ETV Bharat / sports

ICC Test Rankings :11ನೇ ಸ್ಥಾನಕ್ಕೆ ಲಗ್ಗೆ ಹಾಕಿದ ಕನ್ನಡಿಗ ಮಯಾಂಕ್​​, ಬೌಲಿಂಗ್​​ ವಿಭಾಗದಲ್ಲಿ ಅಶ್ವಿನ್​​​ಗೆ 2ನೇ ಸ್ಥಾನ

author img

By

Published : Dec 8, 2021, 4:39 PM IST

ರೋಹಿತ್​ ಶರ್ಮಾ 5 ಹಾಗೂ ವಿರಾಟ್​​ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಶುಬ್ಮನ್​​ ಗಿಲ್​ ಕೂಡ 22 ಸ್ಥಾನ ಜಿಗಿತ ಕಂಡು 46ನೇ ಸ್ಥಾನದಲ್ಲಿದ್ದಾರೆ. ಆದರೆ, ಅಜಿಂಕ್ಯ ರಹಾನೆ 2 ಸ್ಥಾನ ಕುಸಿದು 28ನೇ ಸ್ಥಾನಕ್ಕೆ ಹಾಗೂ ಚೇತೇಶ್ವರ ಪೂಜಾರ 1 ಸ್ಥಾನ ಕುಸಿದು 17ನೇ ಸ್ಥಾನಕ್ಕೆ ತಲುಪಿದ್ದಾರೆ..

Mayank Agarwal rises in rankings
Mayank Agarwal rises in rankings

ದುಬೈ : ಭಾರತ-ನ್ಯೂಜಿಲ್ಯಾಂಡ್​​​ ನಡುವಿನ ಟೆಸ್ಟ್​​​ ಸರಣಿ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಟೆಸ್ಟ್​​​ ರ‍್ಯಾಂಕಿಂಗ್​ ಪಟ್ಟಿ ರಿಲೀಸ್​​​ ಆಗಿದೆ. ಟೀಂ ಇಂಡಿಯಾದ ಆರಂಭಿಕ ಆಟಗಾರ, ಕನ್ನಡಿಗ ಮಯಾಂಕ್​​​ ಅಗರವಾಲ್​​​​ 30 ಸ್ಥಾನ ಮೇಲೆಕ್ಕೇರಿದ್ದಾರೆ.

ನ್ಯೂಜಿಲ್ಯಾಂಡ್​​ ವಿರುದ್ಧದ ಎರಡನೇ ಟೆಸ್ಟ್​​​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಮಯಾಂಕ್​​​ ಅಗರವಾಲ್​​​ ಕ್ರಮವಾಗಿ 150 ಹಾಗೂ 62ರನ್​​​ಗಳಿಕೆ ಮಾಡಿದ್ದರು. ಜೊತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದರ ಬೆನ್ನಲ್ಲೇ ಇದೀಗ ಐಸಿಸಿ ಟೆಸ್ಟ್​​​ ಶ್ರೇಯಾಂಕದಲ್ಲಿ ಅತ್ಯುತ್ತಮ ಜಿಗಿತ ಕಂಡಿದ್ದಾರೆ. 30 ಸ್ಥಾನ ಮೇಲೇರಿರುವ ಈ ಪ್ಲೇಯರ್​ ಇದೀಗ 11ನೇ ರ‍್ಯಾಂಕ್ ಅಲಂಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಉತ್ತಮ ರನ್​​ಗಳಿಕೆ ಮಾಡಿದ್ರೆ ಟಾಪ್​​ 10ರೊಳಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಕ್ಯಾಪ್ಟನ್​​ ಆಗಿ ಆಡಿದ ಮೊದಲ ಪಂದ್ಯದಲ್ಲಿ ಕಮಿನ್ಸ್​​​​​ ರೆಕಾರ್ಡ್​​​.. 1982ರ ಬಳಿಕ ಮೂಡಿಬಂತು ಈ ಸಾಧನೆ!

ಈ ಹಿಂದೆ 2019ರಲ್ಲಿ ಮಯಾಂಕ್​​​ ಅಗರವಾಲ್​​ ಟಾಪ್​ 10ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇದಾದ ಬಳಿಕ ಅವರು ಟಾಪ್​​ 10ರಲ್ಲಿ ಕಾಣಿಸಿಕೊಂಡಿಲ್ಲ. ಉಳಿದಂತೆ ಇಂಗ್ಲೆಂಡ್​​ನ ಜೋ ರೂಟ್​​​ ಮೊದಲ ಸ್ಥಾನದಲ್ಲಿದ್ದಾರೆ.

ರೋಹಿತ್​ ಶರ್ಮಾ 5 ಹಾಗೂ ವಿರಾಟ್​​ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಶುಬ್ಮನ್​​ ಗಿಲ್​ ಕೂಡ 22 ಸ್ಥಾನ ಜಿಗಿತ ಕಂಡು 46ನೇ ಸ್ಥಾನದಲ್ಲಿದ್ದಾರೆ. ಆದರೆ, ಅಜಿಂಕ್ಯ ರಹಾನೆ 2 ಸ್ಥಾನ ಕುಸಿದು 28ನೇ ಸ್ಥಾನಕ್ಕೆ ಹಾಗೂ ಚೇತೇಶ್ವರ ಪೂಜಾರ 1 ಸ್ಥಾನ ಕುಸಿದು 17ನೇ ಸ್ಥಾನಕ್ಕೆ ತಲುಪಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾದ ಸ್ಪಿನ್ನರ್​ ಆರ್​​.ಅಶ್ವಿನ್​​​ 2ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​​​ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.