ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ 12ರಿಂದ ನಡೆಯಲಿರುವ ಹೊನಲು ಬೆಳಕಿನ ಕ್ರಿಕೆಟ್ ಟೆಸ್ಟ್‌ನಲ್ಲಿ ಆಡಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳು ಈಗಾಗಲೇ ಸಿಲಿಕಾನ್ ಸಿಟಿಗೆ ಬಂದಿಳಿದಿದ್ದು, ಇಂದಿನಿಂದ ಅಭ್ಯಾಸ ಆರಂಭಿಸಿವೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಬಳಗ ಇನ್ನಿಂಗ್ಸ್ ಹಾಗೂ 222 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತ ಮೂರೇ ದಿನಗಳಲ್ಲಿ ಇನ್ನಿಂಗ್ಸ್ ಜಯ ಸಾಧಿಸಿದೆ. ಪಂದ್ಯ ಮೂರೇ ದಿನದಲ್ಲಿ ಅಂತ್ಯವಾಗಿದ್ದರಿಂದ ಎರಡು ದಿನ ಮೊಹಾಲಿಯಲ್ಲಿಯೇ ಉಳಿದ ಉಭಯ ತಂಡಗಳು, ಅಲ್ಲಿಯೇ ಪಿಂಕ್ ಬಾಲ್ ಬಳಸಿ ಅಭ್ಯಾಸ ಶುರು ಮಾಡಿದ್ದವು.
-
Mohali ✈️ Bengaluru
— BCCI (@BCCI) March 10, 2022 " class="align-text-top noRightClick twitterSection" data="
Pink-ball Test, here we come 🙌#TeamIndia | #INDvSL | @Paytm pic.twitter.com/9fK2czlEKu
">Mohali ✈️ Bengaluru
— BCCI (@BCCI) March 10, 2022
Pink-ball Test, here we come 🙌#TeamIndia | #INDvSL | @Paytm pic.twitter.com/9fK2czlEKuMohali ✈️ Bengaluru
— BCCI (@BCCI) March 10, 2022
Pink-ball Test, here we come 🙌#TeamIndia | #INDvSL | @Paytm pic.twitter.com/9fK2czlEKu
ಬುಧವಾರ ಖಾಸಗಿ ವಿಮಾನದ ಮೂಲಕ ಎರಡೂ ತಂಡಗಳ ಆಟಗಾರರು ಮತ್ತು ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ನಿನ್ನೆ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಆಟಗಾರರು ಇಂದು ಮತ್ತು ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಈ ವೇಳೆ, ಕಟ್ಟುನಿಟ್ಟಾದ ಕೋವಿಡ್ ಬಯೋಬಬಲ್ ನಿಯಮ ಜಾರಿ ಮಾಡಲಾಗಿದೆ ಎಂದು ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ) ತಿಳಿಸಿದೆ.
- — BCCI (@BCCI) March 9, 2022 " class="align-text-top noRightClick twitterSection" data="
— BCCI (@BCCI) March 9, 2022
">— BCCI (@BCCI) March 9, 2022
ಕೋವಿಡ್ ಕಾರಣದಿಂದಾಗಿ ಕಳೆದೆರಡು ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆ ಆಗಿರಲಿಲ್ಲ. ಇದೀಗ ಹೊನಲು ಬೆಳಕಿನ ಟೆಸ್ಟ್ ನಡೆಸಲು ಕ್ರೀಡಾಂಗಣ ಸಜ್ಜಾಗಿದೆ ಎಂದು ಕೆಎಸ್‌ಸಿಎ ತಿಳಿಸಿದೆ.