ಟ್​​ ಇಂಡೀಸ್​ ಪ್ರವಾಸದಲ್ಲಿ ತಿಲಕ್ ವರ್ಮಾ ಆಡಿದ 5 ಟಿ-20 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 173 ರನ್​ ಗಳಿಸಿ ಗಮನಾರ್ಹ ಬ್ಯಾಟಿಂಗ್​ ಮಾಡಿದ್ದರು. ಏಷ್ಯಾಕಪ್​ ನಂತರ ಆಸ್ಟ್ರೇಲಿಯಾ ಸರಣಿ ಮತ್ತು ವಿಶ್ವಕಪ್​ ಇರುವುದರಿಂದ ಇದೇ ತಂಡ ಹೆಚ್ಚು ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಟ್ರಾವೆಲಿಂಗ್ ಸ್ಟ್ಯಾಂಡ್-ಬೈ ಆಟಗಾರ: ಸಂಜು ಸ್ಯಾಮ್ಸನ್

ಇದನ್ನೂ ಓದಿ: ಭಾರತ VS ಐರ್ಲೆಂಡ್ 2ನೇ ಟಿ-20ಐ: ಗಾಯಕ್ವಾಡ್, ಬೌಲರ್‌ಗಳ ಅಬ್ಬರಕ್ಕೆ ಐರ್ಲೆಂಡ್ ತತ್ತರ, 33 ರನ್‌ಗಳಿಂದ ಗೆಲುವು.. ಸರಣಿ ವಶ

Last Updated : Aug 21, 2023, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.