ETV Bharat / sports

ಭಾರತ ಸುರಕ್ಷಿತವಾಗಿಲ್ಲದಿದ್ದರೆ, ಅಲ್ಲಿ ಟಿ -20 ವಿಶ್ವಕಪ್​​ ನಡೆಸುವುದು ಉತ್ತಮವಲ್ಲ: ಕಮ್ಮಿನ್ಸ್​

author img

By

Published : May 7, 2021, 5:39 PM IST

Updated : May 7, 2021, 6:03 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಪ್ಯಾಟ್​ ಕಮ್ಮಿನ್ಸ್​​ ಇದೀಗ ಟಿ - 20 ವಿಶ್ವಕಪ್ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

Pat Cummins
Pat Cummins

ಮಾಲ್ಡೀವ್ಸ್​​​: ಭಾರತದಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಾಗಿರುವ ಕಾರಣ ಅದೇ ಕಾರಣಕ್ಕಾಗಿ ಇಂಡಿಯನ್​ ಪ್ರೀಮಿಯರ್ ಲೀಗ್​ ಟೂರ್ನಿ ರದ್ದುಗೊಂಡಿದೆ. ಇದೀಗ ಮುಂಬರುವ ಟಿ-20 ವಿಶ್ವಕಪ್ ಕೂಡ ಭಾರತದಲ್ಲಿ ಆಯೋಜನೆಗೊಂಡಿದ್ದು, ಅದರ ಮೇಲೂ ಕೋವಿಡ್​ ಕರಿನೆರಳು ಬೀಳುವ ಸಾಧ್ಯತೆ ಇದೆ.

ಇದೇ ವಿಷಯವಾಗಿ ಆಸ್ಟ್ರೇಲಿಯಾದ ಬೌಲಿಂಗ್​ ಆಲ್​ರೌಂಡರ್​​ ಪ್ಯಾಟ್ ಕಮ್ಮಿನ್ಸ್​ ಮಾತನಾಡಿದ್ದು, ಭಾರತ ಸುರಕ್ಷಿತವಾಗಿಲ್ಲದಿದ್ದರೆ ಅಲ್ಲಿ ಟಿ-20 ವಿಶ್ವಕಪ್​ ಆಡಿಸುವುದು ಒಳ್ಳೆಯದಲ್ಲ ಎಂದಿದ್ದಾರೆ. ಜತೆಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ಗೆ ಸ್ಥಳಾಂತರ ಮಾಡುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಟಿ-20 ವಿಶ್ವಕಪ್​​ ನಡೆಯಲು ಆರು ತಿಂಗಳ ಕಾಲ ಬಾಕಿ ಉಳಿದಿದ್ದು, ಈಗಲೇ ಅಲ್ಲಿನ ಸರ್ಕಾರ ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಈ ಸಲದ ಐಪಿಎಲ್​ ದುಬೈನಲ್ಲಿ ಆಯೋಜನೆ ಮಾಡಿದ್ದರೇ ಉತ್ತಮವಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

ಐಪಿಎಲ್​ ವೇಳೆ ಬಯೋ ಬಬಲ್​ ಹೊರತಾಗಿ ಕೂಡ ಪ್ಲೇಯರ್ಸ್​ಗಳಲ್ಲಿ ಕೋವಿಡ್​ ಕಾಣಿಸಿಕೊಂಡಿರುವುದು, ಐಸಿಸಿ ಈವೆಂಟ್​ ಮೇಲೆ ಕರಿನೆರಳು ಬೀರಿದೆ. ಭಾರತದಲ್ಲಿ ಟಿ - 20 ವಿಶ್ವಕಪ್​ ನಡೆಸಬೇಕೇ? ಅಥವಾ ಬೇಡ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ನವೆಂಬರ್ ವೇಳೆಗೆ ಭಾರತದಲ್ಲಿ ಮೂರನೇ ಅಲೆ ಲಗ್ಗೆ ಹಾಕಲಿದೆ ಎಂಬ ಮಾತು ಕೇಳಿ ಬರುತ್ತಿರುವ ಕಾರಣ ಬಿಸಿಸಿಐ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾತುರಕ್ಕೆ ಕಾರಣವಾಗಿದೆ.​

ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಪ್ಯಾಟ್​ ಕಮ್ಮಿನ್ಸ್​​ ಯುನಿಸೆಫ್​ ಆಸ್ಟ್ರೇಲಿಯಾ ಮೂಲಕ 37 ಲಕ್ಷ, 36 ಸಾವಿರ ರೂ. ಸಹಾಯಧನ ನೀಡಿದ್ದಾರೆ. ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಲಕ್ಷಾಂತರ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ.

Last Updated : May 7, 2021, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.