ಹೈದರಾಬಾದ್: 2023ರ ಏಕದಿನ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದು, ತಂಡದ ಆಟಗಾರರ ನಡುವೆ ಶ್ರೇಯಾಂಕದ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಸ್ಪರ್ಧೆ ಈಗ ಕಿಂಗ್ ವಿರಾಟ್ ಕೊಹ್ಲಿ ಮತ್ತು ಪ್ರಿನ್ಸ್ ಶುಭಮನ್ ಗಿಲ್ ನಡುವೆ ನಡೆಯುತ್ತಿದೆ. ವಿಶ್ವಕಪ್ನ ಐದು ಇನ್ನಿಂಗ್ಸ್ನಲ್ಲಿ ವಿರಾಟ್ ಕೇವಲ ಒಂದರಲ್ಲಿ ವಿಫಲರಾಗಿದ್ದಾರೆ. ಉಳಿದೆಲ್ಲಾ ಪಂದ್ಯಗಳಲ್ಲಿ ಅವರು ರನ್ ಗಳಿಸಿದ್ದಾರೆ. ಇದರಿಂದ 9ನೇ ಸ್ಥಾನದಲ್ಲಿದ್ದ ವಿರಾಟ್ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಜ್ವರದಿಂದ ಚೇತರಿಸಿಕೊಂಡ ಗಿಲ್ ಒಂದು ದೊಡ್ಡ ಇನ್ನಿಂಗ್ಸ್ ಆಡಿದಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ವಿಶ್ವಕಪ್ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಅವರ ಅಗ್ರ ಪಟ್ಟ ಅಲುಗಾಡುತ್ತಿದೆ. ವಿಶ್ವಕಪ್ಗೂ ಮುನ್ನವೇ ತಂಡ ನಂ.1 ಸ್ಥಾನವನ್ನು ಕಳೆದುಕೊಂಡಿತ್ತು. ಅಲ್ಲದೇ ಮೂವರು ಪಾಕ್ ಆಟಗಾರರು ಟಾಪ್ 5 ಸ್ಥಾನದಲ್ಲಿ ಇದ್ದರು. ಆದರೆ ಏಷ್ಯಾಕಪ್ ಮತ್ತು ವಿಶ್ವಕಪ್ನ ಕಳಪೆ ಪ್ರದರ್ಶನದಿಂದ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಬಾಬರ್ ಅಜಮ್ ವಿಶ್ವಕಪ್ನ ಐದು ಇನ್ನಿಂಗ್ಸ್ನಿಂದ ಕೇವಲ 156 ರನ್ ಗಳಿಸಿದ್ದಾರೆ. ಅದರಲ್ಲಿ ಅಫ್ಗಾನ್ ವಿರುದ್ಧ 74 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿದೆ.
-
In ODI ranking:
— Johns. (@CricCrazyJohns) October 25, 2023 " class="align-text-top noRightClick twitterSection" data="
India - No. 1 team.
Gill - No. 2 ranked batter.
Kohli - No. 6 ranked batter.
Rohit - No. 8 ranked batter.
Siraj - No. 2 ranked bowler.
Kuldeep - No. 8 ranked bowler.
Hardik - No. 9 ranked all-rounder.
The Domination of Indian cricket....!!!! pic.twitter.com/nUR9gexOuE
">In ODI ranking:
— Johns. (@CricCrazyJohns) October 25, 2023
India - No. 1 team.
Gill - No. 2 ranked batter.
Kohli - No. 6 ranked batter.
Rohit - No. 8 ranked batter.
Siraj - No. 2 ranked bowler.
Kuldeep - No. 8 ranked bowler.
Hardik - No. 9 ranked all-rounder.
The Domination of Indian cricket....!!!! pic.twitter.com/nUR9gexOuEIn ODI ranking:
— Johns. (@CricCrazyJohns) October 25, 2023
India - No. 1 team.
Gill - No. 2 ranked batter.
Kohli - No. 6 ranked batter.
Rohit - No. 8 ranked batter.
Siraj - No. 2 ranked bowler.
Kuldeep - No. 8 ranked bowler.
Hardik - No. 9 ranked all-rounder.
The Domination of Indian cricket....!!!! pic.twitter.com/nUR9gexOuE
ಗಿಲ್ ಜೊತೆ ಕೊಹ್ಲಿ ಪೈಪೋಟಿ: ಜ್ವರದಿಂದ ಚೇತರಿಸಿಕೊಂಡ ವಿಶ್ವಕಪ್ ತಂಡಕ್ಕೆ ಮರಳಿದ ಶುಭಮನ್ ಗಿಲ್ ಫಾರ್ಮ್ನಲ್ಲಿ ಕಂಡರೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಮೂರು ಇನ್ನಿಂಗ್ಸ್ನಲ್ಲಿ ಗಿಲ್ ಒಂದು ಅರ್ಧಶತಕ ಸಹಿತ 95 ರನ್ ಅಷ್ಟೇ ಕಲೆ ಹಾಕಿದ್ದಾರೆ. ಹೀಗಾಗಿ ಬಾಬರ್ ಅವರಿಂದ ಕೇವಲ 6 ಪಾಯಿಂಟ್ಗಳಿಂದ ಹಿಂದಿದ್ದಾರೆ. ಗಿಲ್ ಒಂದು ಶತಕದ ಇನ್ನಿಂಗ್ಸ್ ಆಡಿದಲ್ಲಿ ನಂ.1 ಪಟ್ಟವನ್ನು ಅಲಂಕರಿಸಲಿದ್ದಾರೆ.
