ETV Bharat / sports

ಮೊದಲ ಪಂದ್ಯ ಸೋತರೂ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ: ನ್ಯೂಜಿಲ್ಯಾಂಡ್​ ನಾಯಕ ಟಿಮ್​ ಸೌಥಿ - ಭಾರತ ನ್ಯೂಜಿಲ್ಯಾಂಡ್​ ವಿರುದ್ಧ ಮೊದಲ ಟಿ-20 ಪಂದ್ಯ

ಪಂದ್ಯದ ಫಲಿತಾಂಶ ನಮ್ಮ ಪರವಾಗಿರದಿದ್ದರೂ ತಂಡ ಕೊನೆಯ ಓವರ್​ವರೆಗೂ ಹೋರಾಟ(The team struggled until the last over)ನಡೆಸಿತು. ನಾವು ಪಂದ್ಯದ ಮೊದಲ ಎಸೆತದಿಂದಲೇ ಉತ್ತಮವಾಗಿ ಆಡಲು ಬಯಸಿದ್ದೆವು. ಅದರಂತೆ ಆಡಿದ್ದೇವೆ ಎಂದು ಟಿಮ್​ ಸೌಥಿ(New Zealand captain Tim Southee)ಹೇಳಿದ್ದಾರೆ.

says southee
ನ್ಯೂಜಿಲ್ಯಾಂಡ್​ ನಾಯಕ ಟಿಮ್​ ಸೌಥಿ
author img

By

Published : Nov 18, 2021, 10:45 AM IST

ಜೈಪುರ: ಭಾರತದ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ನಾವು ಸೋತರೂ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಪಂದ್ಯವನ್ನು ಗೆಲ್ಲಲು ಕೊನೆಯ ಓವರ್​ವರೆಗೂ ತಂಡ ಹೋರಾಟ ನಡೆಸಿತು ಎಂದು ನ್ಯೂಜಿಲ್ಯಾಂಡ್​ ನಾಯಕ ಟಿಮ್​ ಸೌಥಿ (New Zealand captain Tim Southee)ಹೇಳಿದ್ದಾರೆ.

ನಿನ್ನೆ ಜೈಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ 3 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಪರಾಜಯ ಹೊಂದಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸೌಥಿ, ಪಂದ್ಯದ ಫಲಿತಾಂಶ ನಮ್ಮ ಪರವಾಗಿರದಿದ್ದರೂ ತಂಡ ಕೊನೆಯ ಓವರ್​ವರೆಗೂ ಹೋರಾಟ ನಡೆಸಿತು(The team struggled until the last over)ಎಂದಿದ್ದಾರೆ.

ಹಲವು ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿರದ ಮಾರ್ಕ್​ ಚಾಪ್​ಮನ್​ 63 ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಹಕಾರಿಯಾದರು. ತಂಡ ಗಳಿಸಿದ 164 ರನ್​ ಸ್ಪರ್ಧಾತ್ಮಕ ಮೊತ್ತವಾಗಿತ್ತು. ನಾವು ಪಂದ್ಯದ ಮೊದಲ ಎಸೆತದಿಂದಲೇ ಉತ್ತಮವಾಗಿ ಆಡಲು ಬಯಸಿದ್ದೆವು. ಅದರಂತೆ ಆಡಿದ್ದೇವೆ ಎಂದು ತಂಡದ ಪ್ರದರ್ಶನವನ್ನ ಸಮರ್ಥಿಸಿಕೊಡರು.

ಇದನ್ನೂ ಓದಿ:ಭಾರತ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದು ಅಷ್ಟು ಸುಲಭವಲ್ಲ: ರಮೀಜ್​ ರಾಜಾ

ತಂಡ ಹಲವು ದಿನಗಳಿಂದ ಉತ್ತಮ ಸ್ಥಿತಿಯಲ್ಲಿದೆ. ಮಾರ್ಟಿನ್​ ಗುಪ್ಟಿಲ್​ ಬಿಡು ಬೀಸಾದ ಬ್ಯಾಟಿಂಗ್​ ತಂಡಕ್ಕೆ ಇನ್ನಷ್ಟು ಬಲ ತಂದುಕೊಟ್ಟಿದೆ. ತಂಡದ ಸದಸ್ಯರು ವಿದೇಶಿ ನೆಲದಲ್ಲಿಯೂ ಕೆಚ್ಚೆದೆಯ ಪ್ರದರ್ಶನ ನೀಡುತ್ತಿದ್ದಾರೆ. ಫಲಿತಾಂಶ ಏನೇ ಇದ್ದರೂ ಆಟಗಾರರ ಪ್ರದರ್ಶನ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ತಂಡ ಸಾಕಷ್ಟು ಬಲಿಷ್ಠವಾಗಿದೆ ಎಂದು ಟಿಮ್​ ಸೌಥಿ ಹೊಗಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.