ನ್ಯಾಟಿಂಗ್ಹ್ಯಾಮ್: ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಆಂಗ್ಲರ ಪಡೆ 95ರನ್ಗಳ ಹಿನ್ನಡೆ ಅನುಭವಿಸಿದೆ. ಇದರ ಮಧ್ಯೆ ವೇಗದ ಬೌಲರ್ ಜೆಮ್ಸ್ ಆ್ಯಂಡರ್ಸನ್(James Anderson) ಹೊಸ ದಾಖಲೆ ನಿರ್ಮಿಸಿದ್ದು, ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
-
YESSS @jimmy9 moves past Anil Kumble to become the third highest wicket-taker in Test cricket history!! 🐐
— England Cricket (@englandcricket) August 6, 2021 " class="align-text-top noRightClick twitterSection" data="
Scorecard/Videos: https://t.co/5eQO5BWXUp
🏴 #ENGvIND 🇮🇳 pic.twitter.com/3JUktTb3D1
">YESSS @jimmy9 moves past Anil Kumble to become the third highest wicket-taker in Test cricket history!! 🐐
— England Cricket (@englandcricket) August 6, 2021
Scorecard/Videos: https://t.co/5eQO5BWXUp
🏴 #ENGvIND 🇮🇳 pic.twitter.com/3JUktTb3D1YESSS @jimmy9 moves past Anil Kumble to become the third highest wicket-taker in Test cricket history!! 🐐
— England Cricket (@englandcricket) August 6, 2021
Scorecard/Videos: https://t.co/5eQO5BWXUp
🏴 #ENGvIND 🇮🇳 pic.twitter.com/3JUktTb3D1
ಮೊದಲ ಇನ್ನಿಂಗ್ಸ್ನಲ್ಲಿ ಚೇತೇಶ್ವರ್ ಪೂಜಾರಾ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಪಡೆದುಕೊಂಡು ಟೀಂ ಇಂಡಿಯಾ ಮಾಜಿ ಆಟಗಾರ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ್ದ 39 ವರ್ಷದ ಆ್ಯಂಡರ್ಸನ್ ಇದೀಗ ಕನ್ನಡಿಗನಾದ ಕೆ.ಎಲ್. ರಾಹುಲ್ ವಿಕೆಟ್ ಪಡೆದುಕೊಳ್ಳುವ ಮೂಲಕ ಅವರ ದಾಖಲೆ ಬ್ರೇಕ್ ಮಾಡಿದ್ದಾರೆ.
ನ್ಯಾಟಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಪಡೆದುಕೊಂಡು ಮಿಂಚಿರುವ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಕನ್ನಡಿಗ ಹಾಗೂ ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ದಾಖಲೆ ಮುರಿದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದರೆ, ಶೇನ್ ವಾರ್ನ್ 708 ವಿಕೆಟ್ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 620 ವಿಕೆಟ್ ಪಡೆದುಕೊಂಡಿರುವ ಆ್ಯಂಡರ್ಸನ್ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಟೀಂ ಇಂಡಿಯಾದ ಅನಿಲ್ ಕುಂಬ್ಳೆ 619 ವಿಕೆಟ್ಗಳೊಂದಿಗೆ 4ನೇ ಸ್ಥಾನ ಹಾಗೂ 563 ವಿಕೆಟ್ ಕಿತ್ತಿರುವ ಗ್ಲೇನ್ ಮೆಗ್ರಾತ್ 5ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿರಿ: England vs India: ಭಾರತಕ್ಕೆ ರಾಹುಲ್ - ಜಡೇಜಾ ಅರ್ಧಶತಕದ ಆಸರೆ.. 95 ರನ್ಗಳ ಮುನ್ನಡೆ
ಇನ್ನು ಟೀಂ ಇಂಡಿಯಾ ಪರ ತವರು ನೆಲದಲ್ಲೇ ಆ್ಯಂಡರ್ಸನ್ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ದಾಖಲೆ ಸಹ ಬರೆದಿದ್ದು, ಒಟ್ಟು 87ವಿಕೆಟ್ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಇದ್ದು, ಆಸ್ಟ್ರೇಲಿಯಾದ ವಿರುದ್ಧ 86 ವಿಕೆಟ್ ಕಿತ್ತಿದ್ದಾರೆ. ಉಳಿದಂತೆ ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಆಸ್ಟ್ರೇಲಿಯಾ ವಿರುದ್ಧ 84 ವಿಕೆಟ್ ಪಡೆದುಕೊಂಡಿದ್ದಾರೆ.