ETV Bharat / sports

ಅಕ್ಟೋಬರ್ 15ರಂದು ನಡೆಯಲ್ವಾ ಭಾರತ-ಪಾಕ್​​ ಪಂದ್ಯ..!: ದಿನಾಂಕ ಬದಲಾವಣೆಗೆ ಬೇಡಿಕೆ ಏಕೆ? - ETV Bharath Kannada news

Cricket World Cup 2023: 2023ರ ಏಕದಿನ ಕ್ರಿಕೆಟ್​ ವಿಶ್ವಕಪ್​​ ಅಕ್ಟೋಬರ್​​ 5 ರಿಂದ ನವೆಂಬರ್​​ 19ರ ವರೆಗೆ ಭಾರತದಲ್ಲಿ ನಡೆಯಲಿದೆ. ಈಗಾಗಲೇ ಪ್ರಕಟವಾಗಿರುವ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಆಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

Etv Bharat
Etv Bharat
author img

By

Published : Jul 28, 2023, 8:59 PM IST

ನವದೆಹಲಿ: ಮುಂಬರುವ ಪುರುಷರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಬದಲಾಯಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಗುರುವಾರ ಹೇಳಿದ್ದಾರೆ. ಈ ಬದಲಾವಣೆಯಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯವನ್ನು ಅವರು ಉಲ್ಲೇಖಿಸಿಲ್ಲ. ಈ ಸಂದರ್ಭದಲ್ಲಿ, ಜಯ್ ಶಾ ವಿಶ್ವಕಪ್‌ನ ಮೂಲ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಕಾಣುವ ಸಾಧ್ಯತೆಯ ಬಗ್ಗೆ ಹೇಳಿದ್ದಾರೆ. ಆದರೆ, ಇಂತಹುದೇ ಪಂದ್ಯಗಳು ಎಂದು ತಿಳಿಸಿಲ್ಲ. ಯಾವುದೇ ಬದಲಾವಣೆಗಳನ್ನು ಮಾಡಬೇಕಾಗಿದ್ದರೂ ಅದನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

  • Major points from Jay Shah press conference: [PTI]

    - Changes in dates for World Cup.
    - New schedule in 2-3 days.
    - Ticket sales soon.
    - Free drinking water for fans.
    - India A will travel to SA. England A will come to IND.
    - Bumrah is fully fit.
    - No appeal for Kaur's Ban. pic.twitter.com/glCxJdDKHG

    — Johns. (@CricCrazyJohns) July 28, 2023 " class="align-text-top noRightClick twitterSection" data=" ">

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಇದಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಏಕದಿನ ವಿಶ್ವಕಪ್ ಆತಿಥ್ಯ ವಹಿಸುವ ರಾಜ್ಯಗಳ ಸ್ಥಳಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎಲ್ಲ ರಾಜ್ಯಗಳ ಪರಿಸ್ಥಿತಿ ಕುರಿತು ಚರ್ಚಿಸಿ ಕೆಲವು ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಪ್ರೇಕ್ಷಕರಿಗೆ ದಿನಾಂಕ ಹಾಗೂ ಪಂದ್ಯದ ಸಮಯದ ಬಗ್ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಏಕದಿನ ವಿಶ್ವಕಪ್ ಆತಿಥ್ಯ ವಹಿಸುವ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಬಿಸಿಸಿಐ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದು ಗುಜರಾತ್ ಪೊಲೀಸ್ ಮೂಲಗಳು ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ಅಕ್ಟೋಬರ್ 15 ರಂದು ಭಾರತ - ಪಾಕಿಸ್ತಾನ ಪಂದ್ಯದ ದಿನಾಂಕ ಬದಲಾವಣೆಯ ಬಗ್ಗೆಯೂ ಚರ್ಚಿಸುತ್ತೇವೆ. ಏಕೆಂದರೆ ನವರಾತ್ರಿಯ ಮೊದಲ ದಿನ ಅಹಮದಾಬಾದ್‌ನಲ್ಲಿ ವಿಶ್ವಕಪ್‌ನ ಈ ಮಹತ್ವದ ಪಂದ್ಯ ನಡೆಯಲಿದೆ. ಆ ದಿನ ಭದ್ರತೆಯನ್ನು ನೋಡಿಕೊಳ್ಳುವುದು ತುಂಬಾ ಕಷ್ಟ ಎಂದಿದ್ದಾರೆ. ಸ್ಥಳೀಯ ಪೊಲೀಸರು ಬಿಸಿಸಿಐಗೆ ಈ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಲಿದ್ದಾರೆ. ಅದಕ್ಕಾಗಿಯೇ ಈ ಪಂದ್ಯದ ದಿನಾಂಕವನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

  • BCCI secretary Jay Shah confirms they are working on providing free drinking water for spectators during the World Cup 2023. (To PTI)

    Great initiative and gesture by BCCI. pic.twitter.com/cPgYnzKnIZ

    — CricketMAN2 (@ImTanujSingh) July 27, 2023 " class="align-text-top noRightClick twitterSection" data=" ">

ಶಾ ಪತ್ರಿಕಾಗೋಷ್ಠಿ: ಮೂರು - ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗಿರುವ ವಿಶ್ವಕಪ್‌ನ ಮೂಲ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೇವೆ. ಬದಲಾವಣೆಗಳು ದಿನಾಂಕದಲ್ಲಿರುತ್ತದೇ ವಿನಃ ಸ್ಥಳಗಳಲ್ಲಿ ಅಲ್ಲ. ಐಸಿಸಿ ಮತ್ತು ಬಿಸಿಸಿಐ ಅಧಿಕಾರಿಗಳು ಇದನ್ನು ನೋಡಿಕೊಳ್ಳಲಿದ್ದಾರೆ. ಕೆಲ ದೇಶಗಳ ಸಮಿತಿ ಪಂದ್ಯಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿವೆ.

ಸೌಲಭ್ಯಗಳಿಗೆ ಒತ್ತು: ಒಡಿಐ ವಿಶ್ವಕಪ್‌ನಲ್ಲಿ ಮೈದಾನಗಳಲ್ಲಿ ಅಭಿಮಾನಿಗಳಿಗೆ ಸೌಲಭ್ಯಗಳ ಕುರಿತು ಮಾತನಾಡಿದ ಜಯ ಶಾ, ಪಂದ್ಯಗಳ ಸಮಯದಲ್ಲಿ ಪ್ರೇಕ್ಷಕರಿಗೆ ಉಚಿತ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಬಹಿರಂಗಪಡಿಸಿದರು, ಈ ಮೂಲಕ ಏಜೆನ್ಸಿಯೊಂದಿಗೆ ಆದ್ಯತೆ ನೀಡಲಾಗುತ್ತಿದೆ. ಎಲ್ಲಾ ಕ್ರೀಡಾಂಗಣಗಳಲ್ಲಿ ಶೌಚಾಲಯ ಮತ್ತು ಸ್ವಚ್ಛತೆಯ ಸೌಲಭ್ಯಗಳನ್ನು ಸುಧಾರಿಸುವ ಕೆಲಸ ಮಾಡತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಸಂಜು ಸ್ಯಾಮ್ಸನ್​ ಜರ್ಸಿ ಸೂರ್ಯ ಕುಮಾರ್​​ ತೊಟ್ಟಿದ್ದೇಕೆ..? ಹೊಸ ಕಿಟ್​​​ ಎಡವಟ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.