ETV Bharat / sports

ICC Test Player ranking: 2ನೇ ಸ್ಥಾನ ಉಳಿಸಿಕೊಂಡ ಅಶ್ವಿನ್, ಟಾಪ್​ 10ರಲ್ಲಿ ಕೊಹ್ಲಿ - ರೋಹಿತ್ ಸ್ಥಿರ - ಪ್ಯಾಟ್ ಕಮ್ಮಿನ್ಸ್

ರೋಹಿತ್ ಶರ್ಮಾ(805) ಮತ್ತು ವಿರಾಟ್ ಕೊಹ್ಲಿ(775) ಕ್ರಮವಾಗಿ 5 ಮತ್ತು 6ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ. ಟೆಸ್ಟ್​ ಸರಣಿಯಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿದು 10ನೇ ರ‍್ಯಾಂಕ್ ಪಡೆದಿದ್ದಾರೆ.

ICC Test Player ranking
ಐಸಿಸಿ ಟೆಸ್ಟ್​ ರ‍್ಯಾಂಕಿಂಗ್
author img

By

Published : Dec 1, 2021, 4:57 PM IST

ದುಬೈ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಸಿಸಿ ಬ್ಯಾಟಿಂಗ್ ರ‍್ಯಾಂಕ್​​ನಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ ಬೌಲಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ರೋಹಿತ್ ಶರ್ಮಾ(805) ಮತ್ತು ವಿರಾಟ್ ಕೊಹ್ಲಿ(775) ಕ್ರಮವಾಗಿ 5 ಮತ್ತು 6ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ. ಟೆಸ್ಟ್​ ಸರಣಿಯಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಕುಸಿದು 10ನೇ ರ‍್ಯಾಂಕ್ ಪಡೆದಿದ್ದಾರೆ. ಜೋ ರೂಟ್​, ಸ್ಟೀವ್ ಸ್ಮಿತ್​ , ಕೇನ್​ ವಿಲಿಯಮ್ಸನ್​ ಮತ್ತು ಲಾಬುಶೇನ್​ ಅಗ್ರ 4ರಲ್ಲಿದ್ದಾರೆ. ಭಾರತದ ವಿರುದ್ಧ ಮೊದಲ ಟೆಸ್ಟ್​​ನಲ್ಲಿ 95 ಮತ್ತು 52 ರನ್​ಗಳಿಸಿದ್ದ ಕಿವೀಸ್​ ಬ್ಯಾಟರ್ ಟಾಪ್ ಲೇಥಮ್(9) ಮತ್ತೆ ಅಗ್ರ 10ಕ್ಕೆ ಪ್ರವೇಶಿಸಿದ್ದಾರೆ

2ನೇ ಸ್ಥಾನ ಉಳಿಸಿಕೊಂಡ ಅಶ್ವಿನ್:

ಕಾನ್ಪರದ ಟೆಸ್ಟ್​ ನಲ್ಲಿ 6 ವಿಕೆಟ್​ ಪಡೆದಿದ್ದ ಅನುಭವಿ ಅಶ್ವಿನ್ 840 ಅಂಕಗಳೊಂದಿಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ 908 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಪರ ಅತ್ಯುತ್ತಮ ಪ್ರದರ್ಶನ ತೋರಿದ ಕೈಲ್ ಜೇಮಿಸನ್(9)​ 6 ಸ್ಥಾನ ಜಿಗಿದು ಇದೇ ಮೊದಲ ಬಾರಿಗೆ ಅಗ್ರ 10ಕ್ಕೆ ಪ್ರವೇಶ ಪಡೆದಿದ್ದರೆ, ಟಿಮ್ ಸೌಥಿ 3ನೇ ರ‍್ಯಾಂಕ್​ನಲ್ಲಿ ಮುಂದುವರೆದಿದ್ದಾರೆ.

ರವೀಂದ್ರ ಜಡೇಜಾ ಬೌಲಿಂಗ್ ಶ್ರೇಯಾಂಕದಲ್ಲಿ 2 ಸ್ಥಾನ ಬಡ್ತಿ ಪಡೆದು 19 ಮತ್ತು ಆಲ್​ರೌಂಡರ್​ ಸ್ಥಾನದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಶ್ವಿನ್​ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯದಲ್ಲಿ 7 ವಿಕೆಟ್ ಪಡೆದಿದ್ದ ಶಾಹೀನ್ ಅಫ್ರಿದಿ 3 ಸ್ಥಾನ ಬಡ್ತಿ ಪಡೆದು ಜೀವನ ಶ್ರೇಷ್ಠ 5ನೇ ರ‍್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ:IND v NZ: ಪೂಜಾರ, ರಹಾನೆಗೆ ತಂಡದ ಪ್ರತಿಯೊಬ್ಬರ ಬೆಂಬಲವಿದೆ : ಬೌಲಿಂಗ್ ಕೋಚ್​ ಮಾಂಬ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.