ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯನ್ನು ಭಾರತ ತಂಡ ಗೆದ್ದಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 67 ರನ್ಗಳಿಂದ ಗೆದ್ದು ಮುನ್ನಡೆ ಸಾಧಿಸಿದ್ದ ಟೀಂ ಇಂಡಿಯಾ ಇಂದು ಕೋಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯವನ್ನೂ ಗೆದ್ದು ಬೀಗಿದೆ. 4 ವಿಕೆಟ್ಗಳಿಂದ ಭಾರತ ತಂಡ ಜಯ ದಾಖಲಿಸಿ ಇನ್ನೂ ಒಂದು ಪಂದ್ಯ ಬಾಕಿಯಿರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 39.4 ಓವರ್ಗಳಲ್ಲಿ 215 ರನ್ಗಳಿಗೆ ಆಲೌಟ್ ಆಗಿತ್ತು. ಭಾರತದ ಬೌಲರ್ಗಳು ಎದುರಾಳಿ ತಂಡವನ್ನು ಆರಂಭದಿಂದಲೂ ಇನ್ನಿಲ್ಲದಂತೆ ಕಾಡಿದರು. ಇದರ ನಡುವೆಯೂ ಲಂಕಾ ಪರ ನುವಾನಿದು ಫೆರ್ನಾಂಡೋ (50), ಕುಸಲ್ ಮೆಂಡಿಸ್ (34), ದುನಿತ್ ವೆಲ್ಲಲಗೆ (32), ವನಿಂದು ಹಸರಂಗ(21) ಮತ್ತು ಅವಿಷ್ಕ ಫೆರ್ನಾಂಡೋ 20 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಭಾರತ ಪರವಾಗಿ ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್ ಮತ್ತು ಉಮ್ರಾನ್ ಮಲಿಕ್ ಎರಡು ವಿಕೆಟ್, ಅಕ್ಷರ್ ಪಟೇಲ್ ಒಂದು ವಿಕೆಟ್ ಕಬಳಿಸಿದ್ದರು. ಈ ಮೂಲಕ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾಗಿದ್ದರು.
-
A victory by 4️⃣ wickets for #TeamIndia in the second #INDvSL ODI here in Kolkata and the series is sealed 2️⃣-0️⃣ 👏👏
— BCCI (@BCCI) January 12, 2023 " class="align-text-top noRightClick twitterSection" data="
Scorecard ▶️ https://t.co/jm3ulz5Yr1 @mastercardindia pic.twitter.com/f8HvDZRJIY
">A victory by 4️⃣ wickets for #TeamIndia in the second #INDvSL ODI here in Kolkata and the series is sealed 2️⃣-0️⃣ 👏👏
— BCCI (@BCCI) January 12, 2023
Scorecard ▶️ https://t.co/jm3ulz5Yr1 @mastercardindia pic.twitter.com/f8HvDZRJIYA victory by 4️⃣ wickets for #TeamIndia in the second #INDvSL ODI here in Kolkata and the series is sealed 2️⃣-0️⃣ 👏👏
— BCCI (@BCCI) January 12, 2023
Scorecard ▶️ https://t.co/jm3ulz5Yr1 @mastercardindia pic.twitter.com/f8HvDZRJIY
ಇತ್ತ, ಲಂಕಾ ನೀಡಿದ್ದ 216 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ 43 ಓವರ್ಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡರೂ 4 ವಿಕೆಟ್ಗಳ ಗೆಲುವು ಸಾಧಿಸಿತು. ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಅಜೇಯ 64 ರನ್ಗಳನ್ನು ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾರ್ದಿಕ್ ಪಾಂಡ್ಯ (36), ಶ್ರೇಯಸ್ ಅಯ್ಯರ್ (28), ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ತಲಾ 21 ರನ್ಗಳ ಕೊಡುಗೆ ನೀಡಿದರು.
ಆರಂಭಿಕ ಆಘಾತ: ಆದರೆ, ಟೀಂ ಇಂಡಿಯಾದ ಆರಂಭದ ಅಷ್ಟೊಂದು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 41 ರನ್ಗಳು ಆಗುವಷ್ಟರಲ್ಲೇ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿಕೊಂಡರು. ಶುಭಮನ್ ಗಿಲ್ ಜೊತೆ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 21 ಎಸೆತಗಳಲ್ಲಿ ಒಂದು ಸಿಕ್ಸರ್, 2 ಬೌಂಡರಿಗಳೊಂದಿಗೆ 17 ರನ್ ಗಳಿಸಿ ಚಾಮಿಕಾ ಕರುಣಾರತ್ನೆ ಎಸೆತದಲ್ಲಿ ಕ್ಯಾಚ್ ಕೊಟ್ಟರು. ಇದರ ಬೆನ್ನಲ್ಲೇ ಶುಭಮನ್ ಗಿಲ್ ಓಟಾದರು. 12 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ ಬಿರುಸಿನ ಬ್ಯಾಟ್ ಬೀಸಿದರೂ ಗಿಲ್ 21 ರನ್ಗಳನ್ನು ಮಾತ್ರ ಕಲೆ ಹಾಕಿದರು.
