ETV Bharat / sports

ICC Under 19 World Cup 2022: ಟೀಂ ಇಂಡಿಯಾ ಗೆಲುವಿನ ಶುಭಾರಂಭ

author img

By

Published : Jan 16, 2022, 3:23 AM IST

ICC Under 19 World Cup 2022: ಐಸಿಸಿ ಅಂಡರ್‌ 19 ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಯಶ್‌ ಧುಲ್‌ ನೇತೃತ್ವದ ಭಾರತ ತಂಡ ಗೆಲುವಿನ ನಗೆ ಬೀರಿದೆ.

ICC Under 19 World Cup 2022; India U19 won by 45 runs against South Africa
ICC Under 19 World Cup 2022: ಟೀಂ ಇಂಡಿಯಾ ಗೆಲುವಿನ ಶುಭಾರಂಭ

ಗಯಾನ(ವೆಸ್ಟ್‌ ಇಂಡೀಸ್‌): ಅಂಡರ್‌ 19 ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವಿನ ಶುಭಾರಂಭ ಮಾಡಿದೆ. ವೆಸ್ಟ್‌ ಇಂಡೀಸ್‌ನ ಗಾಯಾನದ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ನಡೆದ ಯು19 ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಯು19 ಭಾರತ ತಂಡ 45 ರನ್‌ಗಳ ಗೆಲುವು ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ 46.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 232ರನ್‌ಗಳನ್ನು ಗಳಿಸಿತು. ಆರಂಭಿಕ ಬ್ಯಾಟರ್‌ಗಳಾದ ಅಂಗ್‌ಕ್ರಿಶ್ ರಘುವಂಶಿ(5), ಹರ್ನೂರ್ ಸಿಂಗ್(1) ವಿಫಲರಾದರೂ 3ನೇ ಕ್ರಮಾಂಕದಲ್ಲಿ ಬಂದ ಶೈಕ್ ರಶೀದ್‌ ಹಾಗೂ ನಾಯಕ ಯಶ್‌ ಧುಲ್‌ ಮುರಿಯದೆ 3ನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ನೆರವಾದರು.

ಯಶ್‌ 100 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಹಿತ 82 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ರಶೀದ್‌ 54 ಎಸೆತಗಳಿಂದ 4 ಬೌಂಡರಿ ಸೇರಿ 31 ರನ್‌ ಗಳಿಸಿದರು. ಬಳಿಕ ಬಂದ ನಿಶಾಂತ್‌ ಸಿಂಧು 27, ರಾಜ್‌ ಬಾವಾ 13, ಕೌಶಲ್ ತಾಂಬೆ 35, ವಿಕೆಟ್‌ ಕೀಪರ್‌ ದಿನೇಶ್‌ ಬನಾ 7, ವಿಕಿ ಒಸ್ಟ್ವಾಲ್‌ 9, ರಾಜ್ಯವರ್ಧನ್‌ ಅಂಗಾರ್ಕರ್‌ 0 ಹಾಗೂ ರವಿ ಕುಮಾರ್‌ 0 ರನ್‌ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಮ್ಯಾಥೀವ್‌ ಬೋಸ್ಟ್‌ 3 ವಿಕೆಟ್‌ ಪಡೆದರೆ ಅಫಿವೆ ಮ್ನ್ಯಾಂಡಾ, ಡೆವಾಲ್ಡ್‌ ಬ್ರೆವೀಸ್‌ ತಲಾ 2 ಹಾಗೂ ಲಿಯಾಮ್‌ ಆಲ್ಡರ್‌, ಮಿಕಿ ಕೊಪೆಲ್ಯಾಂಡ್‌ ತಲಾ 1 ವಿಕೆಟ್‌ ಪಡೆದರು.

ವಿಕಿ, ರಾಜ್‌ ಬಾವಾ ಬೌಲಿಂಗ್‌ಗೆ ತತ್ತರಿಸಿದ ಆಫ್ರಿಕಾ..!

ಟೀಂ ಇಂಡಿಯಾ ನೀಡಿದ 233ರನ್‌ಗಳ ಗುರಿ ಬೆನ್ನತ್ತಿದೆ ದಕ್ಷಿಣ ಆಫ್ರಿಕಾ ತಂಡ 45.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದು ಕೊಂಡು 187 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಮೊದಲ ಓವರ್‌ನ 4ನೇ ಎಸೆತದಲ್ಲಿ ಟೀಂ ಇಂಡಿಯಾ ಬೌಲರ್‌ ರಾಜ್ಯವರ್ಧನ್‌ ಹಂಗಾರ್ಕರ್‌ ಆಫ್ರಿಕನ್ನರಿಗೆ ಆಘಾತ ನೀಡಿದರು. ಆರಂಭಿಕ ಬ್ಯಾಟರ್‌ ಜಾನ್‌ ಕನ್ನಿಂಗ್ಯಾಮ್‌(0) ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

ವ್ಯಾಲೆಂಟೈನ್ ಟೈಮ್ 25, ಡೆವಾಲ್ಡ್‌ ಬ್ರೆವೀಸ್‌ 65, ಜಿಜೆ ಮಾರೀ 8, ಜಾರ್ಜ್‌ ವ್ಯಾನ್ ಹೀರ್ಡೆನ್‌ 36, ಆಂಡಿಲೆ ಸಿಮೆಲೆನ್ 6, ಮಿಕ್ಕಿ ಕೊಪೆಲ್ಯಾಂಡ್‌ 1, ಕಡೆನ್‌ ಸೊಲೊಮಾನ್ಸ್‌ 0, ಮ್ಯಾಥೀವ್‌ ಬೊಸ್ಟ್‌ 8, ಲಿಯಾಮ್‌ ಆಲ್ಡರ್‌ 17 ಹಾಗೂ ಅಫಿವೆ ಮ್ನ್ಯಾಂಡಾ 5 ರನ್‌ಗಳಿಸಿದು. ಟೀಂ ಇಂಡಿಯಾ ಪರ ವಿಕಿ ಒಸ್ಟ್ವಾಲ್‌ 5 ವಿಕೆಟ್‌ ಪಡೆದರೆ ರಾಜ್‌ ಬಾವಾ 4 ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ: ICC U19 World Cup: ನಾಳೆಯಿಂದ ಹರಿಣಗಳ ವಿರುದ್ಧ ಭಾರತದ ಸೆಣಸಾಟ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.