-
King Kohli climbs to No.6 in the ICC ODI Ranking.
— Mufaddal Vohra (@mufaddal_vohra) October 25, 2023 " class="align-text-top noRightClick twitterSection" data="
- The 🐐 is coming for the No.1 spot....!!!! pic.twitter.com/3R7SKEoYuL
">King Kohli climbs to No.6 in the ICC ODI Ranking.
— Mufaddal Vohra (@mufaddal_vohra) October 25, 2023
- The 🐐 is coming for the No.1 spot....!!!! pic.twitter.com/3R7SKEoYuLKing Kohli climbs to No.6 in the ICC ODI Ranking.
— Mufaddal Vohra (@mufaddal_vohra) October 25, 2023
- The 🐐 is coming for the No.1 spot....!!!! pic.twitter.com/3R7SKEoYuL
ಅತ್ತ ಪ್ರಿನ್ಸ್ ಗಿಲ್ಗೆ ಕಿಂಗ್ ವಿರಾಟ್ ಕೊಹ್ಲಿ ಸ್ಪರ್ಧೆ ನೀಡುತ್ತಿದ್ದಾರೆ. ವಿಶ್ವಕಪ್ ಆರಂಭವಾದ ನಂತರ ಆಡಿದ ಐದು ಇನ್ನಿಂಗ್ಸ್ನ ಫಲವಾಗಿ 9ನೇ ಸ್ಥಾನದಿಂದ 6ನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ. ಐದು ಇನ್ನಿಂಗ್ಸ್ನಲ್ಲಿ ಮೂರು ಅರ್ಧಶತಕ, ಒಂದು ಶತಕದ ನೆರವಿನಿಂದ 354 ರನ್ ಕಲೆಹಾಕಿದ್ದಾರೆ. ವಿರಾಟ್ ಇದೇ ಫಾರ್ಮ್ನಲ್ಲಿ ಮುಂದುವರೆದರೆ ಅಗ್ರಸ್ಥಾನವನ್ನು ಅಲಂಕರಿಸಲಿದ್ದಾರೆ. ಇನ್ನು ರೋಹಿತ್ ಶರ್ಮಾ 8ನೇ ರ್‍ಯಾಂಕಿಂಗ್ ಹೊಂದಿದ್ದಾರೆ.
ಬೌಲಿಂಗ್ ಶ್ರೇಯಾಂಕ: ಬೌಲಿಂಗ್ ಶ್ರೇಯಾಂಕದಲ್ಲಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿ ಮುಂದುವರೆದರೆ, ಕುಲ್ದೀಪ್ ಯಾದವ್ 9 ಮತ್ತು ಜಸ್ಪ್ರೀತ್ ಬುಮ್ರಾ 13ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಆಲ್ರೌಂಡರ್ ಶ್ರೇಯಾಂಕದಲ್ಲಿ ಹಾರ್ದಿಕ್ ಪಾಂಡ್ಯ ನಂ.9 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
-
Shubman Gill is 6 Points away from No.1 ODI Ranking....!!!
— Mufaddal Vohra (@mufaddal_vohra) October 25, 2023 " class="align-text-top noRightClick twitterSection" data="
Babar Azam - 829.
Shubman Gill - 823. pic.twitter.com/00DOvK3nQt
">Shubman Gill is 6 Points away from No.1 ODI Ranking....!!!
— Mufaddal Vohra (@mufaddal_vohra) October 25, 2023
Babar Azam - 829.
Shubman Gill - 823. pic.twitter.com/00DOvK3nQtShubman Gill is 6 Points away from No.1 ODI Ranking....!!!
— Mufaddal Vohra (@mufaddal_vohra) October 25, 2023
Babar Azam - 829.
Shubman Gill - 823. pic.twitter.com/00DOvK3nQt
ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸುವುದರೊಂದಿದೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿತ್ತು. ಪ್ರಸ್ತುತ ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ನಲ್ಲಿ ಅಗ್ರ ಶ್ರೇಯಾಂಕಿತ ತಂಡವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಭಾರತ ತನ್ನ ಪಾರಮ್ಯವನ್ನು ಮೆರೆಯುತ್ತಿದೆ.
ಇದನ್ನೂ ಓದಿ: ಮುಂದಿನ ಎರಡು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಅಲಭ್ಯ: ಸೆಮಿ-ಫೈನಲ್ಗೆ ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