ETV Bharat / sports

ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದರಿಂದ ಗೆಲುವು ಸಾಧ್ಯವಾಯಿತು: ಮ್ಯಾಕ್ಸ್‌ವೆಲ್

author img

By ETV Bharat Karnataka Team

Published : Nov 8, 2023, 8:10 AM IST

ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ನಿನ್ನೆ ನಡೆದ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ರೋಚಕವಾಗಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ ಹೋರಾಡಿ ತಮ್ಮ ತಂಡವನ್ನು ಸೆಮಿ ಫೈನಲ್‌ಗೇರಿಸಿದರು.

Etv Bharat
Etv Bharat

ಮುಂಬೈ(ಮಹಾರಾಷ್ಟ್ರ): ಗ್ಲೆನ್‌ ಮಾಕ್ಸ್‌ವೆಲ್‌ ದ್ವಿಶತಕದ ಬ್ಯಾಟಿಂಗ್‌ ಫಲವಾಗಿ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿತು. ಈ ಪಂದ್ಯದ ಬಳಿಕ ಮಾತನಾಡಿದ ಮ್ಯಾಕ್ಸ್‌ವೆಲ್, "ನಂಬಿಕೆ ಯಾವಾಗಲೂ ಇತ್ತು. ತಂಡದ ಅಮೋಘ ಗೆಲುವಿನ ನಂತರ ಅದು ಮತ್ತಷ್ಟು ಹೆಚ್ಚಾಯಿತು" ಎಂದರು.

"ನಾನು ಇಂದು ಹೆಚ್ಚು ವ್ಯಾಯಾಮ ಮಾಡಿರಲಿಲ್ಲ. ಅದು ನನ್ನ ಆಟದ ಸಮಯದಲ್ಲಿ ಪರಿಣಾಮ ಬೀರಿತು. ಇದರಿಂದಾಗಿ ಪಂದ್ಯದ ವೇಳೆ ಓಡಾಡಲು ತುಂಬಾ ತೊಂದರೆಯಾಯಿತು" ಎಂದು ಹೇಳಿದರು.

ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಿಮ್ಮ ಮನಸ್ಸಿನಲ್ಲಿ ಏನಿತ್ತು ಎಂದು ಕೇಳಿದ ಪ್ರಶ್ನೆಗೆ, "ಸಾಧ್ಯವಾದಷ್ಟು ಬ್ಯಾಟಿಂಗ್ ಮಾಡಿದರೆ ಸಾಕೆಂಬ ಯೋಜನೆ ಇತ್ತು. ಸಕಾರಾತ್ಮಕವಾಗಿ ಹಾಗೂ ಎಚ್ಚರಿಕೆಯಿಂದ ಆಟ ಮುಂದುವರಿಸಿದೆ. ಎದುರಾಳಿ ತಂಡವರು ಚೆನ್ನಾಗಿ ಬೌಲ್ ಮಾಡಿದರು. ನನಗೆ ದೊರೆತ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದರಿಂದ ಗೆಲುವಿನ ಗುರಿ ಮುಟ್ಟಲು ಸಾಧ್ಯವಾಯಿತು. ಇದು ನಾನು ಹೆಮ್ಮೆಪಡುವ ಸಂಗತಿ" ಎಂದು ತಿಳಿಸಿದರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಮ್ಯಾಕ್ಸ್​ವೆಲ್​ ಭರ್ಜರಿ ದ್ವಿಶತಕ.. ಅಫ್ಘಾನ್​ ವಿರುದ್ಧ ಆಸ್ಟ್ರೇಲಿಯಾಕ್ಕೆ ಊಹೆಗೂ ಮೀರಿದ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.