ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಆರಂಭಗೊಂಡಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 70 ಓವರ್ಗಳ ಬ್ಯಾಟಿಂಗ್ ಮಾಡಿ, 4 ವಿಕೆಟ್ ನಷ್ಟಕ್ಕೆ 221ರನ್ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
ಮಳೆಯಿಂದಾಗಿ ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ತಡವಾಗಿ ಆರಂಭಗೊಂಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಮಯಾಂಕ್ ಅಗರವಾಲ್ ಹಾಗೂ ಶುಬ್ಮನ್ ಗಿಲ್ 80ರನ್ಗಳ ಜೊತೆಯಾಟವಾಡಿದರು. ಈ ವೇಳೆ, 44ರನ್ಗಳಿಕೆ ಮಾಡಿದ್ದ ಶುಬ್ಮನ್ ಗಿಲ್ ಅಜಾಜ್ ಪಟೇಲ್ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದರ ಬೆನ್ನಲ್ಲೇ ಬಂದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರಾ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಮೂಲಕ ಭಾರತ 80 ರನ್ಗಳಿಕೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.
-
Stumps in Mumbai 🏏
— ICC (@ICC) December 3, 2021 " class="align-text-top noRightClick twitterSection" data="
Mayank Agarwal and Wriddhiman Saha’s unbeaten 61-run stand has taken India past the 220-run mark.#WTC23 | #INDvNZ | https://t.co/EdvFj8QtKD pic.twitter.com/h20r8JRaPM
">Stumps in Mumbai 🏏
— ICC (@ICC) December 3, 2021
Mayank Agarwal and Wriddhiman Saha’s unbeaten 61-run stand has taken India past the 220-run mark.#WTC23 | #INDvNZ | https://t.co/EdvFj8QtKD pic.twitter.com/h20r8JRaPMStumps in Mumbai 🏏
— ICC (@ICC) December 3, 2021
Mayank Agarwal and Wriddhiman Saha’s unbeaten 61-run stand has taken India past the 220-run mark.#WTC23 | #INDvNZ | https://t.co/EdvFj8QtKD pic.twitter.com/h20r8JRaPM
ಈ ವೇಳೆ, ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಅಗರವಾಲ್ ಜೊತೆಯಾದ ಮೊದಲ ಟೆಸ್ಟ್ ಪಂದ್ಯದ ಹೀರೋ ಶ್ರೇಯಸ್ ಅಯ್ಯರ್ ಸ್ವಲ್ಪ ಹೊತ್ತು ಪ್ರತಿರೋಧ ನೀಡಿದ್ರು. ಆದರೆ 18ರನ್ಗಳಿಕೆ ಮಾಡಿದ ವೇಳೆ ಅಜಾಜ್ ಪಟೇಲ್ ಓವರ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಹೀಗಾಗಿ ತಂಡ 160ರನ್ಗಳಿಕೆ ಮಾಡುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು.
ಉತ್ತಮ ಸಾಥ್ ನೀಡಿದ ವೃದ್ಧಿಮಾನ್
ಟೀಂ ಇಂಡಿಯಾದ 4ನೇ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕೆ ಆಗಮಿಸಿದ ವೃದ್ಧಿಮಾನ್ ಸಾಹಾ ಉತ್ತಮ ಬ್ಯಾಟ್ ಬೀಸಿದರು. ಮಯಾಂಕ್ ಜೊತೆ ಸೇರಿ ಕೊನೆಯವರೆಗೂ ಆಟವಾಡಿದ ವಿಕೆಟ್ ಕೀಪರ್ 53 ಎಸೆತಗಳಲ್ಲಿ 25ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಇದೇ ವೇಳೆ ಮಯಾಂಕ್ ಸೊಗಸಾದ(120*) ಶತಕ ಸಿಡಿಸಿ ಮಿಂಚಿದರು. ಕಳೆದ ಕೆಲ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಮಯಾಂಕ್ ಇಂದು ಇಡೀ ದಿನ ಬ್ಯಾಟಿಂಗ್ ಮಾಡಿದ್ದು, 246 ಎಸೆತಗಳಲ್ಲಿ 4 ಸಿಕ್ಸರ್, 14 ಬೌಂಡರಿ ಸೇರಿದಂತೆ 120ರನ್ಗಳಿಕೆ ಮಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿರಿ: ನ್ಯೂಜಿಲ್ಯಾಂಡ್ ವಿರುದ್ಧ ಕನ್ನಡಿಗನ ಶತಕದಾಟ.. ಟೆಸ್ಟ್ನಲ್ಲಿ 4ನೇ ಸೆಂಚುರಿ ಬಾರಿಸಿದ ಮಯಾಂಕ್
ನ್ಯೂಜಿಲ್ಯಾಂಡ್ ಪರ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ 4ವಿಕೆಟ್ ಪಡೆದು ಮಿಂಚಿದ್ರೆ, ಉಳಿದಂತೆ ಯಾವೊಬ್ಬ ಬೌಲರ್ ಕೂಡ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.