ಹೋಬರ್ಟ್: ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಐರ್ಲೆಂಡ್ ತಂಡ ಎರಡು ಬಾರಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಸೂಪರ್-12ಗೆ ಲಗ್ಗೆ ಇಟ್ಟಿದೆ. ಟೂರ್ನಿಯ 11ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ ಸೋಲನ್ನಪ್ಪಿ ವಿಶ್ವಕಪ್ನಿಂದ ಹೊರ ಬಿದ್ದಿದೆ.
ವೆಸ್ಟ್ ಇಂಡೀಸ್ ಇನ್ನಿಂಗ್ಸ್ : ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ತಂಡ 146 ರನ್ಗಳಿಗೆ ಕಟ್ಟಿ ಹಾಕಿತ್ತು. ಆರಂಭದಿಂದಲೇ ಕುಸಿತ ಕಂಡ ವೆಸ್ಟ್ ತಂಡ ನಿಧನವಾಗಿ ಚೇತರಿಸಿಕೊಂಡಿತು. ಬ್ರಾಂಡನ್ ಕಿಂಗ್ ಅಮೋಘ ಅರ್ಧ ಶತಕದ ನೆರವಿನಿಂದ ತಂಡ ಸ್ಕೋರ್ ಏರಿಕೆ ಕಂಡಿತು. ಒಟ್ಟಿನಲ್ಲಿ ನಿಗದಿತ 20 ಓವರ್ಗಳಿಗೆ ವೆಸ್ಟ್ ಇಂಡೀಸ್ ತಂಡ ಐದು ವಿಕೆಟ್ಗಳ ನಷ್ಟಕ್ಕೆ 146 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ಐರ್ಲೆಂಡ್ ತಂಡಕ್ಕೆ 147 ರನ್ಗಳ ಗುರಿ ನೀಡಿತ್ತು.
-
Ireland are through to the Super 12 🎉
— ICC (@ICC) October 21, 2022 " class="align-text-top noRightClick twitterSection" data="
A comprehensive performance in Hobart sees them knocking West Indies out of the tournament#T20WorldCup |#IREvWI | 📝: https://t.co/LNaSAJSEKW pic.twitter.com/iT0mYvnNzP
">Ireland are through to the Super 12 🎉
— ICC (@ICC) October 21, 2022
A comprehensive performance in Hobart sees them knocking West Indies out of the tournament#T20WorldCup |#IREvWI | 📝: https://t.co/LNaSAJSEKW pic.twitter.com/iT0mYvnNzPIreland are through to the Super 12 🎉
— ICC (@ICC) October 21, 2022
A comprehensive performance in Hobart sees them knocking West Indies out of the tournament#T20WorldCup |#IREvWI | 📝: https://t.co/LNaSAJSEKW pic.twitter.com/iT0mYvnNzP
ವೆಸ್ಟ್ ಇಂಡೀಸ್ ತಂಡದ ಪರವಾಗಿ ಕೈಲ್ ಮೇಯರ್ಸ್ 1 ರನ್, ಜಾನ್ಸನ್ ಚಾರ್ಲ್ಸ್ 24 ರನ್, ಎವಿನ್ ಲೆವಿಸ್ 13 ರನ್, ನಿಕೋಲಸ್ ಪೂರನ್ 13 ರನ್, ರೋವ್ಮನ್ ಪೊವೆಲ್ 6 ರನ್ ಮತ್ತು ಬ್ರಾಂಡನ್ ಕಿಂಗ್ 62 ರನ್ ಹಾಗೂ ಓಡಿಯನ್ ಸ್ಮಿತ್ 19 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್ ಪರ ಗರೆಥ್ ಡೆಲಾನಿ ಮೂರು ವಿಕೆಟ್ ಪಡೆದು ಮಿಂಚಿದರೆ, ಸಿಮಿ ಸಿಂಗ್ ಮತ್ತು ಬ್ಯಾರಿ ಮೆಕಾರ್ಥಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.
-
Stirling to the stands!
— ICC (@ICC) October 21, 2022 " class="align-text-top noRightClick twitterSection" data="
We can reveal that this 6 from Paul Stirling is one of the moments that could be featured in your @0xFanCraze Crictos of the Game packs from West Indies v Ireland.
