ರಾಂಚಿ: ಆತಿಥೇಯ ಭಾರತ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 153ರನ್ಗಳಿಕೆ ಮಾಡಿದೆ. ಈ ಮೂಲಕ ಟೀಂ ಇಂಡಿಯಾ ಜಯ ದಾಖಲಿಸಲು 154ರನ್ಗಳ ಟಾರ್ಗೆಟ್ ನೀಡಿದೆ.
ರಾಂಚಿಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್(IND vs NZ, 2nd T20I) ಆರಂಭದಲ್ಲೇ ಸ್ಫೋಟಕ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ಮೆಚೆಲ್ ಉತ್ತಮ ಆರಂಭ ನೀಡಿದರು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ನಲ್ಲಿ ಗಪ್ಟಿಲ್ 3 ಬೌಂಡರಿ ಸೇರಿ 14 ರನ್ಗಳಿಸಿದರು. ನಂತರ ಚಹರ್ ಎಸೆದ ಓವರ್ನಲ್ಲಿ 10ರನ್ಗಳಿಕೆ ಮಾಡಲಾಯಿತು. ನ್ಯೂಜಿಲ್ಯಾಂಡ್ ತಂಡ(New Zealand) ಪವರ್ಪ್ಲೇ ವೇಳೆಗೆ 1ವಿಕೆಟ್ನಷ್ಟಕ್ಕೆ 64ರನ್ಗಳಿಕೆ ಮಾಡಿತು.
ಇದನ್ನೂ ಓದಿರಿ: India vs New Zealand T20: ವಿರಾಟ್ ಕೊಹ್ಲಿ ದಾಖಲೆ ಉಡೀಸ್ ಮಾಡಿದ ಮಾರ್ಟಿನ್ ಗಪ್ಟಿಲ್
31ರನ್ಗಳಿಕೆ ಮಾಡಿದ್ದ ಗಪ್ಟಿಲ್ ವಿಕೆಟ್ ಪಡೆದುಕೊಳ್ಳುವಲ್ಲಿ ಚಹರ್ ಯಶಸ್ವಿಯಾದರೆ, ಇದರ ಬೆನ್ನಲ್ಲೇ ಅಕ್ಷರ್ ಎಸೆದ ಓವರ್ನಲ್ಲಿ 21ರನ್ಗಳಿಕೆ ಚಾಪ್ಮನ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮಿಚೆಲ್ 31ರನ್ಗಳಿಕೆ ಮಾಡಿ ಹರ್ಷಲ್ಗೆ ಬಲಿಯಾದರು.
-
Superb death bowling from India helps restrict New Zealand to 153/6 after their flying start.
— ICC (@ICC) November 19, 2021 " class="align-text-top noRightClick twitterSection" data="
Can the hosts clinch the series today?#INDvNZ | https://t.co/lFuMngLmTs pic.twitter.com/qoWToPP3CS
">Superb death bowling from India helps restrict New Zealand to 153/6 after their flying start.
— ICC (@ICC) November 19, 2021
Can the hosts clinch the series today?#INDvNZ | https://t.co/lFuMngLmTs pic.twitter.com/qoWToPP3CSSuperb death bowling from India helps restrict New Zealand to 153/6 after their flying start.
— ICC (@ICC) November 19, 2021
Can the hosts clinch the series today?#INDvNZ | https://t.co/lFuMngLmTs pic.twitter.com/qoWToPP3CS
ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಪಿಲಿಪ್ಸ್ ಕೇವಲ 21 ಎಸೆತಗಳಲ್ಲಿ 3ಸಿಕ್ಸರ್, 1 ಬೌಂಡರಿ ಸೇರಿ 34ರನ್ಗಳಿಸಿದರು. ಇವರಿಗೆ ವಿಕೆಟ್ ಕೀಪರ್ ಸಿಫರ್ಟ್ 13ರನ್ ಉತ್ತಮ ಸಾಥ್ ನೀಡಿದರು. ಆರಂಭದಲ್ಲಿ ಉತ್ತಮ ರನ್ರೇಟ್ ಹೊಂದಿದ್ದ ನ್ಯೂಜಿಲ್ಯಾಂಡ್ ದ್ವೀತಿಯಾರ್ಧದಲ್ಲಿ ರನ್ಗಳಿಕೆ ಮಾಡುವಲ್ಲಿ ಪರದಾಡಿತು. ಹೀಗಾಗಿ 20 ಓವರ್ಗಳಲ್ಲಿ 153ರನ್ ಮಾತ್ರ ಗಳಿಕೆ ಮಾಡಿತು.
ಟೀಂ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ಹರ್ಷಲ್ ಪಟೇಲ್ 2ವಿಕೆಟ್ ಪಡೆದು ಮಿಂಚಿದ್ರೆ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಅಕ್ಸರ್ ಪಟೇಲ್ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದುಕೊಂಡರು.