ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಡಿಸೆಂಬರ್ 26ರಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಮೊದಲ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿದ್ದು, ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಟೀಂ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಮಾತನಾಡಿದ್ದಾರೆ.
-
💬 💬 We’ve had a great week of preparation.
— BCCI (@BCCI) December 24, 2021 " class="align-text-top noRightClick twitterSection" data="
Vice-captain @klrahul11 takes us through how #TeamIndia is getting into the groove for the first #SAvIND Test. pic.twitter.com/qGB8YcZZ57
">💬 💬 We’ve had a great week of preparation.
— BCCI (@BCCI) December 24, 2021
Vice-captain @klrahul11 takes us through how #TeamIndia is getting into the groove for the first #SAvIND Test. pic.twitter.com/qGB8YcZZ57💬 💬 We’ve had a great week of preparation.
— BCCI (@BCCI) December 24, 2021
Vice-captain @klrahul11 takes us through how #TeamIndia is getting into the groove for the first #SAvIND Test. pic.twitter.com/qGB8YcZZ57
ಪ್ರತಿವೊಂದು ಟೆಸ್ಟ್ ಪಂದ್ಯದಲ್ಲಿ ಎದುರಾಳಿ ತಂಡದ 20 ವಿಕೆಟ್ ಪಡೆದುಕೊಳ್ಳುವ ಉದ್ದೇಶದಿಂದಲೇ ತಂಡ ರಚನೆ ಮಾಡಬೇಕಾಗುತ್ತದೆ. ಕೇವಲ ನಾಲ್ವರು ಬೌಲರ್ಗಳೊಂದಿಗೆ ಕಣಕ್ಕಿಳಿಯುವುದರಿಂದ ಅವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿಯುವ ಪ್ಲಾನ್ ಹಾಕಿಕೊಂಡಿದ್ದು, ಐದನೇ ಬೌಲರ್ ಬ್ಯಾಟಿಂಗ್ ಮಾಡಲು ಕೂಡ ಸಮರ್ಥರಾಗಿರುತ್ತಾರೆ ಎಂದಿದ್ದಾರೆ.
ಒಂದು ವೇಳೆ, ಟೀಂ ಇಂಡಿಯಾ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿದರೆ ರಹಾನೆ ಅಥವಾ ಹನುಮ ವಿಹಾರಿ ಪೈಕಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಐದನೇ ಬೌಲರ್ ಆಗಿ ಶಾರ್ದೂಲ್ ಠಾಕೂರ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
-
From playing domestic cricket to donning the whites for #TeamIndia together, the batting duo has come a long way. 👏 ☺️@28anand tracks the journey of @klrahul11 & @mayankcricket as they gear up for the SA challenge. 👍👍 #SAvIND
— BCCI (@BCCI) December 24, 2021 " class="align-text-top noRightClick twitterSection" data="
Full interview🎥 🔽https://t.co/0BcVvjOG8X pic.twitter.com/gcfDxbCFDe
">From playing domestic cricket to donning the whites for #TeamIndia together, the batting duo has come a long way. 👏 ☺️@28anand tracks the journey of @klrahul11 & @mayankcricket as they gear up for the SA challenge. 👍👍 #SAvIND
— BCCI (@BCCI) December 24, 2021
Full interview🎥 🔽https://t.co/0BcVvjOG8X pic.twitter.com/gcfDxbCFDeFrom playing domestic cricket to donning the whites for #TeamIndia together, the batting duo has come a long way. 👏 ☺️@28anand tracks the journey of @klrahul11 & @mayankcricket as they gear up for the SA challenge. 👍👍 #SAvIND
— BCCI (@BCCI) December 24, 2021
Full interview🎥 🔽https://t.co/0BcVvjOG8X pic.twitter.com/gcfDxbCFDe
ಕೆ.ಎಲ್ ರಾಹುಲ್, ಮಯಾಂಕ್ ಅಗರವಾಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ತಂಡದಲ್ಲಿರುವುದರಿಂದ ಬೇರೆ ಬ್ಯಾಟರ್ಗಳು ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ಆರ್.ಅಶ್ವಿನ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಅವಕಾಶ ಪಡೆಕೊಳ್ಳುವ ಅವಕಾಶ ದಟ್ಟವಾಗಿದೆ. ಇನ್ನು ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಿಂಚಿರುವ ಶ್ರೇಯಸ್ ಅಯ್ಯರ್, ರಹಾನೆ ಹಾಗೂ ಹನುಮ ವಿಹಾರಿ ನಡುವೆ ಪೈಪೋಟಿ ಇದ್ದು, ಮೂವರಲ್ಲಿ ಓರ್ವರು ಮಾತ್ರ ಚಾನ್ಸ್ ಪಡೆದುಕೊಳ್ಳಲಿದ್ದಾರೆ.