ಹ್ಯಾಮಿಲ್ಟನ್ (ನ್ಯೂಜಿಲ್ಯಾಂಡ್ ): ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆರನೇ ಪಂದ್ಯವಾಡುತ್ತಿದ್ದು, ಎದುರಾಳಿ ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
-
And another one!
— ICC Cricket World Cup (@cricketworldcup) March 22, 2022 " class="align-text-top noRightClick twitterSection" data="
Moni has got Mithali Raj for a duck.#CWC22 https://t.co/CMzUgxqwlw
">And another one!
— ICC Cricket World Cup (@cricketworldcup) March 22, 2022
Moni has got Mithali Raj for a duck.#CWC22 https://t.co/CMzUgxqwlwAnd another one!
— ICC Cricket World Cup (@cricketworldcup) March 22, 2022
Moni has got Mithali Raj for a duck.#CWC22 https://t.co/CMzUgxqwlw
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ವನಿತೆಯರ ತಂಡಕ್ಕೆ ಉತ್ತಮ ಆರಂಭ ದೊರೆತ್ತಿತ್ತು. ಆರಂಭಿಕ ಬ್ಯಾಟರ್ಸ್ಗಳಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಜೊತೆಗೂಡಿ 74 ರನ್ಗಳನ್ನು ಕಲೆ ಹಾಕಿದ್ದರು. ಆದರೆ, ಇವರ ಜೋಡಿಯನ್ನು ನಹಿದಾ ಅಕ್ತೆರ್ ಮುರಿದರು.
ಓದಿ: ಪದ್ಮ ಪ್ರಶಸ್ತಿ ನೀಡುವುದು ಸರ್ಕಾರವಲ್ಲ, ದೇಶ: ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್
ನಹಿದಾ ಅಕ್ತೆರ್ ಎಸೆತದಲ್ಲಿ 30 ರನ್ಗಳನ್ನು ಗಳಿಸಿದ್ದ ಸ್ಮೃತಿ ಮಂಧಾನ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಇದಾದ ಮುಂದಿನ ಓವರ್ನಲ್ಲಿ ಶೆಫಾಲಿ ಸ್ಟಂಪ್ ಔಟ್ ಆದರು. ಕಣಕ್ಕಿಳಿದ ನಾಯಕಿ ಮಿಥಾಲಿ ರಾಜ್ ಸಹ ಗೊಲ್ಡನ್ ಡಕ್ ಆದರು. ಮೇಲಿಂದ ಮೇಲೆ ಮೂರು ವಿಕೆಟ್ಗಳನ್ನು ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 22 ಓವರ್ಗಳಿಗೆ ಭಾರತ ವನಿತೆಯರ ತಂಡ ಮೂರು ವಿಕೆಟ್ಗಳನ್ನು ಕಳೆದುಕೊಂಡು 86 ರನ್ಗಳನ್ನು ಕಲೆ ಹಾಕಿದೆ.
ಮಾರ್ಚ್ 4ರಿಂದ ವಿಶ್ವಕಪ್ ಆರಂಭವಾಗಿದೆ. ಬಾಂಗ್ಲಾದೇಶ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಸೋಲನ್ನಪ್ಪಿದ್ದು, ಮತ್ತೆರಡು ಪಂದ್ಯಗಳಲ್ಲಿ ಜಯ ಗಳಿಸಿದೆ. ಭಾರತ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಗೆಲವು ಸಾಧಿಸಲು ಬಾಂಗ್ಲಾಗೆ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಅವರು ಬಹುತೇಕ ಸೆಮಿ ಎಂಟ್ರಿ ಕನಸು ಕನಸಾಗಿಯೇ ಉಳಿಯಲಿದೆ.
ಓದಿ: ನ್ಯಾಟೋಗೆ ನಮ್ಮನ್ನ ಸೇರಿಸಿಕೊಳ್ತೀರಾ ಇಲ್ವಾ ಅನ್ನೋದನ್ನ ಹೇಳ್ಬಿಡಿ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ
ಭಾರತ ವನಿಯತೆಯರ ತಂಡ ಸೆಮಿಯ ಹಾದಿ ಸುಗಮವಾಗಬೇಕಾದರೆ ಇಂದು ಮತ್ತು ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಲ್ಲವಾದಲ್ಲಿ ಸೆಮಿ ಹಾದಿ ಬಹುತೇಕ ಕಷ್ಟವಾಗಲಿದೆ.
ಭಾರತ ಮಹಿಳೆಯರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ಸ್ನೇಹ ರಾಣಾ, ರಿಚಾ ಘೋಷ್ (ವಿಕೀ), ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್.
ಬಾಂಗ್ಲಾದೇಶ ಮಹಿಳೆಯರು (ಪ್ಲೇಯಿಂಗ್ XI): ಶರ್ಮಿನ್ ಅಖ್ತರ್, ಮುರ್ಷಿದಾ ಖಾತುನ್, ಫರ್ಗಾನಾ ಹೊಕ್, ನಿಗರ್ ಸುಲ್ತಾನಾ (ನಾಯಕಿ), ರುಮಾನಾ ಅಹ್ಮದ್, ರಿತು ಮೋನಿ, ಲತಾ ಮೊಂಡಲ್, ಸಲ್ಮಾ ಖಾತುನ್, ನಹಿದಾ ಅಕ್ತೆರ್, ಫಾಹಿಮಾ ಖಾತುನ್, ಜಹಾನಾರಾ ಆಲಂ..