ETV Bharat / sports

U19 ವಿಶ್ವ ಚಾಂಪಿಯನ್ಸ್​ಗೆ ಭಾರತ - ವಿಂಡೀಸ್​ ನಡುವಿನ ಪಂದ್ಯ ವೀಕ್ಷಿಸಲು ಅವಕಾಶ

author img

By

Published : Feb 9, 2022, 5:16 PM IST

ಫೆಬ್ರವರಿ 5ರಂದು ನಡೆದಿದ್ದ ಫೈನಲ್​ನಲ್ಲಿ ಭಾರತ ಅಂಡರ್ 19 ತಂಡ ಇಂಗ್ಲೆಂಡ್​ ವಿರುದ್ದ 4 ವಿಕೆಟ್​ಗಳ ರೋಚಕ ಜಯ ಸಾಧಿಸಿ ದೇಶಕ್ಕೆ ದಾಖಲೆಯ 5ನೇ ವಿಶ್ವಕಪ್ ತಂದು ಕೊಟ್ಟಿತ್ತು.

Ind vs WI: U19 WC winning team attend 2nd ODI in Ahmedabad
U19 ವಿಶ್ವ ಚಾಂಪಿಯನ್ಸ್​ಗೆ ಭಾರತ-ವಿಂಡೀಸ್​ ನಡುವಿನ ಪಂದ್ಯ ವೀಕ್ಷಿಸಲು ಅವಕಾಶ

ಅಹ್ಮದಾಬಾದ್​: ವೆಸ್ಟ್​ ಇಂಡೀಸ್​ನಲ್ಲಿ ನಡೆದ ಕಿರಿಯರ ವಿಶ್ವಕಪ್​ ಜಯಿಸಿದ ಯಶ್​ ಧುಲ್ ನೇತೃತ್ವದ ತಂಡ ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ ಭಾರತ - ವಿಂಡೀಸ್​ ನಡುವಿನ 2ನೇ ಏಕದಿನ ಪಂದ್ಯವನ್ನು ವೀಕ್ಷಣೆ ಮಾಡುವ ಅವಕಾಶ ನೀಡಲಾಗಿದೆ.

ಫೆಬ್ರವರಿ 5ರಂದು ನಡೆದಿದ್ದ ಫೈನಲ್​ನಲ್ಲಿ ಭಾರತ ಅಂಡರ್ 19 ತಂಡ ಇಂಗ್ಲೆಂಡ್​ ವಿರುದ್ದ 4 ವಿಕೆಟ್​ಗಳ ರೋಚಕ ಜಯ ಸಾಧಿಸಿ ದೇಶಕ್ಕೆ ದಾಖಲೆಯ 5ನೇ ವಿಶ್ವಕಪ್ ತಂದುಕೊಟ್ಟಿತ್ತು. ಮಂಗಳವಾರ ದುಬೈ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿದಿದ್ದ ಚಾಂಪಿಯನ್ನರು ಸಂಜೆಯವರೆಗೆ ವಿಮಾನ ನಿಲ್ದಾಣದ ಬಳಿಯಿರುವ ತಾಜ್ ಹೋಟೆಲ್​ನಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದರು.

ಬಿಸಿಸಿಐ ಭಾರತಕ್ಕೆ ವಿಶ್ವಕಪ್​ ತಂದುಕೊಟ್ಟಿರುವ ಯುವ ಕಲಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಯಶ್​ ಬಳಗ ನಿನ್ನೆಯೇ ಅಹಮದಾಬಾದ್​​​​ಗೆ ಸೇರಿಕೊಂಡಿದೆ.

ಇನ್ನೂ ಈಗಾಗಲೇ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ತಲಾ 40 ಲಕ್ಷ ರೂ. ಮತ್ತು ಬೆಂಬಲ ಸಿಬ್ಬಂದಿಗಳಿಗೆ 25 ಲಕ್ಷ ರೂ ಬಹುಮಾನ ಘೋಷಣೆ ಮಾಡಿದೆ.

ಇದನ್ನೂ ಓದಿ:ನಾಯಕತ್ವದಲ್ಲಿ ಧೋನಿ ಮಾರ್ಗ ಅನುಸರಿಸಿ ವಿಫಲರಾದ ರೋಹಿತ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.