ಬರ್ಮಿಂಗ್ಹ್ಯಾಮ್(ಎಡ್ಜ್ಬಾಸ್ಟನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತದ ಹೊರತಾಗಿಯೂ, ಉಪನಾಯಕ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ಉತ್ತಮ ರನ್ಗಳಿಕೆ ಮಾಡಿದೆ. 67 ಓವರ್ಗಳಲ್ಲಿ 6 ವಿಕೆಟ್ನಷ್ಟಕ್ಕೆ 320ರನ್ಗಳಿಕೆ ಮಾಡಿದೆ. ತಂಡದ ಪರ ಪಂತ್ 146 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಜಡೇಜಾ 67ರನ್ಗಳಿಸಿ ಆಟವಾಡ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತ 20.3 ಓವರ್ಗಳಲ್ಲಿ 57ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ಗಳಾದ ಶುಬ್ಮನ್ ಗಿಲ್(17), ಪೂಜಾರಾ(13)ರನ್ಗಳಿಸಿ ಔಟಾದರು. ಎರಡು ವಿಕೆಟ್ ಪಡೆದುಕೊಳ್ಳುವಲ್ಲಿ ಆ್ಯಂಡರ್ಸನ್ ಯಶಸ್ವಿಯಾದರು. ಭಾರತ 2 ವಿಕೆಟ್ನಷ್ಟಕ್ಕೆ 57ರನ್ಗಳಿಕೆ ಮಾಡಿದ್ದ ವೇಳೆ ಮಳೆಯಾಟ ಶುರುವಾಗಿದ್ದರಿಂದ ಆಟಕ್ಕೆ ಸ್ವಲ್ಪ ಅಡಚಣೆಯಾಯಿತು.
ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲೂ ಭಾರತದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಹೀಗಾಗಿ, ತಂಡ 98 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೊಳಗಾಯಿತು. ಹನುಮ ವಿಹಾರಿ(20), ವಿರಾಟ್ ಕೊಹ್ಲಿ(11), ಶ್ರೇಯಸ್ ಅಯ್ಯರ್(15)ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ವಿರಾಟ್ ಮತ್ತೊಮ್ಮೆ ವೈಫಲ್ಯ: ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. 19 ಎಸೆತಗಳಲ್ಲಿ 11ರನ್ಗಳಿಕೆ ಮಾಡಿದ್ದ ವೇಳೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಮುಂದುವರೆಸಿದರು. ವಿರಾಟ್ ಕೊಹ್ಲಿ 2019ರಲ್ಲಿ ಕೊನೆಯದಾಗಿ ಶತಕ ಸಿಡಿಸಿದ್ದಾರೆ.
-
This is a nothing shot from Virat Kohli. Everyday he tries to find a new way to get out.#ENGvIND #ViratKohli pic.twitter.com/SOKJGOgAi0
— Cricket Videos 🏏 (@Abdullah__Neaz) July 1, 2022 " class="align-text-top noRightClick twitterSection" data="
">This is a nothing shot from Virat Kohli. Everyday he tries to find a new way to get out.#ENGvIND #ViratKohli pic.twitter.com/SOKJGOgAi0
— Cricket Videos 🏏 (@Abdullah__Neaz) July 1, 2022This is a nothing shot from Virat Kohli. Everyday he tries to find a new way to get out.#ENGvIND #ViratKohli pic.twitter.com/SOKJGOgAi0
— Cricket Videos 🏏 (@Abdullah__Neaz) July 1, 2022
ಇದನ್ನೂ ಓದಿ: ENG vs IND Test: ಆಪತ್ಭಾಂದವನಾದ ಪಂತ್! 89 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ ಉಪನಾಯಕ
ಇಂಗ್ಲೆಂಡ್ ಪರ ಆ್ಯಂಡರ್ಸನ್ 3 ವಿಕೆಟ್, ಮ್ಯಾಟಿ ಪಾಟ್ಸ್ 2 ವಿಕೆಟ್ ಪಡೆದುಕೊಂಡರೆ, ಬಾರ್ಡ್ 1 ವಿಕೆಟ್ ಕಿತ್ತರು.