ಗುವಾಹಟಿ: ದಕ್ಷಿಣ ಆಫ್ರಿಕಾದ ಎದುರಿನ ಎರಡನೇ ಟಿ20ಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 237 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಸೋತು ಬ್ಯಾಟಿಂಗ್ಗಿಳಿದ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಉತ್ತಮ ಆರಂಭ ನೀಡಿದರು.
ಭಾರತದ ಆರಂಭಿಕ ಬ್ಯಾಟರ್ಗಳು 9.5 ಓವರ್ಗಳಲ್ಲಿ 96 ರನ್ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಹರಿಣಗಳ ತಂಡದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. 37 ಎಸೆತದಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 43 ರನ್ ಬಾರಿಸಿದರು. 9.5 ಓವರ್ನಲ್ಲಿ ಮಹರಾಜ ಎಸೆದ ಚೆಂಡನ್ನು ಲೆಗ್ ಸೈಡ್ನತ್ತ ಬಾರಿಸಲು ಯತ್ನಿಸಿ ಕ್ಯಾಚ್ ನೀಡಿದರು.
ರಾಹುಲ್ ಆಕರ್ಷಕ ಅರ್ದ ಶತಕ : ಕೆ.ಎಲ್ ರಾಹುಲ್ ಮೊದಲ ಪಂದ್ಯದ ಫಾರ್ಮ್ನ್ನು ಮುಂದುವರೆಸಿದ್ದು ಆಕರ್ಷಕ ಅರ್ದಶತಕ ಬಾರಿಸಿದರು. ಕ್ರೀಸ್ಗೆ ಬಂದಾಗಿನಿಂದಲೇ ಹೊಡಿಬಡಿ ಆಟಕ್ಕೆ ಇಳಿದ ರಾಹುಲ್ 28 ಎಸೆತದಲ್ಲಿ 5 ಬೌಡರಿ ಮತ್ತು 4 ಸಿಕ್ಸರ್ನಿಂದ 57 ರನ್ ಗಳಿಸಿದರು. 11.3ನೇ ಓವರ್ನಲ್ಲಿ ಮಹರಾಜ ಬೌಲಿಂಗಿನಲ್ಲೇ ಎಲ್ಬಿಡಬ್ಲ್ಯೂಗೆ ಬಲಿಯಾದರು.
-
1000 runs and counting in T20Is for @surya_14kumar 💥💥
— BCCI (@BCCI) October 2, 2022 " class="align-text-top noRightClick twitterSection" data="
He is the third fastest Indian batter to achieve this feat.#TeamIndia pic.twitter.com/aDOSNWu2zv
">1000 runs and counting in T20Is for @surya_14kumar 💥💥
— BCCI (@BCCI) October 2, 2022
He is the third fastest Indian batter to achieve this feat.#TeamIndia pic.twitter.com/aDOSNWu2zv1000 runs and counting in T20Is for @surya_14kumar 💥💥
— BCCI (@BCCI) October 2, 2022
He is the third fastest Indian batter to achieve this feat.#TeamIndia pic.twitter.com/aDOSNWu2zv
ಸಾವಿರ ರನ್ ಸರದಾರ ಸೂರ್ಯ : ರೋಹಿತ್ ವಿಕೆಟ್ ನಂತರ ಕೊಹ್ಲಿ ಕ್ರಿಸ್ಗೆ ಬಂದರು. ಕೊಹ್ಲಿ ಜೊತೆ ರಾಹುಲ್ ಹೆಚ್ಚಿನ ಜೊತೆಯಾಟ ನೀಡಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು. ಮೈದಾನದ ಅಷ್ಟ ದಿಕ್ಕುಗಳನ್ನೂ ಹರಿಣಗಳ ತಂಡದ ಬೌಲರ್ಗಳಿಗೆ ದರ್ಶಿಸಿದರು. 22 ಬಾಲ್ನಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಯಿಂದ 61 ರನ್ ಗಳಿಸಿದರು. ಟಿ20 ಮಾದರಿಯಲ್ಲಿ 1,000 ದಾಖಲಿಸಿ ಭಾರತ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದರು.
ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 50 ರನ್ ಜೊತೆಯಾಟವಾಡಿದರು. 61 ರನ್ ಗಳಿಸಿದ್ದ ಯಾದವ್ ರನ್ ಔಟ್ ಆದರು, ವಿರಾಟ್ ಕೊಹ್ಲಿ 49, ದಿನೇಶ್ ಕಾರ್ತಿಕ್ 17 ರನ್ನಿಂದ ಅಜೇಯರಾಗಿ ಉಳಿದರು.
238 ರನ್ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ ಒಂದು ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿದೆ. ನಾಯಕ ಬೌಮಾ ಹಾಗೂ ರೀಲೆ ರುಸ್ಸೋ ಶೂನ್ಯಕ್ಕೆ ಔಟಾಗಿದ್ದಾರೆ.
ಇದನ್ನೂ ಓದಿ : IND vs SA Africa 2nd T20: ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಭಾರತ