ಕೇಪ್ಟೌನ್( ದಕ್ಷಿಣ ಆಫ್ರಿಕಾ): ಪಾಕಿಸ್ತಾನದ ಎದುರು ಜಯ ಸಾಧಿಸಿದ ಭಾರತೀಯ ವನಿತೆಯರು ವೆಸ್ಟ್ ಇಂಡೀಸ್ ಎದುರು ಇಂದು ಕಣಕ್ಕಿಳಿದಿದ್ದು, ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡಿಯನ್ಸ್ನ್ನು 118 ರನ್ಗೆ ಭಾರತೀಯ ವನಿತೆಯರು ಕಟ್ಟಿಹಾಕಿದ್ದಾರೆ. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ದೀಪ್ತಿ ಶರ್ಮಾ ಟಿ20 ವಿಭಾಗದಲ್ಲಿ 100 ಪಡೆದ ಸಾಧನೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ.
ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಪೂಜಾ ವಸ್ತ್ರಾಕರ್ ಕಾಡಿದರು. ಎರಡನೇ ಓವರ್ನಲ್ಲೇ ನಾಯಕಿ ಹೇಲಿ ಮ್ಯಾಥ್ಯೂಸ್ (2) ಅವರನ್ನು ಔಟ್ ಮಾಡಿದರು. ನಂತರದ ಜೋಡಿ ಸ್ಟಾಫಾನಿ ಟೇಲರ್ ಮತ್ತು ಶೆಮೈನ್ ಕ್ಯಾಂಪ್ಬೆಲ್ಲೆ 73 ರನ್ಗಳ ಜೊತೆಯಾಟ ನೀಡಿದರು. 30 ರನ್ ಗಳಿಸಿ ಆಡುತ್ತಿದ್ದ ಶೆಮೈನ್ ಕ್ಯಾಂಪ್ಬೆಲ್ಲೆ ಅವರನ್ನು ದೀಪ್ತಿ ಶರ್ಮಾ ಔಟ್ ಮಾಡುವ ಮೂಲಕ ಜೊತೆಯಾಟ ಮುರಿದರು. ಚಿನೆಲ್ಲೆ ಹೆನ್ರಿ ಅವರು ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಸೇರಿ ಮಾಡಿದ ರನ್ ಔಟ್ಗೆ ಬಲಿಯಾದರು. 42 ರನ್ ಗಳಿಸಿ ಆಡುತ್ತಿದ್ದ ಸ್ಟಾಫಾನಿ ಟೇಲರ್ ದೀಪ್ತಿ ಶರ್ಮಾರ ಎಲ್ಬಿಡ್ಲ್ಯೂಗೆ ಬಲಿಯಾದರು.
ಶಬಿಕಾ ಗಜ್ನಾಬಿ ಮತ್ತು ಚೆಡಿಯನ್ ನೇಷನ್ ಕೊಂಚ ಹೊತ್ತು ಕ್ರೀಸ್ ಕಾಯ್ದುಕೊಂಡರಾದರೂ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. 15 ರನ್ ಗೆ ಚೆಡಿಯನ್ ನೇಷನ್ ಔಟ್ ಆದರು. ಭಾರತದ ಪರ ದೀಪ್ತಿ ಶರ್ಮಾ 3 ವಿಕೆಟ್. ರೇಣುಕಾ ಠಾಕೂರ್ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
-
A big milestone for Indian spinner Deepti Sharma 🌟
— ICC (@ICC) February 15, 2023 " class="align-text-top noRightClick twitterSection" data="
She becomes the first India international to reach the landmark in T20Is.
Follow LIVE 📝: https://t.co/kQpGPcjbyu #WIvIND | #T20WorldCup | #TurnItUp pic.twitter.com/Iq52X69G5Q
">A big milestone for Indian spinner Deepti Sharma 🌟
— ICC (@ICC) February 15, 2023
She becomes the first India international to reach the landmark in T20Is.
