ETV Bharat / sports

ಹಾರ್ದಿಕ್​ ಹಿಮ್ಮಡಿಗೆ ಗಾಯ, ನ್ಯೂಜಿಲೆಂಡ್​ ಪಂದ್ಯಕ್ಕೆ ಅಲಭ್ಯ.. ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲಿರುವ ಸ್ಟಾರ್​ ಆಲ್​ರೌಂಡರ್​ - ಬಾಂಗ್ಲಾ ವಿರುದ್ಧ ಗೆದ್ದ ಭಾರತ

ವಿಶ್ವಕಪ್ ಅಭಿಯಾನದಲ್ಲಿ ಭಾರತಕ್ಕೆ ಮೊದಲ ಪೆಟ್ಟು ಬಿದ್ದಿದೆ, ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಔಟ್​ ಆಗಿದ್ದಾರೆ.

Hardik Pandya injury update  Star all rounder to miss crucial match  miss crucial match against New Zealand  ICC Cricket World Cup 2023  ನ್ಯೂಜಿಲೆಂಡ್​ ಪಂದ್ಯಕ್ಕೆ ಅಲಭ್ಯ  ಹಾರ್ದಿಕ್​ ಹಿಮ್ಮಡಿಗೆ ಗಾಯ  ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಲಿರುವ ಸ್ಟಾರ್​ ವಿಶ್ವಕಪ್ ಅಭಿಯಾನದಲ್ಲಿ ಭಾರತಕ್ಕೆ ಮೊದಲ ಪೆಟ್ಟು  ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಔಟ್  ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ  ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಐದನೇ ಪಂದ್ಯ  ಪಾಂಡ್ಯ ಧರ್ಮಶಾಲಾಗೆ ಪ್ರಯಾಣ ಬೆಳೆಸುವುದಿಲ್ಲ  ಹಾರ್ದಿಕ್ ಅವರ ಎಡ ಹಿಮ್ಮಡಿಗೆ ಗಾಯ  ಬಾಂಗ್ಲಾ ವಿರುದ್ಧ ಗೆದ್ದ ಭಾರತ  ರೋಹಿತ್​ ಶರ್ಮಾ ಹೇಳಿದ್ದು ಹೀಗೆ
ಹಾರ್ದಿಕ್​ ಹಿಮ್ಮಡಿಗೆ ಗಾಯ, ನ್ಯೂಜಿಲೆಂಡ್​ ಪಂದ್ಯಕ್ಕೆ ಅಲಭ್ಯ
author img

By ETV Bharat Karnataka Team

Published : Oct 20, 2023, 1:13 PM IST

ಪುಣೆ, ಮಹಾರಾಷ್ಟ್ರ: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಭಾರತ ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಐದನೇ ಪಂದ್ಯವನ್ನು ಆಡಬೇಕಾಗಿದೆ. ಭಾರತದ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ತೀವ್ರ ಪೈಪೋಟಿ ಎದುರಿಸುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಪಾಂಡ್ಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವು ಆಡುವ 11 ರ ತಂಡದ ಬಗ್ಗೆ ಚಿಂತೆಗೀಡು ಮಾಡಿದೆ.

ಅಕ್ಟೋಬರ್ 19 ರಂದು ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಅವರ ಎಡ ಹಿಮ್ಮಡಿಗೆ ಗಾಯವಾಗಿತ್ತು. ಇದಾದ ನಂತರ ಮೈದಾನದಿಂದ ಹೊರಗೆ ಹೋದ ಅವರು, ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಜೈ ಶಾ ಹೇಳಿದ್ದೇನು?: ಭಾರತೀಯ ಉಪನಾಯಕ ಮತ್ತು ಸ್ಟಾರ್ ಆಲ್ ರೌಂಡರ್ ಪಾಂಡ್ಯ ಗಾಯಗೊಂಡಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮಾಹಿತಿ ನೀಡಿದ್ದಾರೆ. ಪಾಂಡ್ಯ ಅವರ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಿದರು.

