ETV Bharat / sports

IND vs SA 4th T20: ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ದ.ಆಫ್ರಿಕಾ; ಭಾರತಕ್ಕೆ ಮಹತ್ವದ ಪಂದ್ಯ

author img

By

Published : Jun 17, 2022, 6:59 PM IST

ಉಭಯ ತಂಡಗಳಿಗೂ ಮಹತ್ವದ್ದಾಗಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

South Africa have elected to bowl against Team India

ಗುಜರಾತ್​: ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 4ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಬ್ಯಾಟಿಂಗ್‌ ಮಾಡುತ್ತಿದೆ. ರಿಷಭ್ ಪಂತ್ ನಾಯಕತ್ವದ ಟೀಂ ಇಂಡಿಯಾಗೆ ಈ ಪಂದ್ಯ ಸರಣಿ ಜೀವಂತವಾಗಿರಿಸಿಕೊಳ್ಳಲು ನಿರ್ಣಾಯಕವಾಗಿದೆ.

ವೈಜಾಗ್‌ನಲ್ಲಿ ನಡೆದ 3ನೇ ಟಿ20 ಪಂದ್ಯವನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ರಾಜ್​ಕೋಟ್‌ನಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಪ್ರಯತ್ನ ನಡೆಸಲಿದೆ. ಒಂದು ವೇಳೆ ಸೋತರೆ ಸರಣಿ ಸೌತ್ ಆಫ್ರಿಕಾ ವಶವಾಗಲಿದೆ.

ರಿಷಭ್​ ಪಂತ್​ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದಕ್ಷಿಣ ಆಫ್ರಿಕಾವು ಕೆಲ ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದಿದೆ. ವೇಗಿ ಕಗಿಸೊ ರಬಾಡ ಮತ್ತು ಆಲ್​ರೌಂಡರ್​​ ಪಾರ್ನೆಲ್ ಗಾಯಗಳಿಂದಾಗಿ ಹೊರಗುಳಿದಿದ್ದರೆ, ಮಾರ್ಕೊ ಜಾನ್ಸೆನ್ ಮತ್ತು ಎನ್​ಗಿಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ರೀಜಾ ಹೆಂಡ್ರಿಕ್ಸ್ ಬದಲು ಚೇತರಿಸಿಕೊಂಡಿರುವ ವಿಕೆಟ್​ ಕೀಪರ್​​ ಕ್ವಿಂಟನ್ ಡಿ ಕಾಕ್ 11ರ ಬಳಗಕ್ಕೆ ಮರಳಿದ್ದಾರೆ.

ತಂಡಗಳು ಹೀಗಿವೆ:

ಭಾರತ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ/ವಿಕೆಟ್​ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್(ವಿಕೆಟ್​ ಕೀಪರ್​), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಅನ್ರಿಚ್ ನೋಕಿಯಾ.

  • 4th T20I.South Africa XI: Q De Kock (wk), T Bavuma (c), R Van Der Dussen, D Miller, H Klaasen , M Jansen, D Pretorius, K Maharaj, T Shamsi, L Ngidi, A Nortje. https://t.co/bK9JmZ5WfN #INDvSA @Paytm

    — BCCI (@BCCI) June 17, 2022 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.