ದುಬೈ : ಟಿ 20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸೆಣಸಾಡುತ್ತಿವೆ. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮಾಜಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡ ಕೇವಲ 55 ರನ್ಗಳಿಸಲಷ್ಟೇ ಶಕ್ತವಾಗಿದೆ. ಮಾರಕ ಬೌಲಿಂಗ್ ದಾಳಿ ನಡೆಸಿದ ಆಂಗ್ಲರ ಪಡೆ ವಿಂಡೀಸ್ ತಂಡಕ್ಕೆ ಬಿಗ್ ಶಾಕ್ ನೀಡಿದೆ.
-
A scintillating bowling performance from England as bowl West Indies out for 55 ✨#T20WorldCup | #ENGvWI | https://t.co/bO59jyDrzE pic.twitter.com/uC6IdtKMB6
— T20 World Cup (@T20WorldCup) October 23, 2021 " class="align-text-top noRightClick twitterSection" data="
">A scintillating bowling performance from England as bowl West Indies out for 55 ✨#T20WorldCup | #ENGvWI | https://t.co/bO59jyDrzE pic.twitter.com/uC6IdtKMB6
— T20 World Cup (@T20WorldCup) October 23, 2021A scintillating bowling performance from England as bowl West Indies out for 55 ✨#T20WorldCup | #ENGvWI | https://t.co/bO59jyDrzE pic.twitter.com/uC6IdtKMB6
— T20 World Cup (@T20WorldCup) October 23, 2021
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ವಿಂಡೀಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಓಪನರ್ ಆಗಿ ಕಣಕ್ಕಿಳಿದ ಎವಿನ್ ಲೂಯಿಸ್ ಮತ್ತು ಸಿಮನ್ಸ್ ಜೋಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ಎಡವಿತು. ಎವಿನ್ ಲೂಯಿಸ್ ಕೇವಲ 6 ರನ್ಗಳಿಸಿ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರೆ, ಇತ್ತ ಸಿಮನ್ಸ್ ಕೇವಲ 3 ರನ್ಗೆ ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ (13), ಶಿಮ್ರಾನ್ ಹೆಟ್ಮಾಯರ್ (9), ಬ್ರಾವೋ (5), ಪೂರನ್ (1), ನಾಯಕ ಪೋಲಾರ್ಡ್ (6), ರಸೇಲ್ (0), ಮೆಕಾಯ್(0), ರವಿ ರಾಂಪಾಲ್ (3) ರನ್ ಗಳಿಸಿ ಔಟಾದರು. ಕ್ರಿಸ್ ಗೇಲ್ ಗಳಿಸಿದ 13 ರನ್ ವಿಂಡೀಸ್ ಆಟಗಾರರು ಗಳಿಸದ ಅತ್ಯಧಿಕ ರನ್ ಆಗಿದೆ. ಗೇಲ್ ಬಿಟ್ಟರೆ ಬೇರೆ ಯಾವುದೇ ಆಟಗಾರರು ಎರಡಂಕಿ ಮೊತ್ತ ದಾಟಲಿಲ್ಲ.
ಇಂಗ್ಲೆಂಡ್ ಉತ್ತಮ ಬೌಲಿಂಗ್ ದಾಳಿ ನಡೆಸಿದೆ. ಆದಿಲ್ ರಶೀದ್ 4 ವಿಕೆಟ್ ಪಡೆದು ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ಮೋಯಿನ್ ಅಲಿ 2, ಮಿಲ್ಸ್ 2 ವಿಕೆಟ್ ಪಡೆದು ವಿಂಡೀಸ್ ಪಡೆಯನ್ನ ಕಟ್ಟಿ ಹಾಕಿದರು.