ದುಬೈ: ಗುರುವಾರ ಐಸಿಸಿ ಪ್ರಕಟಿಸಿದ ಪುರುಷರ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಮೊಟ್ಟ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದ ಪಾಕಿಸ್ತಾನ ನ್ಯೂಜಿಲ್ಯಾಂಡ್ ಎದುರು ಕೊನೆಯಲ್ಲಿ ಪಂದ್ಯದಲ್ಲಿ ಸೋಲುವ ಮೂಲಕ ಅಗ್ರ ಪಟ್ಟ ಕಳೆದುಕೊಂಡಿತು. ಹೀಗಾಗಿ ಆಸ್ಟ್ರೇಲಿಯಾ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ. ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ತಂಡ ಈ ಮಾದರಿಯಲ್ಲಿ ಕುಸಿತ ಕಂಡಿದೆ.
ಕಿವೀಸ್ ವಿರುದ್ಧದ ಕೊನೆಯ ಪಂದ್ಯವನ್ನು ಸೋಲುವ ಮೂಲಕ ಪಾಕಿಸ್ತಾನ ಮೂರು ಅಂಕ ಕಳೆದುಕೊಂಡಿತು. ಇದರಿಂದ ಆಸ್ಟ್ರೇಲಿಯಾ ವಿಶ್ವದ ನಂಬರ್ ಒನ್ ತಂಡವಾಗಿ ಸ್ಥಾನ ಪಡೆಯಿತು. ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ 118 ಅಂಕ ಪಡೆಯಿತು. ಪಾಕಿಸ್ತಾನ, 116 ಅಂಕ, ಭಾರತ 115 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ಇದಕ್ಕೂ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ 113 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದವು. ಪಾಕಿಸ್ತಾನ 112 ಅಂಕಗಳಿಂದ ಮೂರನೇ ಸ್ಥಾನದಲ್ಲಿತ್ತು. ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಯಲ್ಲಿ 4-0 ಯಲ್ಲಿ ಮುನ್ನಡೆ ಪಡೆದ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿತ್ತು. ಸರಣಿಯನ್ನು 5-0 ಯಲ್ಲಿ ಜಯಿಸಿದ್ದರೆ ತಂಡ ಅಗ್ರವಾಗಿ ಉಳಿಯುತ್ತಿತ್ತು. ಆದರೆ, ಪಂದ್ಯ ಸೋತು ಸರಣಿಯನ್ನು 5-1 ರಲ್ಲಿ ಜಯಿಸಿದ ಬಳಿಕ ಆಸ್ಟ್ರೇಲಿಯಾ ಮೊದಲ ಸ್ಥಾನ ಪಡೆಯಿತು. ಆದರೆ, ಭಾರತ ರೇಟಿಂಗ್ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿತು.
ಐಸಿಸಿ ವಾರ್ಷಿಕ ಶ್ರೇಯಾಂಕವು ಮೇ 2020 ರಿಂದ ಎಲ್ಲಾ ಏಕದಿನ ಸರಣಿಗಳನ್ನು ಪರಿಗಣಿಸಲಾಗಿದೆ. ಮೇ 2022 ಕ್ಕಿಂತ ಮೊದಲು ಪೂರ್ಣಗೊಂಡ ಸರಣಿಗಳನ್ನು 50 ಪ್ರತಿಶತದಷ್ಟು ಮತ್ತು ನಂತರದ ಎಲ್ಲಾ ಸರಣಿಗಳು 100 ಪ್ರತಿಶತದಷ್ಟು ಲೆಕ್ಕಾಚಾರ ಹಾಕಲಾಗಿದೆ. ಇದರಿಂದಾಗಿ ಹೆಚ್ಚು ಗೆಲುವು ಸಾಧಿಸಿರುವ ಪಾಕಿಸ್ತಾನ, ಭಾರತಕ್ಕಿಂತ ಮುಂದಿದೆ. ಈ ವರ್ಷ ಆಸ್ಟ್ರೇಲಿಯಾಯ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತ 2-1 ಅಂತರದ ಸೋಲು ಕಂಡಿತ್ತು. ಇದರಿಂದ ಅಂಕಗಳು ಕಡಿತವಾಗಿವೆ.
-
Three teams separated by three points 😮
— ICC (@ICC) May 11, 2023 " class="align-text-top noRightClick twitterSection" data="
It's neck and neck at the top of the @MRFWorldwide ICC Men's ODI Team Rankings after the annual update 👀
">Three teams separated by three points 😮
— ICC (@ICC) May 11, 2023
It's neck and neck at the top of the @MRFWorldwide ICC Men's ODI Team Rankings after the annual update 👀Three teams separated by three points 😮
— ICC (@ICC) May 11, 2023
It's neck and neck at the top of the @MRFWorldwide ICC Men's ODI Team Rankings after the annual update 👀
ಇನ್ನೂ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ 104 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 101 ಅಂಕಗಳೊಂದಿಗೆ ಅದರ ನಂತರದ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಆರನೇ ಮತ್ತು ಬಾಂಗ್ಲಾದೇಶ ಏಳನೇ, ಅಫ್ಘಾನಿಸ್ತಾನ ಎಂಟನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಒಂಬತ್ತನೇ, ದೈತ್ಯ ಬ್ಯಾಟರ್ಗಳನ್ನು ಹೊಂದಿದ್ದರೂ ವೆಸ್ಟ್ ಇಂಡೀಸ್ ಕೊನೆಯ ಸ್ಥಾನದಲ್ಲಿದೆ.
ಇನ್ನು ಬ್ಯಾಟಿಂಗ್ ವಿಭಾಗದ ಟಿ20ಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ 906 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಪರವಾಗಿ ಅದ್ಭುತ ಬ್ಯಾಟಿಂಗ್ ಮಾಡುತ್ತಿರುವ ನಾಯಕ ಬಾಬರ್ ಅಜಂ ಏಕದಿನದಲ್ಲಿ ನಂಬರ್ 1 ಬ್ಯಾಟ್ ಆಗಿದ್ದಾರೆ. ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ನಂ 1 ಸ್ಥಾನ ಪಡೆದಿದ್ದಾರೆ.
ಓದಿ: ಮಹತ್ವದ ಪಂದ್ಯ ಸೋತ ಡೆಲ್ಲಿ; ಪ್ಲೇ ಆಫ್‌ಗೆ ಹತ್ತಿರವಾದ ಚೆನ್ನೈ- ರೋಚಕ ಕ್ಷಣಗಳ Photos