ನವದೆಹಲಿ: ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದರು, ಹಲವು ರಾಜ್ಯಗಳ ಪರಿಸ್ಥಿತಿ ಇತ್ತೀಚಿಗಷ್ಟೇ ಸುಧಾರಿಸುತ್ತಿದೆ. ಈ ನಡುವೆ ಟಿ - 20 ವಿಶ್ವಕಪ್ ಭಾರತದಲ್ಲೇ ನಡೆಯುವುದು ಅನುಮಾನ ಎನ್ನಲಾಗಿತ್ತು.
ಆದರೆ ಇದೀಗ ಐಸಿಸಿ ಈ ಕುರಿತು ನಿರ್ಧಾರ ಪ್ರಕಟಿಸುವ ಬಿಸಿಸಿಐಗೆ ಕಾಲಾವಕಾಶ ನೀಡಿದ್ದು, ಜೂನ್ 28ರ ಒಳಗಾಗಿ ಟಿ-20 ವಿಶ್ವಕಪ್ ಟೂರ್ನಿ ಆಯೋಜನೆ ಸಂಬಂಧ ತೀರ್ಮಾನ ತಿಳಿಸಲು ಸೂಚಿಸಿದೆ.
ಈ ಮೊದಲು ಸಹ ಬಿಸಿಸಿಐಗೆ ಕಾಲಾವಕಾಶ ನೀಡಿ ತಮ್ಮ ತೀರ್ಮಾನ ತಿಳಿಸುವಂತೆ ಕೇಳಿತ್ತು. ಆದರೆ, ಮತ್ತೆ ಕೋವಿಡ್ ಪರಿಸ್ಥಿತಿ ಅವಲೋಕಿಸಲು ಸಮಯಾವಕಾಶ ನೀಡಿದೆ.
ಈ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾ ಜೊತೆ ಐಸಿಸಿ ಅಧಿಕಾರಿಗಳು ವರ್ಚುಯಲ್ ಸಭೆ ನಡೆಸಿದ್ದಾರೆ. ಈ ಸಭಯಲ್ಲಿ ಟಿ-20 ವಿಶ್ವಕಪ್ ಆಯೋಜನೆ ಕುರಿತು ಭಾರತ ಒಂದು ತಿಂಗಳ ಅವಧಿ ನೀಡುವಂತೆ ಮನವಿ ಮಾಡಿತು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅಲ್ಲದೇ ಭಾರತದಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆ ಸಾಧ್ಯವಾಗದೇ ಇದ್ದರೆ, ಟೂರ್ನಿಯೂ ಯುಎಇಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಓದಿ: ನಾನೊಬ್ಬ ಸಸ್ಯಹಾರಿ ಅಂತ ಎಲ್ಲೂ ಹೇಳಿಕೊಂಡಿಲ್ಲ ; ಟ್ರೋಲಿಗರಿಗೆ ವಿರಾಟ್ ಕೊಟ್ಟ ಉತ್ತರ ಹೀಗಿತ್ತು