ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್‌ನ ಅಂಗವಾಗಿ ಬುಧವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದರು. ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್, ವೇಗದ ಶತಕದ ಜೊತೆಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
-
Congrats, @ImRo45 - Most Sixes in International cricket. #45 Special 🙌🏿 pic.twitter.com/kmDlM1dIAj
— Chris Gayle (@henrygayle) October 11, 2023 " class="align-text-top noRightClick twitterSection" data="
">Congrats, @ImRo45 - Most Sixes in International cricket. #45 Special 🙌🏿 pic.twitter.com/kmDlM1dIAj
— Chris Gayle (@henrygayle) October 11, 2023Congrats, @ImRo45 - Most Sixes in International cricket. #45 Special 🙌🏿 pic.twitter.com/kmDlM1dIAj
— Chris Gayle (@henrygayle) October 11, 2023
ಕ್ರಿಕೆಟ್‌ನ ಮೂರು ಮಾದರಿಯಲ್ಲಿ (ಟಿ20, ಏಕದಿನ, ಟೆಸ್ಟ್) ಒಟ್ಟು 553 ಸಿಕ್ಸ್ ಸಿಡಿಸಿದ್ದ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ 5 ಸಿಕ್ಸ್ ಬಾರಿಸುವ ಮೂಲಕ ಗೇಲ್ ದಾಖಲೆಯನ್ನು ಶರ್ಮಾ ಮುರಿದರು. ಈ ಮೂಲಕ ಕ್ರಿಕೆಟ್ ವೃತ್ತಿ ಜೀವನದಲ್ಲಿ ರೋಹಿತ್ 556 ಸಿಕ್ಸ್ ಸಿಡಿಸಿ ಅಭಿನಂದನೆಗೆ ಪಾತ್ರರಾದರು. ಶರ್ಮಾ ಸಾಧನೆಗೆ ಮೊದಲು ವಿಶ್ ಮಾಡಿದವರು ಕ್ರಿಸ್ ಗೇಲ್.!
-
Joy to watch these 2. Virat is in ominous form , whether 2/3 or 150/1, he is always standing tall and am sure this is going to be a memorable World Cup for him. Rohit in full flow is always a delight to watch.
— Virender Sehwag (@virendersehwag) October 11, 2023 " class="align-text-top noRightClick twitterSection" data="
Rohit Virat Bumrah , 3 of the most experienced guys having a v good… pic.twitter.com/BTepihu2sV
">Joy to watch these 2. Virat is in ominous form , whether 2/3 or 150/1, he is always standing tall and am sure this is going to be a memorable World Cup for him. Rohit in full flow is always a delight to watch.
— Virender Sehwag (@virendersehwag) October 11, 2023
Rohit Virat Bumrah , 3 of the most experienced guys having a v good… pic.twitter.com/BTepihu2sVJoy to watch these 2. Virat is in ominous form , whether 2/3 or 150/1, he is always standing tall and am sure this is going to be a memorable World Cup for him. Rohit in full flow is always a delight to watch.
— Virender Sehwag (@virendersehwag) October 11, 2023
Rohit Virat Bumrah , 3 of the most experienced guys having a v good… pic.twitter.com/BTepihu2sV
"ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ರೋಹಿತ್ ಶರ್ಮಾಗೆ ಅಭಿನಂದನೆಗಳು. ಇದು #45 ವಿಶೇಷ." ಎಂದು ಗೇಲ್ ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಎಕ್ಸ್ ಪೋಸ್ಟ್‌ನಲ್ಲಿ ಅಭಿನಂದಿಸಿದ್ದಾರೆ.
"ಈ ಪಂದ್ಯ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು ಸಂತೋಷ. ಇದು ಎಲ್ಲರಿಗೂ ಸ್ಮರಣೀಯ ವಿಶ್ವಕಪ್ ಆಗಲಿದೆ. ರೋಹಿತ್, ವಿರಾಟ್ ಮತ್ತು ಬುಮ್ರಾ ಈ ಮೂವರು ಅನುಭವಿಗಳು ತಂಡಕ್ಕೆ ವರದಾನ" ಎಂದು ಸೆಹ್ವಾಗ್ ಶೀರ್ಷಿಕೆ ಬರೆದಿದ್ದಾರೆ. "ಎಂತಹ ಅದ್ಭುತ ಕ್ಷಣ! ಶತಕದೊಂದಿಗೆ ನೀವು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೀರಿ" ಎಂದು ಸುರೇಶ್ ರೈನಾ ಮೆಚ್ಚಿಕೊಂಡಿದ್ದಾರೆ.
-
What a spectacular moment to witness! @ImRo45, you've done it again with a brilliant century 🙌🏻, and the partnership with @ishankishan51 is pure magic. 🔥 Keep making us proud, boys! #INDvsAFG #ODIWorldCup2023 pic.twitter.com/UDW8XhpyW3
— Suresh Raina🇮🇳 (@ImRaina) October 11, 2023 " class="align-text-top noRightClick twitterSection" data="
">What a spectacular moment to witness! @ImRo45, you've done it again with a brilliant century 🙌🏻, and the partnership with @ishankishan51 is pure magic. 🔥 Keep making us proud, boys! #INDvsAFG #ODIWorldCup2023 pic.twitter.com/UDW8XhpyW3
— Suresh Raina🇮🇳 (@ImRaina) October 11, 2023What a spectacular moment to witness! @ImRo45, you've done it again with a brilliant century 🙌🏻, and the partnership with @ishankishan51 is pure magic. 🔥 Keep making us proud, boys! #INDvsAFG #ODIWorldCup2023 pic.twitter.com/UDW8XhpyW3
— Suresh Raina🇮🇳 (@ImRaina) October 11, 2023
ಶಿಖರ್ ಧವನ್, ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವರು ರೋಹಿತ್ ಶರ್ಮಾರನ್ನು ಕ್ಲಾಸಿ ಬ್ಯಾಟರ್ ಎಂದು ಬಣ್ಣಿಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ್ದಕ್ಕಾಗಿ ರೋಹಿತ್ ಭಾಯ್‌ಗೆ ಅಭಿನಂದನೆಗಳು ಎಂದು ವೇಗಿ ಸಿರಾಜ್ ಸಂತಸಪಟ್ಟಿದ್ದಾರೆ.
ಸಿಕ್ಸ್ ಅಲ್ಲದೇ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರಲ್ಲಿಯೂ ರೋಹಿತ್ ಮೂರನೇ ಸ್ಥಾನ ಪಡೆದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಕೇವಲ 63 ಎಸೆತಗಳಲ್ಲಿ ಮೂರಂಕಿ ಮೈಲಿಗಲ್ಲು ತಲುಪುವ ಮೂಲಕ ಕ್ರೀಡಾಭಿಮಾನಿಗಳಿಗೆ ಹೊಸ ಜೋಶ್ ತುಂಬಿದರು.
ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೆಸರಿನಲ್ಲಿ 'ನೂರಾರು' ದಾಖಲೆ: ಏನೆಲ್ಲಾ ಇಲ್ಲಿ ನೋಡಿ.