ಹೈದರಾಬಾದ್ (ತೆಲಂಗಾಣ): ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಶತಕದಾಟದ ಫಲವಾಗಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಗೆದ್ದು ಬೀಗಿತು. ಈ ಮೂಲಕ ಪಾಕಿಸ್ತಾನ ಎರಡು ಗೆಲುವು ಸಾಧಿಸಿದ್ದು ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
-
Tons from Abdullah Shafique and Mohammed Rizwan guide Pakistan to the most successful chase in ICC Men's Cricket World Cup history 🔥#CWC23 #PAKvSL 📝: https://t.co/oVVBdMbGPN pic.twitter.com/Y9xq0o3WOj
— ICC Cricket World Cup (@cricketworldcup) October 10, 2023 " class="align-text-top noRightClick twitterSection" data="
">Tons from Abdullah Shafique and Mohammed Rizwan guide Pakistan to the most successful chase in ICC Men's Cricket World Cup history 🔥#CWC23 #PAKvSL 📝: https://t.co/oVVBdMbGPN pic.twitter.com/Y9xq0o3WOj
— ICC Cricket World Cup (@cricketworldcup) October 10, 2023Tons from Abdullah Shafique and Mohammed Rizwan guide Pakistan to the most successful chase in ICC Men's Cricket World Cup history 🔥#CWC23 #PAKvSL 📝: https://t.co/oVVBdMbGPN pic.twitter.com/Y9xq0o3WOj
— ICC Cricket World Cup (@cricketworldcup) October 10, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸಿಂಹಳೀಯರು ಕುಸಲ್ ಮೆಂಡೀಸ್ ಮತ್ತು ಸದೀರ ಸಮರವಿಕ್ರಮ ಅವರ ಶತಕದ ನೆರವಿನಿಂದ 345 ರನ್‌ಗಳ ಬೃಹತ್ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಪಾಕ್ಗೆ ಲಂಕಾ ಬೌಲರ್ಗಳು ಆಘಾತ ನೀಡಿದರು. ತಂಡ 16 ರನ್ ಗಳಿಸಿದ್ದಾಗ ಇಮಾಮ್-ಉಲ್-ಹಕ್ (12) ವಿಕೆಟ್ ಬಿದ್ದರೆ, 37 ಗಳಿಸಿದ್ದಾಗ ನಾಯಕ ಬಾಬರ್ ಅಜಮ್ (10) ಔಟಾಗಿ ಪೆವಿಲಿಯನ್ಗೆ ಮರಳಿದ್ದರು. ದಿಲ್ಶನ್ ಮಧುಶಂಕ ಈ ಇಬ್ಬರು ಬ್ಯಾಟರ್ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
-
Mohammed Rizwan's first-ever ICC Men's Cricket World Cup hundred guides the Pakistan chase in Hyderabad 👌@mastercardindia Milestones 🏏#CWC23 #PAKvSL pic.twitter.com/PQqbif2I5B
— ICC Cricket World Cup (@cricketworldcup) October 10, 2023 " class="align-text-top noRightClick twitterSection" data="
">Mohammed Rizwan's first-ever ICC Men's Cricket World Cup hundred guides the Pakistan chase in Hyderabad 👌@mastercardindia Milestones 🏏#CWC23 #PAKvSL pic.twitter.com/PQqbif2I5B
— ICC Cricket World Cup (@cricketworldcup) October 10, 2023Mohammed Rizwan's first-ever ICC Men's Cricket World Cup hundred guides the Pakistan chase in Hyderabad 👌@mastercardindia Milestones 🏏#CWC23 #PAKvSL pic.twitter.com/PQqbif2I5B
— ICC Cricket World Cup (@cricketworldcup) October 10, 2023
ಆದರೆ ಪಾಕಿಸ್ತಾನದ ಮೂರನೇ ವಿಕೆಟ್ ಬಲಿಷ್ಠವಾಗಿ ನಿಂತಿದ್ದರಿಂದ ಲಂಕಾ ಆಟ ನಡೆಯಲಿಲ್ಲ. ಲಂಕನ್ನರ ಬೌಲಿಂಗ್ಗೆ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಪಿಚ್ ಅರಿತುಕೊಂಡರು. ವಿಕೆಟ್ಗೆ ಸೆಟ್ ಆದ ನಂತರ ಈ ಜೋಡಿ 176 ರನ್‌ಗಳ ಬೃಹತ್ ಜೊತೆಯಾಟವಾಡಿದರು. ಇವರ ಪಾಲುದಾರಿಕೆಯನ್ನು ನಿಯಂತ್ರಿಸಲು ಲಂಕಾಕ್ಕೆ ಸಾಧ್ಯವಾಗಲಿಲ್ಲ. ಸಿಂಹಳೀಯ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಇಬ್ಬರು ಬ್ಯಾಟರ್ಗಳು ತಂಡಕ್ಕೆ ಗೆಲುವಿನ ಗಿಫ್ಟ್ ಕೊಟ್ಟರು.
