ETV Bharat / sports

ಭಾರತ ಪಾಕ್​ ಮುಖಾಮುಖಿ: ಟಾಸ್​ ಗೆದ್ದು ಬ್ಯಾಟಿಂಗ್​ಗಿಳಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ

ವನಿತೆಯರ ಟಿ 20 ವಿಶ್ವ ಕಪ್​ - ಟಾಸ್​ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ಆರಂಭದಲ್ಲೇ ಒಂದು ವಿಕೆಟ್​ ಕಳೆದುಕೊಂಡಿದೆ.

ICC Womens T20 World Cup 2023
ಭಾರತ ಪಾಕ್​ ಮುಖಾಮುಖಿ
author img

By

Published : Feb 12, 2023, 6:50 PM IST

Updated : Feb 12, 2023, 7:38 PM IST

ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಐಸಿಸಿ ಮಹಿಳಾ ಟಿ20 ವಿಶ್ವಕಪ್​ನ 4ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ವನಿತೆಯರು ಮುಖಾಮುಖಿಯಾಗಿದ್ದು, ಟಾಸ್​ ಗೆದ್ದಿರುವ ಪಾಕ್​ ತಂಡ ಬ್ಯಾಟಿಂಗ್​ ಆಯ್ದುಕೊಂಡಿದೆ. ಆದರೆ ಭಾರತ ಬೌಲಿಂಗ್​ ದಾಳಿಗೆ ಆರಂಭದಲ್ಲೇ ಪಾಕ್​ ತಂಡಕ್ಕೆ ಶಾಕ್​ ಉಂಟಾಗಿದ್ದು, 13 ಓವರ್​ಗೆ ನಾಲ್ಕು ವಿಕೆಟ್​ ಕಳೆದುಕೊಂಡಿದೆ.

ಆರಂಭಿಕ ಬ್ಯಾಟರ್ ಜವೇರಿಯಾ ಖಾನ್​ಗೆ ಕಾಡಿದ ದೀಪ್ತಿ ಶರ್ಮಾ ಪಂದ್ಯದ ಎರಡನೇ ಓವರ್​ನಲ್ಲಿ ವಿಕೆಟ್​ ಪಡೆದರು. ತಂಡದ ಮೊತ್ತ 42 ಆಗಿದ್ದಾಗ ಮುನೀಬಾ ಅಲಿಯವರನ್ನು ರಾಧಾ ಯಾದವ್ ಔಟ್ ಮಾಡಿದರು. ನಿದಾ ದಾರ್ ಅವರು ಪೂಜಾ ವಸ್ತ್ರಾಕರ್ ಅವರಿಗೆ ಡಕ್​ ಔಟ್​ ಆದರು. 10 ಓವರ್​ಗೆ ಪಾಕಿಸ್ತಾನ ತಂಡ 74ಕ್ಕೆ 4 ವಿಕೆಟ್​ ನಷ್ಟ ಅನುಭವಿಸಿತ್ತು.

ಪಿಚ್ ವರದಿಯಂತೆ ಹೆಚ್ಚು ಬಿರುಕು ಇರುವುದರಿಂದ ಬೌಲರ್​ ಸ್ನೇಹಿ ಆಗಿರಲಿದೆ. ಕಳೆದ ಪಂದ್ಯದಲ್ಲೂ ಪಿಚ್ ಸಾಧಾರಣ ಮೊತ್ತದ ಪಂದ್ಯಕ್ಕೆ ಕಾರಣವಾಗಿದ್ದ ಹಿನ್ನೆಲೆ ಇಂದು ಅದೇ ರೀತಿ ವರ್ತಿಸುವ ಸಾಧ್ಯತೆ ಇದೆ. ಎರಡೂ ಕಡೆಯ ಬೌಲರ್​ಗಳಿಗೆ ಬೌಲಿಂಗ್​ ಸ್ನೇಹಿ ಪಿಚ್​ ಆಗಿರಲಿದೆ ಎಂದು ಅಂದಾಜಿಸಲಾಗಿದೆ.

ಟಾಸ್​ ಗೆದ್ದ ಬಿಸ್ಮಾ ಮರೂಫ್ ಮಾತನಾಡಿ, ನಾವು ಮೊದಲು ಬ್ಯಾಟ್ ಮಾಡಲು ಬಯಸುತ್ತೇವೆ. ಇದು ಡ್ರೈ ವಿಕೆಟ್ ಆಗಿದೆ, ಹೆಚ್ಚು ಬದಲಾಗುವುದಿಲ್ಲ ಆದ್ದರಿಂದ ನಾವು ಹೆಚ್ಚು ಮೊತ್ತ ಕಲೆಹಾಕಿ ಬೃಹತ್​ ಗುರಿ ನೀಡುವ ಉದ್ದೇಶ ಹೊಂದಿದ್ದೇವೆ. ಡಯಾನಾ ಬೇಗ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ. ಕಳೆದ ಬಾರಿ ಭಾರತದ ವಿರುದ್ಧ ಗೆದ್ದಿದ್ದರಿಂದ ನಮಗೆ ಆತ್ಮವಿಶ್ವಾಸವಿದೆ ಎಂದರು.

ಟಾಸ್​ ನಂತರ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, ಈ ವಿಕೆಟ್‌ಗಳು ಸ್ವಲ್ಪ ಟ್ರಿಕಿ ಆಗಿರುವುದರಿಂದ ನಾವು ಬ್ಯಾಟಿಂಗ್ ಮಾಡಲು ಬಯಸಿದ್ದೇವು. ಇನ್ನು ಭಾರತದ ಪ್ರಮುಖ ಬ್ಯಾಟರ್, ಗಾಯಾಳುವಾಗಿರುವ ಸ್ಮೃತಿ ಮಂಧಾನ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇಂದು ಹೆಚ್ಚುವರಿ ಬ್ಯಾಟರ್ ಅನ್ನು ಸೇರಿಸಿಕೊಂಡಿದ್ದು ಹರ್ಲೀನ್ ಡಿಯೋಲ್ ಅವರು ಶಿಖಾ ಅವರ ಸ್ಥಾನದಲ್ಲಿ ಆಡಲಿದ್ದಾರೆ. ಈ ಹಿಂದೆ ತ್ರಿಕೋನ ಸರಣಿಯಲ್ಲೂ ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ಇಲ್ಲಿ ನಮ್ಮ ಬೌಲಿಂಗ್​ಗೆ ಸಹಕಾರಿ ಆಗಲಿದೆ ಎಂದು ಭಾವಿಸುತ್ತೇನೆ ಎಂದರು.

ಪಾಕಿಸ್ತಾನದ ಮಹಿಳಾ ಆಡುವ ಆಟಗಾರರು: ಜವೇರಿಯಾ ಖಾನ್, ಮುನೀಬಾ ಅಲಿ (ವಿಕೆಟ್​ ಕೀಪರ್​), ಬಿಸ್ಮಾ ಮರೂಫ್ (ನಾಯಕಿ), ನಿದಾ ದಾರ್, ಸಿದ್ರಾ ಅಮೀನ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ಐಮನ್ ಅನ್ವರ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್

ಭಾರತ ಮಹಿಳಾ ಆಡುವ ಆಟಗಾರರು: ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್​ ಕೀಪರ್​), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಸಿಂಗ್

ಇದನ್ನೂ ಓದಿ: ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಇಂದು ಭಾರತ-ಪಾಕಿಸ್ತಾನ ಸೆಣಸಾಟ

Last Updated : Feb 12, 2023, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.