ಶಾರ್ಜಾ : ಶಾರ್ಜಾ: ನಾಯಕ ಟೆಂಬ ಬವೂಮ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಮತ್ತು ಡೇವಿಡ್ ಮಿಲ್ಲರ್ ಅವರ ಕೊನೆಯ ಓವರ್ನ ಸ್ಫೋಟಕ ಆಟದ ನೆರವಿನಿಂದ ಟಿ20 ವಿಶ್ವಕಪ್ನ ಸೂಪರ್ 12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಪತುಮ್ ನಿಸಾಂಕ(72) ಅವರ ಅರ್ಧಶತಕದ ಹೊರೆತಾಗಿಯೂ ಕೇವಲ 142 ರನ್ಗಳಿಗೆ ಸರ್ವಫತನ ಗೊಂಡಿತು. ನಿಸಾಂಕ 58 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 72 ರನ್ಗಳಿಸಿದರು. ಅಸಲಂಕಾ 21ರನ್ಗಳಿಸಿ ತಂಡದ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದ ಯಾವ ಬ್ಯಾಟರ್ಗಳು ನಿರೀಕ್ಷಿತ ಬ್ಯಾಟಿಂಗ್ ಪದರ್ಶನ ತೋರುವಲ್ಲಿ ವಿಫಲರಾದರು.
ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ 17ಕ್ಕೆ3, ಡ್ವೇನ್ ಪ್ರಿಟೋರಿಯಸ್ 17ಕ್ಕೆ 3 ಮತ್ತು ಎನ್ರಿಚ್ ನಾರ್ಕಿಯಾ 27ಕ್ಕೆ 2 ವಕೆಟ್ ಪಡೆದು ಮಿಂಚಿದರು.
ಇನ್ನು 143 ರನ್ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 19.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ನಾಯಕ ಬವೂಮ 46 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 46 ರನ್ ಸಿಡಿಸಿದರೆ, ಡೇವಿಡ್ ಮಿಲ್ಲರ್ 13 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 23 ರನ್ ಮತ್ತು ರಬಾಡ ಕೇವಲ 7 ಎಸೆತಗಳಲ್ಲಿ ಅಜೇಯ 13 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
-
Miller delivers for South Africa 💪#T20WorldCup | #SAvSL | https://t.co/bJIWWFNtds pic.twitter.com/DGCKu9gskW
— T20 World Cup (@T20WorldCup) October 30, 2021 " class="align-text-top noRightClick twitterSection" data="
">Miller delivers for South Africa 💪#T20WorldCup | #SAvSL | https://t.co/bJIWWFNtds pic.twitter.com/DGCKu9gskW
— T20 World Cup (@T20WorldCup) October 30, 2021Miller delivers for South Africa 💪#T20WorldCup | #SAvSL | https://t.co/bJIWWFNtds pic.twitter.com/DGCKu9gskW
— T20 World Cup (@T20WorldCup) October 30, 2021
ಆದರೆ ಭರವಸೆಯ ಬ್ಯಾಟರ್ ಕ್ವಿಂಟರ್ ಡಿಕಾಕ್(12), ರೀಜಾ ಹೆಂಡ್ರಿಕ್ಸ್(11),ವ್ಯಾನ್ ಡರ್ ಡಸೆನ್ (16) ಮಾರ್ಕ್ರಮ್(19) ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಶ್ರೀಲಂಕಾ ಪರ ವನಿಂಡು ಹಸರಂಗ ಹ್ಯಾಟ್ರಿಕ್ ವಿಕೆಟ್ ಪಡೆದರೂ ತಮ್ಮ ತಂಡವನ್ನು ಗೆಲ್ಲುಸುವಲ್ಲಿ ವಿಫಲರಾದರು. ಅವರು 20 ರನ್ ನೀಡಿ 3 ವಿಕೆಟ್ ಪಡೆದರೆ, ದುಷ್ಮಂತ ಚಮೀರಾ 27 ರನ್ ನೀಡಿ 2 ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ 3ನೇ ಸ್ಥಾನ ಪಡೆದುಕೊಂಡಿದೆ. ಬವೂಮ ಪಡೆ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಇದೇ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು 4 ಅಂಕ ಪಡೆದು ಮೊದಲೆರಡು ಸ್ಥಾನದಲ್ಲಿವೆ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ ದಕ್ಷಿಣ ಆಫ್ರಿಕಾದ ಸೇಮಿಸ್ ಕನಸು ನನಸಾಗುವ ಸಾಧ್ಯತೆಯಿದೆ.
ಈಗಾಗಲೇ ಬಾಂಗ್ಲಾದೇಶ ಈ ಗುಂಪಿನಲ್ಲಿ ಹೊರಬಿದ್ದಿದೆ, ಇದೀಗ 2 ಸೋಲಿನೊಂದಿಗೆ ಶ್ರೀಲಂಕಾ ಕೂಡ ಬಹುತೇಕ ಹೊರಬಿದ್ದಂತಾಗಿದೆ.
ಇದನ್ನು ಓದಿ:ಟ್ರೆಂಟ್ ಬೌಲ್ಟ್ ವಿರುದ್ಧ ಕೌಂಟರ್ ಅಟ್ಯಾಕ್ ಮಾಡಲು ಸಿದ್ಧರಿರಬೇಕು : ವಿರಾಟ್ ಕೊಹ್ಲಿ