ಈಗ ಇತ್ತೀಚಿನ ಮಾಹಿತಿ ಪ್ರಕಾರ, ಪಾಂಡ್ಯ ಧರ್ಮಶಾಲಾಗೆ ಪ್ರಯಾಣ ಬೆಳೆಸುವುದಿಲ್ಲ. ಬದಲಿಗೆ ಅವರು ವೈದ್ಯಕೀಯ ಸಹಾಯಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ತೆರಳಲಿದ್ದಾರೆ. ಚಿಕಿತ್ಸೆ ಬಳಿಕ ಅವರು ಲಖನೌದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇರವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಅಕ್ಟೋಬರ್ 19 ರಂದು ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಇದರಿಂದಾಗಿ ಅವರು ತಮ್ಮ ಮೊದಲ ಓವರ್ ಕೂಡ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ, ವಿರಾಟ್ ಕೊಹ್ಲಿ ಅವರ ಸ್ಥಾನದಲ್ಲಿ 3 ಎಸೆತಗಳನ್ನು ಬೌಲ್ ಮಾಡಿದರು. ವಿರಾಟ್ ಸುಮಾರು 6 ವರ್ಷಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿರುವುದು ಗಮನಾರ್ಹ..

ಈ ಬಾರಿಯ ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನ ಸಾಧಾರಣವಾಗಿದೆ. ಬೌಲಿಂಗ್​ನಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧದ ಒಂದೇ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅಜೇಯ 11 ರನ್ ಗಳಿಸಿದ್ದರು.

ರೋಹಿತ್​ ಶರ್ಮಾ ಹೇಳಿದ್ದು ಹೀಗೆ..: ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಹಾರ್ದಿಕ್ ಸ್ಥಿತಿಯ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದರು. ಹಾರ್ದಿಕ್ ಪಾಂಡ್ಯಗೆ ಸ್ವಲ್ಪ ನೋವಿದೆ. ಆದರೆ ಚಿಂತೆ ಮಾಡುವ ಅವಶ್ಯಕತೆ ಏನೂ ಇಲ್ಲ ಎಂದು ಹಿಟ್‌ಮ್ಯಾನ್ ಪಂದ್ಯದ ನಂತರ ಹೇಳಿದ್ದರು. ಆದರೆ, ಇದೀಗ ಆಲ್ ರೌಂಡರ್ ಪಾಂಡ್ಯ ಕಿವೀಸ್ ತಂಡದ ವಿರುದ್ಧದ ಪಂದ್ಯದಿಂದ ಔಟ್ ಆಗಿದ್ದಾರೆ.

ಬಾಂಗ್ಲಾ ವಿರುದ್ಧ ಗೆದ್ದ ಭಾರತ: ಪುಣೆಯಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 51 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ನಲ್ಲಿ ತನ್ನ ವಿಜಯದ ಅಭಿಯಾನವನ್ನು ಮುಂದುವರೆಸಿದೆ. ಈ ವಿಶ್ವಕಪ್‌ನಲ್ಲಿ ಭಾರತಕ್ಕೆ ಸತತ ನಾಲ್ಕನೇ ಜಯವಾಗಿದೆ. ರೋಹಿತ್ ಶರ್ಮಾ ಅಂಡ್ ಕಂಪನಿ 51 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್​ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ (48 ರನ್) ಮತ್ತು ಶುಭಮನ್ ಗಿಲ್ (53 ರನ್) ನಂತರ ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಗಳಿಸಿ ಪ್ರಬಲ ಇನ್ನಿಂಗ್ಸ್ ಆಡಿದರು. ಕಿಂಗ್ ಕೊಹ್ಲಿಗೆ ಕೆಎಲ್ ರಾಹುಲ್ (ಅಜೇಯ 34 ರನ್​) ಅವರ ಸಂಪೂರ್ಣ ಬೆಂಬಲವನ್ನು ನೀಡಿದರು. ಭಾರತ 41.3 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ ಗುರಿಯನ್ನು ತಲುಪಿತು.

ಓದಿ: 2023ರ ವಿಶ್ವಕಪ್ ಮೊದಲ ಶತಕ ಬಾರಿಸಿದ ಕೊಹ್ಲಿ.. ವಿರಾಟ್ ಸಾಧನೆ​ ಹಿಂದೆ ಇದೆ ಕನ್ನಡಿಗನ ಕೊಡುಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.