ಬೆಂಗಳೂರು: ಪ್ರವಾಸಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ರೋಹಿತ್ ಶರ್ಮಾ ಬಳಗ ನಾಳೆಯಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿಯಲಿದೆ. ಗಾಯಾಳುಗಳಿಂದ ಕಂಗೆಟ್ಟಿರುವ ಸಿಂಹಳೀಯರ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸುವ ಫೆವರೆಟ್ ತಂಡವಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೇ-ನೈಟ್ ಟೆಸ್ಟ್ ಆರಂಭಗೊಳ್ಳಲಿದ್ದು, ರೋಹಿತ್ ಶರ್ಮಾಗೆ ಮೊದಲ ಟೆಸ್ಟ್ ಸರಣಿ ಗೆಲುವು ಮತ್ತು ತವರಿನಲ್ಲಿ ಸತತ 15ನೇ ಟೆಸ್ಟ್ ಸರಣಿ ಗೆಲ್ಲುವ ಗುರಿ ಹೊಂದಿದೆ. ಪಿಂಕ್ ಬಾಲ್ ಟೆಸ್ಟ್ ಆಗಿರುವ ಕಾರಣ ಜಯಂತ್ ಯಾದವ್ ಸ್ಥಾನಕ್ಕೆ ಆಲ್ರೌಂಡರ್ ಅಕ್ಷರ್ ಪಟೇಲ್ ಅಥವಾ ವೇಗಿ ಮೊಹಮ್ಮದ್ ಸಿರಾಜ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
-
Preps 🔛 👌#TeamIndia gear up for the pink-ball Test in Bengaluru 👍 👍#INDvSL @Paytm pic.twitter.com/wsDGhIiJ0o
— BCCI (@BCCI) March 11, 2022 " class="align-text-top noRightClick twitterSection" data="
">Preps 🔛 👌#TeamIndia gear up for the pink-ball Test in Bengaluru 👍 👍#INDvSL @Paytm pic.twitter.com/wsDGhIiJ0o
— BCCI (@BCCI) March 11, 2022Preps 🔛 👌#TeamIndia gear up for the pink-ball Test in Bengaluru 👍 👍#INDvSL @Paytm pic.twitter.com/wsDGhIiJ0o
— BCCI (@BCCI) March 11, 2022
ಗಾಯಾಳುಗಳಿಂದ ತತ್ತರಿಸಿರುವ ಶ್ರೀಲಂಕಾ ಭಾರತಕ್ಕೆ ಪ್ರತಿರೋಧ ತೋರುವಷ್ಟು ಸಾಮರ್ಥ್ಯ ಹೊಂದಿಲ್ಲ. ಈಗಾಗಲೇ ವೇಗಿ ಲಹಿರು ಕುಮಾರ್, ಸ್ಟಾರ್ ಬ್ಯಾಟರ್ ನಿಸ್ಸಾಂಕ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಇದರ ಜೊತೆಗೆ ಚಮೀರಾ ಸೇವೆ ಕೂಡ ಅಲಭ್ಯವಾಗಲಿದೆ.
2022ರಲ್ಲಿ ಕೊನೆಯ ತವರು ಟೆಸ್ಟ್: ಟೀಂ ಇಂಡಿಯಾಗೆ 2022ರಲ್ಲಿ ಇದು ಕೊನೆಯ ತವರು ನೆಲದ ಟೆಸ್ಟ್. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಇನ್ನೂ ಏಳು ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಅದರಲ್ಲಿ ಎರಡು ಪಂದ್ಯ ಬಾಂಗ್ಲಾದೇಶ ತದನಂತರ ಆಸ್ಟ್ರೇಲಿಯಾದಲ್ಲಿ 2023ರಲ್ಲಿ ನಡೆಯಲಿವೆ.
- — BCCI (@BCCI) March 11, 2022 " class="align-text-top noRightClick twitterSection" data="
— BCCI (@BCCI) March 11, 2022
">— BCCI (@BCCI) March 11, 2022
ಇದನ್ನೂ ಓದಿ: IPLಗೆ ರಿಎಂಟ್ರಿ ಕೊಟ್ಟ ಯಾರ್ಕರ್ ಕಿಂಗ್: ರಾಜಸ್ಥಾನ ರಾಯಲ್ಸ್ ಪಾಳಯ ಸೇರಿದ ಮಲಿಂಗ
ದಾಖಲೆಯ ಹೊಸ್ತಿಲಲ್ಲ 'ಸರ್ ಜಡೇಜಾ': ಮೊಹಾಲಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ರೆಕಾರ್ಡ್ ಬರೆದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 250 ವಿಕೆಟ್ ಮೈಲಿಗಲ್ಲು ತಲುಪಲು ಜಡೇಜಾಗೆ 9 ವಿಕೆಟ್ಗಳ ಅವಶ್ಯಕತೆ ಇದ್ದು, ನಾಳೆಯಿಂದ ಆರಂಭಗೊಳ್ಳಲಿರುವ ಹೊನಲು ಬೆಳಕಿನ ಟೆಸ್ಟ್ನಲ್ಲಿ ಈ ಸಾಧನೆ ಬರೆಯುವ ಸಾಧ್ಯತೆ ಇದೆ.
ಕೊಹ್ಲಿ ಶತಕರಹಿತ ಪಯಣಕ್ಕೆ ಬ್ರೇಕ್?: ಕಳೆದ ಎರಡು ವರ್ಷಗಳಿಂದ ಶತಕ ಸಿಡಿಸುವಲ್ಲಿ ವಿಫಲರಾಗಿರುವ ವಿರಾಟ್ ಕೊಹ್ಲಿ ಇದೀಗ ಬೆಂಗಳೂರಿನ ಟೆಸ್ಟ್ನಲ್ಲಿ ಈ ದಾಖಲೆ ಬರೆಯುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಿಂದ ವಿರಾಟ್ 15 ಟೆಸ್ಟ್ಗಳನ್ನಾಡಿದ್ದು, ಶತಕ ಮಾತ್ರ ಸಿಡಿಸಿಲ್ಲ. ಬೆಂಗಳೂರಿನ ಟೆಸ್ಟ್ ಪಂದ್ಯದಲ್ಲಿ ಅವರ ಬ್ಯಾಟ್ನಿಂದ ಶತಕ ಮೂಡಲಿದೆ ಎಂಬ ಆಶಾಭಾವನೆ ಇದೆ.
ಉಭಯ ತಂಡಗಳು ಇಂತಿವೆ:
ಭಾರತ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (WK), ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಭರತ್, ಉಮೇಶ್ ಯಾದವ್, ಸೌರಭ್ ಕುಮಾರ್, ಪ್ರಿಯಾಂಕ್ ಪಾಂಚಾಲ್
ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಧನಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದುಷ್ಮಂತ ಚಮೀರಾ, ದಿನೇಶ್ ಚಂಡಿಮಾಲ್, ಏಂಜೆಲೊ ಮ್ಯಾಥ್ಯೂಸ್, ನಿರೋಶನ್ ಡಿಕ್ವೆಲ್ಲಾ, ಲಸಿತ್ ಎಂಬುಲ್ಡೆನಿಯಾ, ವಿಶ್ವ ಫೆರ್ನಾಂಡೋ, ಸುರಂಗ ಲಕ್ಮಲ್, ಲಹಿರು ತಿರಿಮನ್ನೆ, ಲಹಿರು ಮೆನ್, ಪಟ್ ಮೆನ್, ಕುಕ್ಸಲ್ ಮೆನ್. ನ್ಸಾಂಕ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕಾ ಕರುಣಾರತ್ನೆ
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ
ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು