ETV Bharat / sports

ಮೊದಲು ತಾಯಿ ಭೇಟಿ, ನಂತರ ಪಾಕ್​ ಮೇಲೆ ದೃಷ್ಟಿ: ಯಾರ್ಕರ್​ ಸ್ಪೆಷಲಿಸ್ಟ್​ ಬುಮ್ರಾ - ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ವಿಕೆಟ್

Cricket World Cup 2023: ಭಾರತದ ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಮೊಟೆರಾದಲ್ಲಿ ನಡೆಯಲಿದ್ದು, ಇದಕ್ಕಾಗಿ ಬುಮ್ರಾ ಭರ್ಜರಿ ತಯಾರಿ ನಡೆಸಿದ್ದಾರೆ. ಬುಮ್ರಾ ಅವರು ಮೊಟೆರಾಗೆ ಹೋದ ತಕ್ಷಣ ಅವರು ತಮ್ಮ ತಾಯಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.

Cricket World Cup  Jasprit Bumrah  focuses on next target Pakistan in Motera  ಯಾರ್ಕರ್​ ಸ್ಪೆಷಲಿಸ್ಟ್​ ಬುಮ್ರಾ  ಮೊದಲು ತಾಯಿ ಭೇಟಿ  ಭಾರತದ ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕ್  ಬುಮ್ರಾ ಭರ್ಜರಿ ತಯಾರಿ  ಭಾರತ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು  ಜಸ್ಪ್ರೀತ್ ಬುಮ್ರಾ ಬೌಲಿಂಗ್​ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ವಿಕೆಟ್  ನಾನು ವಿಕೆಟ್ ಪಡೆಯಲು ಯತ್ನಿಸುತ್ತೇನೆ
ಯಾರ್ಕರ್​ ಸ್ಪೆಷಲಿಸ್ಟ್​ ಬುಮ್ರಾ
author img

By ETV Bharat Karnataka Team

Published : Oct 12, 2023, 12:41 PM IST

ನವದೆಹಲಿ: ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದರೆ, ಜಸ್ಪ್ರೀತ್ ಬುಮ್ರಾ ಬೌಲಿಂಗ್​ ಮೂಲಕ ಮಿಂಚಿದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ವಿಕೆಟ್ ಪಡೆದರು. ಅವರ ಬಿಗಿಯಾದ ಬೌಲಿಂಗ್ ದಾಳಿಯಿಂದ ಅಫ್ಘಾನಿಸ್ತಾನ ತಂಡ 272 ರನ್ ಗಳಿಸಲಷ್ಟೇ ಶಕ್ತವಾಯಿತು. ಇದು ವಿಶ್ವಕಪ್‌ನಲ್ಲಿ ಬುಮ್ರಾ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಫಲಿತಾಂಶದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ನಾಲ್ಕು ವಿಕೆಟ್ ಪಡೆದ ಮಾತ್ರಕ್ಕೆ ತುಂಬಾ ಸಂತೋಷವಾಗಿದ್ದೇನೆ ಎಂದು ಅರ್ಥವಲ್ಲ. ನಾನು ಸದಾ ನನ್ನ ತಯಾರಿಯಲ್ಲಿ ಇರುತ್ತೇನೆ. ನನಗೆ ಸರಿ ಯಾವುದು ಅನಿಸುತ್ತದೇ ಅದನ್ನೇ ಮಾಡುತ್ತೇನೆ. ನಾನು ವಿಕೆಟ್ ಪಡೆಯಲು ಯತ್ನಿಸುತ್ತೇನೆ. ವಿಕೆಟ್​ಗಳು ಯಾವ ರೀತಿ ಪಡೆಯಬೇಕು ಎಂಬುದು ಯೋಚಿಸುತ್ತೇನೆ ಅಂತಾ ಹೇಳಿದರು.

ನೋಡಿ.. ಪ್ರತಿ ತಂಡವು ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳನ್ನು ಹೊಂದಿರುವುದು ಸಾಮಾನ್ಯ. ಅದೇ ರೀತಿ, ನಮ್ಮ ತಂಡದಲ್ಲಿ ಬ್ಯಾಟ್ಸ್‌ಮನ್‌ಗಳೂ ಇದ್ದಾರೆ ಮತ್ತು ಬೌಲರ್‌ಗಳೂ ಇದ್ದಾರೆ. ನಾವು ಯಾವುದೇ ನಿರ್ದಿಷ್ಟ ತಂಡಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುವುದಿಲ್ಲ. ನಾವು ನಮ್ಮ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇವೆ. ಉಳಿದೆಲ್ಲವೂ ಅದರ ಪಾಡಿಗೆ ಅದು ನಡೆಯುತ್ತಲೇ ಇರುತ್ತದೆ ಎಂಬುದು ನಮಗೆ ಗೊತ್ತು. ಆದ್ದರಿಂದ ನಾವು ನಮ್ಮ ತಂಡ, ನಮ್ಮ ಸಿದ್ಧತೆಯ ಮೇಲೆ ಹೆಚ್ಚು ಗಮನ ಕೊಡುತ್ತೇವೆ ಎಂದು ಸ್ಟಾರ್​ ಬೌಲರ್​ ಹೇಳಿದರು.

ಈ ಪಂದ್ಯಕ್ಕೂ ಮುನ್ನ ನಾವು ಇಲ್ಲಿ ಕೆಲವು ಪಂದ್ಯಗಳನ್ನು ಆಡಿದ್ದೇವೆ. ದೆಹಲಿಯಲ್ಲಿ ಪಿಚ್​​ ತುಂಬಾ ಕೆಟ್ಟದಾಗಿರಲಿಲ್ಲ. ಸ್ವಲ್ಪ ತಂಗಾಳಿ ಇತ್ತು. ಹೆಚ್ಚು ಬಿಸಿಯಾಗಿರಲಿಲ್ಲ. ಹವಾಮಾನದ ದೃಷ್ಟಿಯಿಂದ ಈ ಪಿಚ್​ನಲ್ಲಿ ನನಗೆ ವಿಕೆಟ್​ ಪಡೆಯಲು ಸಾಧ್ಯವಾಯಿತು. ಈ ಪಿಚ್​ ಸಾಕಷ್ಟು ಬ್ಯಾಟಿಂಗ್ ಟ್ರ್ಯಾಕ್ ಆಗಿತ್ತು. ಸ್ವಲ್ಪ ಸೀಮ್ ಇತ್ತು. ಆದರೆ ಬಾಲ್​ ಮೊದಲ ಓವರ್‌ನಿಂದಲೇ ಬ್ಯಾಟ್‌ಗೆ ಹೋಗುತ್ತಿರುವುದನ್ನು ನಾನು ಗಮನಿಸಿದೆ. ಆದ್ದರಿಂದ, ನಾವು ಹಾರ್ಡ್ ಲೆಂತ್ ಹಾಕಲು ಪ್ರಯತ್ನಿಸಿದೆ. ಸಾಧ್ಯವಾದಷ್ಟು ಕಷ್ಟವಾಗುವಂತೆ ಮತ್ತು ಕಷ್ಟಕರವಾದ ಹೊಡೆತಗಳನ್ನು ಹೊಡೆಯಲು ಅವರಿಗೆ ಬೌಲ್​ ಮಾಡುತ್ತಿದ್ದೆವು ಎಂದು ಅವರು ಹೇಳಿದರು.

ಸಿದ್ಧತೆಗೆ ನನ್ನ ಮೊದಲ ಆದ್ಯತೆ: ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ನಾನು ನನ್ನ ಸಿದ್ಧತೆಗಳ ಬಗ್ಗೆ ಗಮನ ಹರಿಸುತ್ತೇನೆ. ಆ ದಿನ ನಾನು ಏನು ಮಾಡಬೇಕೆಂದು ಯೋಚನೆ ಮಾಡುತ್ತೇನೆ. ಆಟದ ಬಗ್ಗೆ ಗಮನ ಮತ್ತು ನನ್ನ ಸಾಮರ್ಥ್ಯ ಏನೆಂಬುದು ಸ್ಪಷ್ಟವಾಗಿ ಅರ್ಥೈಸಿಕೊಳ್ಳುತ್ತೇನೆ. ಅದು ನನಗೆ ಈ ಹಿಂದೆ ಕೆಲಸ ಮಾಡಿದೆ ಮತ್ತು ಮುಂದೆಯೂ ಅದೇ ರೀತಿ ಮುಂದುವರಿಯುತ್ತದೆ ಎಂಬ ನಂಬಿಕೆ ನನಗಿದೆ ಎಂದು ಬುಮ್ರಾ ಹೇಳಿದರು.

ಮೊಟೆರಾಗೆ ಬಂದ ತಕ್ಷಣ ನನ್ನ ತಾಯಿ ಭೇಟಿ ಮಾಡ್ತೇನಿ: ಮುಂದಿನ ಪಂದ್ಯ ಪಾಕ್​ ವಿರುದ್ಧ ಮೊಟೆರಾದಲ್ಲಿ ನಡೆಯಲಿದೆ. ಅದು ನನ್ನ ತವರೂರು. ನಾನು ಮೊಟೆರಾಗೆ ಹೋದ ತಕ್ಷಣ ಮೊದಲು ನನ್ನ ತಾಯಿಯನ್ನು ಭೇಟಿಯಾಗಲು ತೆರಳುತ್ತೇನೆ. ನಾನು ಈಗ ಅವರಿಂದ ಸ್ವಲ್ಪ ಸಮಯದವರೆಗೆ ದೂರದಲ್ಲಿದ್ದೇನೆ. ಈಗಾಗಲೇ ನಾನು ಮೊಟೆರಾದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ್ದೇನೆ. ವಾತಾವರಣವು ಬಹಳ ರೋಮಾಂಚನಕಾರಿಯಾಗಲಿದೆ. ಬಹಳಷ್ಟು ಜನರು ಸೇರುತ್ತಾರೆ ಎಂದು ನನಗೆ ಖಾತ್ರಿಯಿದೆ ಅಂತಾ ಹೇಳಿದರು.

ಅಫ್ಘಾನಿಸ್ತಾನ ತನ್ನ ಇನಿಂಗ್ಸ್‌ನ ಆರಂಭದಲ್ಲಿ ಮೊದಲ 15 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ 121 ರನ್‌ಗಳ ಜೊತೆಯಾಟವು ಅಫ್ಘಾನಿಸ್ಥಾನ ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಸಹಾಯ ಮಾಡಿತು. ಉಮರ್ಜಾಯ್ ಔಟಾದ ನಂತರ ಶಾಹಿದಿ ಪಿಚ್‌ನಲ್ಲಿ ಉಳಿದುಕೊಂಡರು. ಆದರೆ, ಡೆತ್ ಓವರ್‌ಗಳಲ್ಲಿ ಬುಮ್ರಾ ವಾಪಸಾದ ನಂತರ ಅಫ್ಘಾನಿಸ್ತಾನ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಲಷ್ಟೇ ಶಕ್ತವಾಯಿತು.

ಓದಿ: ಶನಿವಾರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯ.. ಇದುವರೆಗೂ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಗೆಲ್ಲದ ಪಾಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.