ಅಬುಧಾಬಿ: ಸೆಮಿಫೈನಲ್ ಪ್ರವೇಶಿಸಲು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಟಿ20ವ ವಿಶ್ವಕಪನ್ ಸೂಪರ್ 12 ಪಂದ್ಯದಲ್ಲಿ 62 ರನ್ಗಳಿಂದ ಗೆದ್ದು ಬೀಗಿದೆ.
ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 160 ರನ್ಗಳಿಸಿತ್ತು.
ಆರಂಭಿಕ ಬ್ಯಾಟರ್ಗಳಾದ ಹಜರುತುಲ್ಲಾ ಝಜೈ 27 ಎಸೆತಗಳಲ್ಲಿ 4 ಬೌಂಡರಿ , 2 ಸಿಕ್ಸರ್ಗಳ ಸಹಿತ 33, ಮೊಹಮ್ಮದ್ ಶಹ್ಜಾದ್ 33 ಎಸೆತಗಳಲ್ಲಿ 3 ಬೌಂಡರಿ , 2 ಸಿಕ್ಸರ್ಗಳ ಸಹಿತ 45, ಅಸ್ಗರ್ ಅಫ್ಘಾನ್ 23 ಎಸೆತಗಳಲ್ಲಿ 3 ಬೌಂಡರಿ , ಒಂದು ಸಿಕ್ಸರ್ ಸಹಿತ 31 ಹಾಗೂ ನಾಯಕ 17 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 32 ರನ್ಗಳಿಸಿ ಅಫ್ಘಾನ್ ತಂಡ ಎದುರಾಳಿ ನಮೀಬಿಯಾಗೆ161ರನ್ಗಳ ಕಠಿಣ ಗುರಿ ನೀಡಲು ನೆರವಾಗಿದ್ದರು.
-
Afghanistan get back to winning ways in style 🙌#T20WorldCup | #AFGvNAM | https://t.co/rCKvTe1kpV pic.twitter.com/219x3Usf6U
— ICC (@ICC) October 31, 2021 " class="align-text-top noRightClick twitterSection" data="
">Afghanistan get back to winning ways in style 🙌#T20WorldCup | #AFGvNAM | https://t.co/rCKvTe1kpV pic.twitter.com/219x3Usf6U
— ICC (@ICC) October 31, 2021Afghanistan get back to winning ways in style 🙌#T20WorldCup | #AFGvNAM | https://t.co/rCKvTe1kpV pic.twitter.com/219x3Usf6U
— ICC (@ICC) October 31, 2021
161 ರನ್ಗಳ ಗುರಿ ಬೆನ್ನಟ್ಟಿದ ನಮೀಬಿಯಾ ತಂಡ ಅಫ್ಘಾನಿಸ್ತಾನದ ಮಾರಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 98 ರನ್ಗಳಿಸಿತು. ಡೇವಿಡ್ ವೀಸ್ 30 ಎಸೆತಗಳಲ್ಲಿ 26 ರನ್ಗಳಿಸಿ ತಂಡದ ಗರಿಷ್ಠ ಹಾಗೂ 20 ರ ಗಡಿದಾಟಿದ ಏಕೈಕ ಬ್ಯಾಟರ್ ಎನಿಸಿಕೊಂಡರು.
-
What a return to international cricket for Hamid Hassan 💪#T20WorldCup | #AFGvNAM | https://t.co/x0zfGlbLDP pic.twitter.com/EfprKdohrP
— ICC (@ICC) October 31, 2021 " class="align-text-top noRightClick twitterSection" data="
">What a return to international cricket for Hamid Hassan 💪#T20WorldCup | #AFGvNAM | https://t.co/x0zfGlbLDP pic.twitter.com/EfprKdohrP
— ICC (@ICC) October 31, 2021What a return to international cricket for Hamid Hassan 💪#T20WorldCup | #AFGvNAM | https://t.co/x0zfGlbLDP pic.twitter.com/EfprKdohrP
— ICC (@ICC) October 31, 2021
ಇವರನ್ನು ಹೊರೆತುಪಡಿಸಿದರೆ ನಾಯಕ ಗೆರ್ಹಾಡ್ 12, ಲಾಫ್ಟೀ ಈಟನ್ 14, ವ್ಯಾನ್ ಲಿಂಗೆನ್ 11 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದ ಹೀರೋ ಜೆಜೆ ಸ್ಮಿತ್ ಇಂದು ಖಾತೆ ತೆರೆಯದೇ ಡಕ್ ಔಟ್ ಆದರು.
ಅಫ್ಘಾನಿಸ್ತಾನ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಹಮೀದ್ ಹಸನ್ 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ 3 ವಿಕೆಟ್ ಪಡೆದರು. ಇವರಿಗೆ ಸಾಥ್ ನೀಡಿದ ನವೀನ್ ಉಲ್ ಹಕ್ 26 ರನ್ ನೀಡಿ 3 ವಿಕೆಟ್ ಪಡೆದರೆ, ಗುಲ್ಬದ್ದೀನ್ ನೈಬ್ 19 ರನ್ ನೀಡಿ 2 ವಿಕೆಟ್ ಹಾಗೂ ರಶೀದ್ ಖಾನ್ 14 ರನ್ಗಳಿಗೆ 1 ವಿಕೆಟ್ ಪಡೆದು ಬೃಹತ್ ಜಯಕ್ಕೆ ಕಾರಣರಾದರು.
ಅಫ್ಘಾನಿಸ್ತಾನ ಪ್ರಸ್ತುತ ಆಡಿರುವ 3 ಪಂದ್ಯಗಳಿಂದ 2 ಜಯ ಮತ್ತು ಒಂದು ಸೋಲು ಕಂಡು 2ನೇ ಸ್ಥಾನದಲ್ಲಿದೆ. ಒಂದು ವೇಳೆ ಸೂಪರ್ 12 ನಲ್ಲಿ ಅಫ್ಘಾನಿಸ್ತಾನ ತಂಡ ಭಾರತ ಅಥವಾ ನ್ಯೂಜಿಲ್ಯಾಂಡ್ ತಂಡಗಳಲ್ಲಿ ಒಂದನ್ನು ಮಣಿಸಿದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಒದಗಿ ಬರದಲಿದೆ.
ಇದನ್ನು ಓದಿ:ಪುರುಷರ ತಂಡಕ್ಕೆ ಕೋಚ್ ಆಗಿ ಆಯ್ಕೆ.. ಇದು ಉತ್ತಮ ಆರಂಭ, ಆದ್ರೆ ನಾನೇ ಕೊನೆಯಾಗಬಾರದು: ಸಾರಾ ಟೇಲರ್