ಹುಬ್ಬಳ್ಳಿ: ತೇವಾಂಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್ ಎ ತಂಡಗಳ ನಡುವೆ ಒಂದು ದಿನ ತಡವಾಗಿ ಪಂದ್ಯ ಆರಂಭಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿರುವ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ.
ಊಟದ ವಿರಾಮದ ವೇಳೆಗೆ 19 ಓವರ್ಗಳಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು 57ರನ್ಗಳಿಸಿದೆ. ನಾಲ್ಕು ದಿನಗಳ ಕಾಲ ಟೆಸ್ಟ್ ಪಂದ್ಯ ನಡೆಯಲಿದೆ. ಇಂಡಿಯಾ ಎ ತಂಡ 19 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ಗಳಿಸಿದ್ದು, ಸದ್ಯ ಕ್ಯಾಪ್ಟನ್ ಪ್ರಿಯಾಂಕ್ ಪಾಂಚಾಲ್ 25ರನ್ಗಳಿಸಿ, ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದಾರೆ. ಇವರಿಗೆ ಸಾಥ್ ನೀಡಿರುವ ರಜತ್ ಪಾಟೀದಾರ್ 4ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ತೇವಾಂಶ ಹಿನ್ನೆಲೆ ಭಾರತ - ನ್ಯೂಜಿಲ್ಯಾಂಡ್ ಎ ತಂಡಗಳ ಟೆಸ್ಟ್ ನಾಳೆಗೆ ಮುಂದೂಡಿಕೆ
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಟಾಮ್ ಬ್ರೂಸ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿದ್ದು, ಮೈದಾನದ ತೇವಾಂಶದ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಭಾರತದ ಅಭಿಮನ್ಯು ಈಶ್ವರನ್ 22ರನ್ಗಳಿಸಿ ವಿಕೆಟ್ ಒಪ್ಪಿಸಿದ್ದು, ಋತುರಾಜ್ ಗಾಯಕ್ವಾಡ್ ಕೇವಲ 5ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು.
ನ್ಯೂಜಿಲ್ಯಾಂಡ್ ತಂಡದ ಪರ ಬೆಲ್ ಎರಡು ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.