ದುಬೈ: ವೆಸ್ಟ್ ಇಂಡೀಸ್ ಪ್ರವಾಸದ ಏಕದಿನ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದು ಐಸಿಸಿ ಶ್ರೇಯಾಂಕದಲ್ಲಿ ಚೇತರಿಕೆ ಕಂಡಿದ್ದಾರೆ. ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ತಮ್ಮ ವೃತ್ತಿಜೀವನದ ಅತ್ಯುತ್ತಮ ರ್‍ಯಾಂಕಿಂಗ್ ಗಿಟ್ಟಿಸಿಕೊಂಡಿದ್ದಾರೆ.
ಗಿಲ್ ಮತ್ತು ಕಿಶನ್ ಜೋಡಿ 3 ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ 310 ರನ್ ಕಲೆಹಾಕಿ ಉತ್ತಮ ಬ್ಯಾಟಿಂಗ್ ನಿರ್ವಹಣೆ ಮಾಡಿದ್ದರು. ಈ ಬ್ಯಾಟಿಂಗ್ನಿಂದಾಗಿ ಗಿಲ್ ನವೀಕರಿಸಿದ ಐಸಿಸಿ ಶ್ರೇಯಾಂಕದಲ್ಲಿ ಎರಡು ಸ್ಥಾನಗಳ ಮೇಲೇರಿದ್ದು 5ನೇ ರ್‍ಯಾಂಕ್ ಪಡೆದಿದ್ದಾರೆ. ಬಹಳ ದಿನಗಳ ಅಂತರದಲ್ಲಿ ಮತ್ತೆ ಏಕದಿನ ಪಂದ್ಯ ಆಡಿದ ಕಿಶನ್ 9 ಸ್ಥಾನಗಳ ಏರಿಕೆ ಕಂಡಿದ್ದಾರೆ. ಇದರಿಂದಾಗಿ ಇಶಾನ್ ಐಸಿಸಿ ಶ್ರೇಯಾಂಕದಲ್ಲಿ 36ನೇ ಸ್ಥಾನ ತಲುಪಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸ್ಟ್ಯಾಂಡ್ ಇನ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ ಹಾರ್ದಿಕ್ ಪಾಂಡ್ಯ 10 ಸ್ಥಾನ ಮೇಲೇರಿ 71 ಶ್ರೇಯಾಂಕದಲ್ಲಿದ್ದಾರೆ.
-
Indian players are on the rise in the latest @MRFWorldwide ICC Men's ODI Batting Rankings after their performances against the West Indies ⬆️
— ICC (@ICC) August 9, 2023 " class="align-text-top noRightClick twitterSection" data="
More 👇 https://t.co/RSotyRnqgw
">Indian players are on the rise in the latest @MRFWorldwide ICC Men's ODI Batting Rankings after their performances against the West Indies ⬆️
— ICC (@ICC) August 9, 2023
More 👇 https://t.co/RSotyRnqgwIndian players are on the rise in the latest @MRFWorldwide ICC Men's ODI Batting Rankings after their performances against the West Indies ⬆️
— ICC (@ICC) August 9, 2023
More 👇 https://t.co/RSotyRnqgw
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಡೆರ್ ಡಸ್ಸೆನ್ ಇದ್ದರೆ, ಮೂರು ಮತ್ತು ನಾಲ್ಕರಲ್ಲಿ ಕ್ರಮವಾಗಿ ಪಾಕ್ ಬ್ಯಾಟರ್ಗಳಾದ ಫಖರ್ ಜಮಾನ್ (755) ಮತ್ತು ಇಮಾಮ್-ಉಲ್-ಹಕ್ (745) ಇದ್ದಾರೆ. ಭಾರತದ ಟಾಪ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ 9 ಮತ್ತು 11ನೇ ಸ್ಥಾನದಲ್ಲಿದ್ದಾರೆ.
ವಿಂಡೀಸ್ ವಿರುದ್ಧದ ಸರಣಿಯಲ್ಲಿ ಏಳು ವಿಕೆಟ್ ಕಬಳಿಸಿದ ನಂತರ ಕುಲದೀಪ್ ನಾಲ್ಕು ಸ್ಥಾನ ಸುಧಾರಿಸಿಕೊಂಡು 10ನೇ ಸ್ಥಾನ ಪಡೆದರೆ, ಶಾರ್ದೂಲ್ ಠಾಕೂರ್ ಸರಣಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ್ದು ಮೂರು ಸ್ಥಾನಗಳನ್ನು ಸುಧಾರಿಸಿ 30ನೇ ಸ್ಥಾನಕ್ಕೆ ಬಂದಿದ್ದಾರೆ. ಉಳಿದಂತೆ, ಸಿರಾಜ್ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.
ಟಿ20 ಶ್ರೇಯಾಂಕ: ಪ್ರಸ್ತುತ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಭಾರತ ಸಾಧಾರಣ ಪ್ರದರ್ಶನ ನೀಡುತ್ತಿದೆ. ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಆಟಗಾರ ತಿಲಕ್ ವರ್ಮಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಎರಡು ಪಂದ್ಯದ ಆಟದ ಪರಿಣಾಮವಾಗಿ 46ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನ ದೈತ್ಯ ಆಟಗಾರರಾದ ನಿಕೋಲಸ್ ಪೂರನ್ ಆರು ಸ್ಥಾನ ಏರಿಕೆಕಂಡು 14ನೇ ಸ್ಥಾನ ಮತ್ತು ನಾಯಕ ರೋವ್‌ಮನ್ ಪೊವೆಲ್ 17 ಸ್ಥಾನಗಳ ಏರಿಕೆಯಿಂದ 32ನೇ ಸ್ಥಾನದಲ್ಲಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 50 ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಾಧನೆ ಮಾಡಿದ ಕುಲದೀಪ್ ಯಾದವ್ ಉತ್ತಮ ಏರಿಕೆ ಕಂಡಿದ್ದಾರೆ. ಮೊದಲ ಟಿ20ಯಲ್ಲಿ ಪರಿಣಾಮಕಾರಿ ಬೌಲಿಂಗ್ ನಂತರ ಗಾಯಗೊಂಡು ಎರಡನೇ ಪಂದ್ಯ ಆಡಿರಲಿಲ್ಲ. ನಿನ್ನೆ ನಡೆದ ಪಂದ್ಯದಲ್ಲಿ ಆಡಿದ್ದ ಕುಲದೀಪ್ 3 ವಿಕೆಟ್ ಪಡೆದಿದ್ದರು. ಶ್ರೇಯಾಂಕ ಪಟ್ಟಿಯಲ್ಲಿ 36 ಸ್ಥಾನದ ಏರಿಕೆ ಕಂಡು 51ನೇ ರ್‍ಯಾಂಕ್ ಹೊಂದಿದ್ದಾರೆ. ವೆಸ್ಟ್ ಇಂಡೀಸ್ನ ಅಲ್ಜಾರಿ ಜೋಸೆಫ್ 13ನೇ ಶ್ರೇಯಾಂಕ ಹಾಗೂ ಸ್ಪಿನ್ನರ್ ಅಕೇಲ್ ಹೊಸೈನ್ 14ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: Nasser Hussain: ಭಾರತ ಟೆಸ್ಟ್ ತಂಡಕ್ಕೆ ಇಂಥ ಆಟಗಾರರು ಬೇಕೆಂದ ನಾಸೆರ್ ಹುಸೇನ್! ಯಾರು ಗೊತ್ತೇ?