ಯುವ ಆಟಗಾರ ಅಬ್ದುಲ್ಲಾ ಶಫೀಕ್ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಏಕದಿನ ಶತಕ ದಾಖಲಿಸಿದರು. 103 ಬಾಲ್ ಆಡಿದ ಅವರು 10 ಬೌಂಡರಿ ಮತ್ತು 3 ಸಿಕ್ಸರ್ನಿಂದ 113 ರನ್‌ಗಳ ಇನ್ನಿಂಗ್ಸ್ ಕಟ್ಟಿ ವಿಕೆಟ್ ಕೊಟ್ಟರು. ಈ ವೇಳೆಗೆ ಪಾಕ್ ಗೆಲುವಿನ ಸನಿಹದಲ್ಲಿತ್ತು. ಶಫೀಕ್ ವಿಕೆಟ್ ನಂತರ ರಿಜ್ವಾನ್ ರನ್ ಗಳಿಕೆ ವೇಗ ಹೆಚ್ಚಿಸಿದರು. ಸೌದ್ ಶಕೀಲ್ ಜೊತೆ ಪಾಲುದಾರಿಕೆ ಮಾಡಿದ ಅವರು ಶತಕ ಸಿಡಿಸಿ ಸಂಭ್ರಮಿಸಿದರು. 31 ರನ್ ಗಳಿಸಿದ ಸೌದ್ ಶಕೀಲ್ ತೀಕ್ಷ್ಣ ಬಾಣಕ್ಕೆ ವಿಕೆಟ್ ಕೊಟ್ಟರು.
-
Abdullah Shafique keeps the Pakistan chase alive with a splendid maiden ODI hundred 👊@mastercardindia Milestones 🏏#CWC23 #PAKvSL 📝: https://t.co/YgezSxRqgj pic.twitter.com/s1isTBPP8U
— ICC Cricket World Cup (@cricketworldcup) October 10, 2023 " class="align-text-top noRightClick twitterSection" data="
">Abdullah Shafique keeps the Pakistan chase alive with a splendid maiden ODI hundred 👊@mastercardindia Milestones 🏏#CWC23 #PAKvSL 📝: https://t.co/YgezSxRqgj pic.twitter.com/s1isTBPP8U
— ICC Cricket World Cup (@cricketworldcup) October 10, 2023Abdullah Shafique keeps the Pakistan chase alive with a splendid maiden ODI hundred 👊@mastercardindia Milestones 🏏#CWC23 #PAKvSL 📝: https://t.co/YgezSxRqgj pic.twitter.com/s1isTBPP8U
— ICC Cricket World Cup (@cricketworldcup) October 10, 2023
ಕೊನೆಯಲ್ಲಿ ಇಫ್ತಿಕರ್ ಅಹ್ಮದ್ ಮತ್ತು ಮೊಹಮ್ಮದ್ ರಿಜ್ವಾನ್ ಅಜೇಯರಾಗಿ ಪಂದ್ಯ ಗೆಲ್ಲಿಸಿದರು. ರಿಜ್ವಾನ್ ಇಂದಿನ ಪಂದ್ಯದ ಇನ್ನಿಂಗ್ಸ್ನಲ್ಲಿ 121 ಬಾಲ್ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 131 ರನ್ ಗಳಿಸಿದರೆ, ಅಹ್ಮದ್ 22 ರನ್ ಕಲೆ ಹಾಕಿದರು.
ಲಂಕಾ ಪರ ಏಳು ಜನ ಬೌಲರ್ಗಳು ಬೌಲಿಂಗ್ ಮಾಡಿದರಾದರೂ ರನ್ಗೆ ಕಡಿವಾಣ ಹಾಕುವಲ್ಲಿ ಎಡವಿದರು. ದಿಲ್ಶನ್ ಮಧುಶಂಕ 2 ಮತ್ತು ಮಹೇಶ್ ತೀಕ್ಷಣ, ಮತೀಶ ಪತಿರಣ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ವಿಶ್ವಕಪ್ನಲ್ಲಿ ನಾಳೆ ಭಾರತ-ಅಫ್ಘಾನಿಸ್ತಾನ ಪಂದ್ಯ; ರೋಹಿತ್ ಬಳಗಕ್ಕೆ 2ನೇ ಗೆಲುವಿನ ನಿರೀಕ್ಷೆ