ಅಹಮದಾಬಾದ್, ಗುಜರಾತ್: ಪಾಕಿಸ್ತಾನ ತಂಡವನ್ನು ಹುರಿದುಂಬಿಸಲು ಇಬ್ಬರು ಟೆಕ್ಕಿಗಳು ಟೆಕ್ಸಾಸ್‌ನ ಹೂಸ್ಟನ್‌ನಿಂದ ಭಾರತಕ್ಕೆ ಬಂದಿದ್ದಾರೆ. ಈ ಇಬ್ಬರು ಯುವಕರು ಮೊಟೆರಾದಲ್ಲಿ ಪಾಕಿಸ್ತಾನದ ಜೆರ್ಸಿಯಲ್ಲಿ ಕಾಣಿಸಿಕೊಂಡರು. ಮೊಟೆರಾದ ನೀಲಿ ಸಮುದ್ರದಲ್ಲಿ ಉಜ್ರೋಹ್ ಮತ್ತು ಆಸಿಫ್ ಮಾತ್ರ ಇಬ್ಬರು ಪಾಕಿಸ್ತಾನಿ ಬೆಂಬಲಿಗರಾಗಿರುವುದು ಗಮನಾರ್ಹ.
ಇವರಿಬ್ಬರು ಮೂಲತಃ ಉತ್ತರ ಪ್ರದೇಶದ ರಾಂಪುರದವರಾಗಿದ್ದರೂ ಈ ಪಂದ್ಯಕ್ಕಾಗಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ನಾವು ಪಾಕ್ಗೆ ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ನಾಲ್ಕು ದಿನಗಳ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗಬೇಕು. ನಮ್ಮ ಆತಿಥೇಯರು ಭಾರತೀಯರಾಗಿದ್ದಾರೆ. ಅವರು ಟೀಮ್ ಇಂಡಿಯಾವನ್ನು ಬೆಂಬಲಿಸುತ್ತಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಉಜ್ರೋಹ್ ಹೇಳಿದರು.
ಉಜ್ರೋಹ್ ಮತ್ತು ಆಸಿಫ್ ಇಬ್ಬರೂ ಹೂಸ್ಟನ್‌ನ ಟೆಕ್ಕಿಗಳು. ಪಾಕಿಸ್ತಾನ ತಂಡದ ಜೆರ್ಸಿಯಲ್ಲಿ ಅವರನ್ನು ಗುರುತಿಸಿದ ಮಾಧ್ಯಮ ಪ್ರತಿನಿಧಿಗಳು ಹಲವಾರು ಫೋಟೋಗಳನ್ನು ಕ್ಲಿಕ್ ಮಾಡಿದರು. ಬಳಿಕ ಮಾತನಾಡಿದ ಆಸಿಫ್, ನನ್ನ ಮದುವೆಯಲ್ಲೂ ಇಷ್ಟೊಂದು ಫೋಟೋಗಳನ್ನು ಕ್ಲಿಕ್ ಮಾಡಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಓದಿ: India vs Pakistan ಹೈವೋಲ್ಟೇಜ್ ಪಂದ್ಯ: ಪಾಕ್ ವಿರುದ್ಧ ಟಾಸ್ ಗೆದ್ದ ರೋಹಿತ್ ಪಡೆ ಫೀಲ್ಡಿಂಗ್ ಆಯ್ಕೆ
ಪಾಕಿಸ್ತಾನ ತಂಡಕ್ಕೆ ಸಿಗದ ತವರು ಬೆಂಬಲ: ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್ ತಂಡವು ಏಕಾಂಗಿಯಾಗಿದೆ. ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಭಾರತಕ್ಕೆ ಬರಲು ವೀಸಾ ನೀಡಿಲ್ಲ. ಇದಲ್ಲದೇ 120 ಪಾಕಿಸ್ತಾನಿ ಪತ್ರಕರ್ತರ ಪೈಕಿ 65 ಮಂದಿಗೆ ವೀಸಾ ನೀಡಲು ಐಸಿಸಿ ಶಿಫಾರಸು ಮಾಡಿದೆ. ಭಾರತ - ಪಾಕಿಸ್ತಾನ ಪಂದ್ಯದ ಮೊದಲು ಅಂದ್ರೆ, ಪಂದ್ಯದ ಮುನ್ನಾದಿನದಂದು ಒಬ್ಬ ಪಾಕಿಸ್ತಾನಿ ಪತ್ರಕರ್ತ ಮಾತ್ರ ಅಹಮದಾಬಾದ್‌ಗೆ ತೆರಳಬಹುದಾಗಿತ್ತು. ಇತರ ಕೆಲವು ಪತ್ರಕರ್ತರು ಈ ದಿನ ಬೆಳಗ್ಗೆ ತಲುಪಲು ಅವಕಾಶ ನೀಡಲಾಗಿತ್ತು. ತಂಡವು ತನ್ನ ಬೆಂಬಲಿಗರಿಲ್ಲದೇ ಮತ್ತು ಮಾಧ್ಯಮಗಳ ಅನುಪಸ್ಥಿತಿಯಲ್ಲಿ ವಿಶ್ವಕಪ್ 2023 ಪಂದ್ಯವನ್ನು ಆಡುತ್ತಿದೆ. ಇದು ತಂಡಕ್ಕೆ ಏಕಾಂಗಿ ಆಗಿರುವ ಭಾವನೆ ನೀಡುತ್ತಿದೆ.
ಮಾಲ್, ಬಿರಿಯಾನಿ, ಖಕ್ರಾ ಮತ್ತು ಜಿಲೇಬಿ: ಪಾಕಿಸ್ತಾನ ತಂಡ ಭಾರತದಲ್ಲಿ ಹೆಚ್ಚಿನ ಸಮಯವನ್ನು ಹೈದರಾಬಾದ್‌ನಲ್ಲಿ ಕಳೆದಿದೆ. ಅಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿತ್ತು. ಆದರೆ, ಇತರ ತಂಡಗಳಿಗೆ ಹೋಲಿಸಿದರೆ ಅವರು ಭದ್ರತೆಯ ಅಡಿಯಲ್ಲಿದ್ದಾರೆ. ಹೈದರಾಬಾದ್‌ನಲ್ಲಿ ಸಹಜವಾಗಿಯೇ ಬಿಗಿ ಭದ್ರತೆಯ ನಡುವೆ ಜಿವಿಕೆ ಮಾಲ್‌ಗೆ ಭೇಟಿ ನೀಡಿದ ಅವರು ಅಲ್ಲಿ ಬಿರಿಯಾನಿ ಮಾತ್ರ ಸವಿಯಲು ಸಾಧ್ಯವಾಗಿತ್ತು. ಸದ್ಯ ಪಾಕಿಸ್ತಾನ ತಂಡ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಅಗ್ರ ತಂಡಗಳ ಪಟ್ಟಿಯಲ್ಲಿದೆ.