ರಾವಲ್ಪಿಂಡಿ: 5 ದಿನಗಳ ಟೆಸ್ಟ್ ಪಂದ್ಯದಲ್ಲಿ ಕೇವಲ ಬ್ಯಾಟರ್ಗಳೇ ಪ್ರಾಬಲ್ಯ ಮೆರದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿದೆ. ಇಡೀ ಪಂದ್ಯದಲ್ಲಿ ಬೌಲರ್ಗಳು ಕೇವಲ 14 ವಿಕೆಟ್ ಪಡೆದಯಲಷ್ಟೇ ಶಕ್ತವಾದರು, ಅದರೂಲ್ಲೂ ವಿಶ್ವಶ್ರೇಷ್ಠ ಬೌಲರ್ಗಳನ್ನು ಹೊಂದಿರುವ ಆಸ್ಟ್ರೇಲಿಯಾ ಬೌಲರ್ಗಳಿಗೆ ಸಿಕ್ಕಿದ್ದು ಕೇವಲ 4 ಎನ್ನುವುದೇ ಆಶ್ಚರ್ಯ ಸಂಗತಿ.
ಪಾಕಿಸ್ತಾನ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 476 ರನ್ಗಳಿಸಿತ್ತು. ಇಮಾಮ್ ಉಲ್ ಹಕ್ 157 ರನ್ಗಳಿಸಿದರೆ, ಹಿರಿಯ ಬ್ಯಾಟರ್ ಅಜರ್ ಅಲಿ 185 ರನ್ಗಳಿಸಿದ್ದರು.
ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಕೂಡ 140 ಓವರ್ಗಳ ಕಾಲ ಬ್ಯಾಟಿಂಗ್ 459 ರನ್ಗಳಿಸಿತ್ತು. ಉಸ್ಮಾನ್ ಖವಾಜ 97, ವಾರ್ನರ್ 68, ಲಾಬುಶೇನ್ 90 , ಸ್ಟೀವ್ ಸ್ಮಿತ್ 78, ಕ್ಯಾಮರಾನ್ ಗ್ರೀನ್ 48 ರನ್ಗಳಿಸಿದ್ದರು.
ಪಾಕಿಸ್ತಾನ ಪರ ನೌಮನ್ ಅಲಿ 107 ರನ್ ನೀಡಿ 6 ವಿಕೆಟ್ ಪಡೆದು ವೃತ್ತಿ ಜೀವನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು.
ಇನ್ನು 17ರನ್ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಯಾವುದೇ ವಿಕೆಟ್ ಕಳೆದುಕೊಳ್ಳದೇ 252 ರನ್ಗಳಿಸಿದ್ದ ವೇಳೆ ಎರಡೂ ತಂಡದ ಬ್ಯಾಟರ್ಗಳು ಪಂದ್ಯವನ್ನು ಡ್ರಾ ಎಂದು ಘೋಷಿಸಲು ಒಪ್ಪಿಕೊಂಡವು. ಇಮಾಮ್ ಉಲ್ ಹಕ್ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದರು. 223 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 111ರನ್ಗಳಿಸಿದರೆ, ಅಬ್ದುಲ್ಲಾ ಶಫಿಕ್ 242 ಎಸೆತಗಳಲ್ಲಿ 15 ಬೌಂಡರಿ ಮತ್ತು 1ಸಿಕ್ಸರ್ ಸಹಿತ ಅಜೇಯ 136 ರನ್ಗಳಿಸಿತು.
ಈ ಜೋಡಿ ಆಸ್ಟ್ರೇಲಿಯಾ ವಿರುದ್ಧ ಎರಡೂ ಇನ್ನಿಂಗ್ಸ್ನಲ್ಲೂ ಶತಕದ ಜೊತೆಯಾಟ ನೀಡಿದ ಮೊದಲ ಪಾಕಿಸ್ತಾನ ಜೋಡಿ ಎನಿಸಿಕೊಂಡಿತು. ಇವರಿಬ್ಬರು ಮೊದಲ ಇನ್ನಿಂಗ್ಸ್ನಲ್ಲೂ 105 ರನ್ಗಳ ಜೊತೆಯಾಟ ನೀಡಿದ್ದರು.
ಎರಡೂ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ ಇಮಾಮ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.