Grab your pack from https://t.co/8TpUHbQQaa to own iconic moments from every game. pic.twitter.com/Np7zfM0jfK
">Stirling to the stands!
— ICC (@ICC) October 21, 2022
We can reveal that this 6 from Paul Stirling is one of the moments that could be featured in your @0xFanCraze Crictos of the Game packs from West Indies v Ireland.
Grab your pack from https://t.co/8TpUHbQQaa to own iconic moments from every game. pic.twitter.com/Np7zfM0jfKStirling to the stands!
— ICC (@ICC) October 21, 2022
We can reveal that this 6 from Paul Stirling is one of the moments that could be featured in your @0xFanCraze Crictos of the Game packs from West Indies v Ireland.
Grab your pack from https://t.co/8TpUHbQQaa to own iconic moments from every game. pic.twitter.com/Np7zfM0jfK
ಐರ್ಲೆಂಡ್ ಇನ್ನಿಂಗ್ಸ್: ವೆಸ್ಟ್ ಇಂಡೀಸ್ ನೀಡಿದ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭದಿಂದಲೇ ಅಬ್ಬರಿಸಿತು. ಮೊದಲ ವಿಕೆಟ್ಗೆ ಐರ್ಲೆಂಡ್ ತಂಡ 73 ರನ್ಗಳನ್ನು ಕಲೆ ಹಾಕಿತು. ಆರಂಭಿಕದ ಆಟಗಾರರಾದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಮತ್ತು ಪಾಲ್ ಸ್ಟಿರ್ಲಿಂಗ್ ವೆಸ್ಟ್ ಇಂಡೀಸ್ ತಂಡದ ಬೌಲರ್ಗಳ ಬೆವರಿಳಿಸಿದರು. ನಾಯಕ ಆಂಡ್ರ್ಯೂ ಬಾಲ್ಬಿರ್ನಿ 23 ಎಸೆತಗಳಲ್ಲಿ 37 ರನ್ಗಳನ್ನು ಕಲೆ ಹಾಕಿ ಅಕಿಲ್ ಹುಸೇನ್ ಬೌಲಿಂಗ್ನಲ್ಲಿ ಔಟಾದರು. ಬಳಿಕ ಬಂದ ವಿಕೆಟ್ ಕೀಪರ್ ಲೋರ್ಕನ್ ಟಕರ್ ಪಾಲ್ ಸ್ಟಿರ್ಲಿಂಗ್ಗೆ ಸಾಥ್ ನೀಡಿದರು.
ವೆಸ್ಟ್ ಇಂಡೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಪಾಲ್ ಸ್ಟಿರ್ಲಿಂಗ್ ಅಮೋಘ ಅರ್ಧ ಶತಕ ಸಿಡಿಸಿದರು. ಪಾಲ್ ಸ್ಟಿರ್ಲಿಂಗ್ 48 ಎಸೆತಗಳಲ್ಲಿ 66 ರನ್ಗಳನ್ನು ಕಲೆ ಹಾಕಿದರೆ, ಲೋರ್ಕನ್ ಟಕರ್ 35 ಎಸೆತಗಳಲ್ಲಿ 45 ರನ್ಗಳನ್ನು ಕಲೆ ಹಾಕಿ ಮಿಂಚಿದರು. ಐರ್ಲೆಂಡ್ ತಂಡ 17.3 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 150 ರನ್ಗಳನ್ನು ಕಲೆ ಹಾಕುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ವೆಸ್ಟ್ ಇಂಡೀಸ್ ಪರ ಅಕಿಲ್ ಹುಸೇನ್ ಒಬ್ಬರೇ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವೆಸ್ಟ್ ಇಂಡೀಸ್ ತಂಡ ಐರ್ಲೆಂಡ್ ತಂಡದ ವಿರುದ್ಧ ಸೋಲಿನ ಮೂಲಕ ಈ ಬಾರಿಯ ವಿಶ್ವಕಪ್ನಿಂದ ಹೊರಬಿದ್ದಿದೆ.
ಓದಿ: ಮುಂಬೈ ಕ್ರಿಕೆಟ್ ಸಂಸ್ಥೆ ಚುನಾವಣೆಯಲ್ಲಿ ಸಂದೀಪ್ ಪಾಟೀಲ್ಗೆ ಸೋಲು