ಕೇಪ್ಟೌನ್ (ದಕ್ಷಿಣ ಆಫ್ರಿಕಾ): ಮಹಿಳಾ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ 6 ರನ್ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದು, ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡದೊಂದಿಗೆ ಸೆಣಸಾಡಲಿದೆ.
ಕೇಪ್ಟೌನ್ನಲ್ಲಿಂದು ನಡೆದ ಪಂದ್ಯದಲ್ಲಿ ದ.ಆಫ್ರಿಕಾದ ನಾಯಕಿ ಸುನೆ ಲೂಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಬ್ಯಾಟರ್ಗಳಾದ ವೊಲ್ವಾರ್ಡ್ಟ್ ಹಾಗೂ ತಜ್ಮಿನ್ ಬ್ರಿಟ್ಸ್ ಇಬ್ಬರೂ 96 ರನ್ಗಳ ಜೊತೆಯಾಟ ನೀಡಿ, ಆಕರ್ಷಕ ಅರ್ಧಶತಕಗಳನ್ನೂ ಬಾರಿಸಿದರು. ವೊಲ್ವಾರ್ಡ್ಟ್ 44 ಎಸೆತಗಳಲ್ಲಿ ಒಂದು ಸಿಕ್ಸರ್, ಐದು ಬೌಂಡರಿಗಳೊಂದಿಗೆ 53 ರನ್ ಸಿಡಿಸಿದರು.
-
South Africa triumphed in a stunning finish at Newlands!
— ICC (@ICC) February 24, 2023 " class="align-text-top noRightClick twitterSection" data="
The second semi-final was a thriller 🔥
📝: https://t.co/UK4bVZVXBk#ENGvSA | #T20WorldCup | #TurnItUp pic.twitter.com/4OG9KFqlvE
">South Africa triumphed in a stunning finish at Newlands!
— ICC (@ICC) February 24, 2023
The second semi-final was a thriller 🔥
📝: https://t.co/UK4bVZVXBk#ENGvSA | #T20WorldCup | #TurnItUp pic.twitter.com/4OG9KFqlvESouth Africa triumphed in a stunning finish at Newlands!
— ICC (@ICC) February 24, 2023
The second semi-final was a thriller 🔥
📝: https://t.co/UK4bVZVXBk#ENGvSA | #T20WorldCup | #TurnItUp pic.twitter.com/4OG9KFqlvE
ಮತ್ತೊಂದೆಡೆ, 55 ಬಾಲ್ಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಮೇತ ತಜ್ಮಿನ್ ಬ್ರಿಟ್ಸ್ 68 ರನ್ ಕಲೆ ಹಾಕಿದರು. ಮೂರನೇ ಕ್ರಮಾಂಕದಲ್ಲಿ ಬಂದ ಮರಿಜಾನ್ನೆ ಕಪ್ಪ್ ಕೂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 13 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನೊಂದಿಗೆ 27 ರನ್ ಬಾರಿಸಿ ಅಜೇಯರಾಗುಳಿದರು. ಒಟ್ಟಾರೆ, ಆತಿಥೇಯ ತಂಡ ನಿಗದಿತ 20 ಓವರ್ಗಳಲ್ಲಿ ಕೇವಲ 4 ವಿಕೆಟ್ ವಿಕೆಟ್ ನಷ್ಟಕ್ಕೆ 164 ರನ್ಗಳನ್ನು ಪೇರಿಸಿತು. ಇಂಗ್ಲೆಂಡ್ ಪರವಾಗಿ ಎಕ್ಲೆಸ್ಟೋನ್ ಮೂರು ವಿಕೆಟ್ ಕಿತ್ತರೆ, ಲಾರೆನ್ ಬೆಲ್ ಒಂದು ವಿಕೆಟ್ ಪಡೆದರು.
165 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ಗಳನ್ನು ಪೇರಿಸಲು ಮಾತ್ರ ಶಕ್ತವಾಯಿತು. ಓಪನರ್ಗಳಾದ ಡೇನಿಯಲ್ ವ್ಯಾಟ್ ಮತ್ತು ಸೋಫಿಯಾ ಡಂಕ್ಲಿ ಮೊದಲ ವಿಕೆಟ್ಗೆ 53 ರನ್ ಕಲೆ ಹಾಕಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, ಈ ನಡುವೆ 16 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 28 ರನ್ ಗಳಿಸಿದ್ದ ಸೋಫಿಯಾ ಡಂಕ್ಲಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಆಲಿಸ್ ಕ್ಯಾಪ್ಸಿ ಶೂನ್ಯ ಸುತ್ತಿದರು. ಇದಾದ ಸ್ವಲ್ಪ ಹೊತ್ತಲ್ಲೇ ಡೇನಿಯಲ್ ವ್ಯಾಟ್ (34) ಕೂಡ ಪೆವಿಲಿಯನ್ ಸೇರಿದರು.
ನಂತರದಲ್ಲಿ ನ್ಯಾಟ್ ಸ್ಕಿವರ್ ಬ್ರಂಟ್ (40) ಹಾಗೂ ನಾಯಕಿ ಹೀದರ್ ನೈಟ್ (31) ಕೂಡ ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ, ಬಳಿಕ ಬಂದ ಯಾವುದೇ ಬ್ಯಾಟರ್ಗಳಿಂದ ಒಳ್ಳೆಯ ಆಟ ಮೂಡಿ ಬರಲಿಲ್ಲ. ಹೀಗಾಗಿ ಕೊನೆಗೆ 158 ರನ್ ಗಳಿಸಲಷ್ಟೇ ಇಂಗ್ಲೆಂಡ್ ಶಕ್ತವಾಯಿತು. ದಕ್ಷಿಣ ಆಫ್ರಿಕಾ ಪರವಾಗಿ ಅಯಬೊಂಗ ಖಾಕಾ 4 ವಿಕೆಟ್, ಶಬ್ನಿಮ್ ಇಸ್ಮಾಯಿಲ್ 3 ವಿಕೆಟ್ ಪಡೆದು ಮಿಂಚಿದರು. ನಾಡಿನ್ ಡಿ ಕ್ಲರ್ಕ್ 1 ವಿಕೆಟ್ ಪಡೆದರು. ಫೆ.26ರಂದು ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾದ ವನಿತೆಯರು ಮೊದಲ ಬಾರಿ ಫೈನಲ್ಗೆ ಪ್ರವೇಶಿಸಿ ಇತಿಹಾಸ ಬರೆದರು.
ಇದನ್ನೂ ಓದಿ: 3ನೇ ಟೆಸ್ಟ್: ಸ್ಟೀವ್ ಸ್ಮಿತ್ ಹೆಗಲಿಗೆ ಆಸ್ಟ್ರೇಲಿಯಾ ನಾಯಕತ್ವ ಹೊಣೆ