ಮತ್ತೊಂದೆಡೆ ಭರವಸೆ ಆಟಗಾರ, ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲಿ ಬೇಗನೇ ಪೆವಿಲಿಯನ್ ಮರಳಿದರು. 9 ಎಸತೆಗಳಲ್ಲಿ ಕೇವಲ ಒಂದು ಬೌಂಡರಿಯನ್ನು ಬಾರಿಸಿ ಲಹಿರು ಕುಮಾರ ಬೌಲಿಂಗ್ನಲ್ಲಿ ಬೋಲ್ಡ್ ಆದರು. ನಂತರ ಬಂದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ 24 ರನ್ಗಳು ಜೊತೆಯಾಟ ನೀಡಿದರು. ಈ ವೇಳೆ 28 ರನ್ ಗಳಿಸಿದ್ದ ಶ್ರೇಯಸ್ ಕಸುನ್ ರಜಿತ ಅವರ ಎಲ್ಬಿ ಬಲೆಗೆ ಬಿದ್ದರು.
ಕೆಎಲ್ ರಾಹುಲ್ ಅರ್ಧ ಶತಕ: ಶ್ರೇಯಸ್ ನಂತರ ರಾಹುಲ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟ್ ಬೀಸಿದರು. ಐದನೇ ವಿಕೆಟ್ಗೆ ಈ ಜೋಡಿ 119 ಎಸತೆಗಳಲ್ಲಿ 75 ರನ್ಗಳನ್ನು ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ, 53 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 36 ರನ್ಗಳನ್ನು ಬಾರಿಸಿದ್ದ ಪಾಂಡ್ಯ ಚಾಮಿಕಾ ಕರುಣಾರತ್ನೆ ವಿಕೆಟ್ ಒಪ್ಪಿಸಿದರು. ಇತ್ತ, ಕೆಎಲ್ ರಾಹುಲ್ ಯಾವುದೇ ಒತ್ತಡಕ್ಕೆ ಒಳಗಾದೆ ತಮ್ಮ ಆಟ ಮುಂದುವರಿಸಿ, ಅರ್ಧ ಶತಕ ಸಿಡಿಸಿದರು.
ಜೊತೆಗೆ ಅಕ್ಷರ್ ಪಟೇಲ್ ಜೊತೆಗೂಡಿ 30 ರನ್ ಮತ್ತು ಕುಲ್ದೀಪ್ ಯಾದವ್ ಜೊತೆ ಸೇರಿ 28 ರನ್ಗಳನ್ನು ಸೇರಿಸಿದ ರಾಹುಲ್ ತಂಡವನ್ನು ಗೆಲುವಿನ ತಡ ಸೇರಿಸಿದರು. ಅಜೇಯರಾಗಿ ಉಳಿದ ರಾಹುಲ್, 103 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 64 ರನ್ ಕಲೆ ಹಾಕಿದರು. ಮತ್ತೊಬ್ಬ ಅಜೇಯ ಆಟಗಾರರ 10 ಎಸೆತಗಳಲ್ಲಿ 10 ರನ್ ಬಾರಿಸಿದರು. ಇತ್ತ, ಲಂಕಾ ಪರವಾಗಿ ಚಾಮಿಕಾ ಕರುಣಾರತ್ನೆ, ಲಹಿರು ಕುಮಾರ ತಲಾ ಎರಡು ವಿಕೆಟ್ ಮತ್ತು ಕಸುನ್ ರಜಿತ, ಧನಂಜಯ ಡಿ ಸಿಲ್ವ ತಲಾ ಒಂದು ವಿಕೆಟ್ ಪಡೆದರು. ಜನವರಿ 15ರಂದು ತಿರುವನಂತಪುರಂನಲ್ಲಿ ಕೊನೆಯ ಮತ್ತು ಮೂರನೇ ಪಂದ್ಯ ನಡೆಯಲಿದೆ.
ಇದನ್ನೂ ಓದಿ: IND vs SL 2nd ODI: 39.4 ಓವರ್ಗಳಲ್ಲಿ 215 ರನ್ ಗಳಿಸಿ ಸರ್ವ ಪತನ ಕಂಡ ಲಂಕಾ