ETV Bharat / sports

India vs Sri Lanka: ಜುಲೈ 13ರ ಬದಲು 18ರಿಂದ ODI ಸರಣಿ ಆರಂಭ

author img

By

Published : Jul 10, 2021, 2:18 PM IST

Updated : Jul 10, 2021, 4:28 PM IST

ಶನಿವಾರ ANI ಜೊತೆ ಮಾತನಾಡಿರುವ ಜಯ್ ಶಾ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜುಲೈ 18ರಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತ vs ಶ್ರೀಲಂಕಾ ಸರಣಿ
ಭಾರತ vs ಶ್ರೀಲಂಕಾ ಸರಣಿ

ಕೊಲೊಂಬೊ: ಶ್ರೀಲಂಕಾ ತಂಡದಲ್ಲಿ ಇಬ್ಬರಿಗೆ ಕೋವಿಡ್​ 19 ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಭಾರತ-ಶ್ರೀಲಂಕಾ ನಡುವಿನ ಏಕದಿನ ಸರಣಿ ಜುಲೈ 13 ರ ಬದಲು ಜುಲೈ 18ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

ಶನಿವಾರ ANI ಜೊತೆ ಮಾತನಾಡಿರುವ ಜಯ್ ಶಾ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜುಲೈ 18ರಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಜುಲೈ 18, 20 ಮತ್ತು 23ರಂದು ಏಕದಿನ ಮತ್ತು 25, 27 ಮತ್ತು 29ರಂದು ಟಿ20 ಪಂದ್ಯಗಳು ನಡೆಯಲಿವೆ. ಈ ಎಲ್ಲಾ ಪಂದ್ಯಗಳು ಕೊಲಂಬೋದಲ್ಲೇ ನಡೆಯಲಿವೆ.

  • 🚨 NEWS 🚨: BCCI, SLC announce revised dates for upcoming ODI & T20I series. #SLvIND

    More Details 👇

    — BCCI (@BCCI) July 10, 2021 " class="align-text-top noRightClick twitterSection" data=" ">

" ಶ್ರೀಲಂಕಾ ಕ್ಯಾಂಪ್​ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡು ತಂಡಗಳ ನಡುವಿನ ಏಕದಿನ ಸರಣಿ ಜುಲೈ 18ರಿಂದ ಆರಂಭವಾಗಲಿದೆ" ಎಂದು ಶಾ ತಿಳಿಸಿದ್ದಾರೆ.

ಇಎಸ್​ಪಿನ್ ವರದಿಯ ಪ್ರಕಾರ ಡಾಟ ಅನಾಲಿಸ್ಟ್​ ನಿರೋಶನ್​ ಮತ್ತು ಬ್ಯಾಟಿಂಗ್ ಕೋಚ್ ಗ್ರ್ಯಾಂಟ್​​ ಫ್ಲವರ್​ ಡೆಲ್ಟಾ ವೈರಸ್​ಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಇಂಗ್ಲೆಂಡ್​ ಪ್ರವಾಸದಿಂದ ಬಂದ ಸಂಪೂರ್ಣ ಲಂಕಾ ತಂಡವನ್ನು ಕ್ವಾರಂಟೈನ್​ನಲ್ಲಿಡಲಾಗಿದೆ.

ಇದಕ್ಕೂ ಮೊದಲು ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಪಾಲ್ಗೊಂಡಿದ್ದ ಇಂಗ್ಲೆಂಡ್ ತಂಡದ ಮೂವರು ಆಟಗಾರರಿಗೂ ಕೊರೊನಾ ಸೋಂಕು ತಗುಲಿತ್ತು. ಹಾಗಾಗಿ ಪಾಕಿಸ್ತಾನ ವಿರುದ್ಧದ ಸರಣಿಗೆ ಇಸಿಬಿ ಬೆನ್​ ಸ್ಟೋಕ್ಸ್​ ನೇತೃತ್ವದಲ್ಲಿ 16 ಸದಸ್ಯರ ಹೊಸ ತಂಡವನ್ನೇ ಘೋಷಿಸಿತ್ತು.

ಇದನ್ನು ಓದಿ:Stunning Catch: ಇಂಟರ್​ನೆಟ್​ನಲ್ಲಿ ಕಿಚ್ಚೆಬ್ಬಿಸಿದ ಹರ್ಲೀನ್ ಡಿಯೋಲ್ ಡೈವಿಂಗ್​ ಕ್ಯಾಚ್

Last Updated : Jul 10, 2021, 4:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.