Follow LIVE 📝: https://t.co/kQpGPcjbyu #WIvIND | #T20WorldCup | #TurnItUp pic.twitter.com/Iq52X69G5QA big milestone for Indian spinner Deepti Sharma 🌟
— ICC (@ICC) February 15, 2023
She becomes the first India international to reach the landmark in T20Is.
Follow LIVE 📝: https://t.co/kQpGPcjbyu #WIvIND | #T20WorldCup | #TurnItUp pic.twitter.com/Iq52X69G5Q
ಶತಕ ವಿಕೆಟ್ ವೀರೆ ದೀಪ್ತಿ ಶರ್ಮಾ: ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ನಲ್ಲಿ ನೂರು ವಿಕೆಟ್ ಪಡೆದ ಸಾಧನೆಯನ್ನು ದೀಪ್ತಿ ಶರ್ಮಾ ಮಾಡಿದರು. ನೂರು ಟಿ-20 ವಿಕೆಟ್ ಪಡೆದ ಭಾರತದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಖ್ಯಾತಿಗೆ ಗಳಿಸಿದ್ದಾರೆ. ಪಾಕಿಸ್ತಾನದ ಎದುರು ಗೆದ್ದು ತಂಡದಲ್ಲಿ ಭಾರತ ಕೊಂಚ ಬದಲಾವಣೆ ಮಾಡಿಕೊಂಡಿದ್ದು, ಗಾಯದಿಂದ ಗುಣಮುಖರಾದ ಸ್ಮೃತಿ ಮಂಧಾನ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಬೌಲಿಂಗ್ ವಿಭಾಗಕ್ಕೆ ದೇವಿಕಾ ವೈದ್ಯ ಅವರನ್ನು ಸೇರಿಸಿಕೊಂಡಿತ್ತು.
ಭಾರತ ಮಹಿಳೆಯರ ಆಡುವ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದೇವಿಕಾ ವೈದ್ಯ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಸಿಂಗ್
-
🚨 A look at #TeamIndia's Playing XI for the game against West Indies 🔽
— BCCI Women (@BCCIWomen) February 15, 2023 " class="align-text-top noRightClick twitterSection" data="
Follow the match ▶️ https://t.co/rm4GUZIzSX #T20WorldCup | #INDvWI pic.twitter.com/dQjfUTruju
">🚨 A look at #TeamIndia's Playing XI for the game against West Indies 🔽
— BCCI Women (@BCCIWomen) February 15, 2023
Follow the match ▶️ https://t.co/rm4GUZIzSX #T20WorldCup | #INDvWI pic.twitter.com/dQjfUTruju🚨 A look at #TeamIndia's Playing XI for the game against West Indies 🔽
— BCCI Women (@BCCIWomen) February 15, 2023
Follow the match ▶️ https://t.co/rm4GUZIzSX #T20WorldCup | #INDvWI pic.twitter.com/dQjfUTruju
ವೆಸ್ಟ್ ಇಂಡೀಸ್ ಮಹಿಳೆಯರ ಆಡುವ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಸ್ಟಾಫಾನಿ ಟೇಲರ್, ಶೆಮೈನ್ ಕ್ಯಾಂಪ್ಬೆಲ್ಲೆ, ಶಬಿಕಾ ಗಜ್ನಾಬಿ, ಚಿನೆಲ್ಲೆ ಹೆನ್ರಿ, ಚೆಡಿಯನ್ ನೇಷನ್, ಅಫಿ ಫ್ಲೆಚರ್, ಶಾಮಿಲಿಯಾ ಕಾನ್ನೆಲ್, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಕರಿಷ್ಮಾ ರಾಮ್ಹರಾಕ್, ಶಕೆರಾ ಸೆಲ್ಮನ್
ಇದನ್ನೂ ಓದಿ: ಮಹಿಳಾ ಟಿ 20 ವಿಶ್ವಕಪ್: ಇಂದು ಭಾರತ ವೆಸ್ಟ್ ಇಂಡೀಸ್ ಹಣಾಹಣಿ