ETV Bharat / sports

ಮೆಂಡಿಸ್, ಸಮರವಿಕ್ರಮ ಶತಕದಾಟ; ಪಾಕಿಸ್ತಾನಕ್ಕೆ 345 ರನ್‌ಗಳ ಬೃಹತ್‌ ಟಾರ್ಗೆಟ್‌

author img

By ETV Bharat Karnataka Team

Published : Oct 10, 2023, 6:30 PM IST

Cricket World Cup 2023 Pakistan vs Sri Lanka Match: ಪಾಕಿಸ್ತಾನದ ವಿರುದ್ಧ ಸಿಂಹಳೀಯರು ಭರ್ಜರಿ ಬ್ಯಾಟಿಂಗ್​ ಮಾಡಿದ್ದು, 345 ರನ್​ ಗುರಿ ನೀಡಿದ್ದಾರೆ.

Etv Bharat
Etv Bharat

ಹೈದರಾಬಾದ್​ (ತೆಲಂಗಾಣ): ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ ಅವರ ಶತಕದಾಟ ಮತ್ತು ಪಾತುಮ್ ನಿಸ್ಸಾಂಕ ಅವರ ಅರ್ಧಶತಕದ ನೆರವಿನಿಂದ ಏಷ್ಯಾಕಪ್​ ರನ್ನರ್‌ಅಪ್​ ಶ್ರೀಲಂಕಾ 344 ರನ್‌ಗಳ ಬೃಹತ್​ ಮೊತ್ತ ಕಲೆಹಾಕಿತು. ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಿ ಮಣಿದಿದ್ದ ಲಂಕಾ ಇಂದು ಶತಾಯಗತಾಯ ಗೆಲ್ಲಲೇ ಬೇಕೆಂಬ ನಿರ್ಧಾರಕ್ಕೆ ಬಂದಂತಿದೆ. ನೆದರ್ಲೆಂಡ್ ಮಣಿಸಿ ಉತ್ಸಾಹದಲ್ಲಿರುವ ಪಾಕಿಸ್ತಾನ ವಿಶ್ವಕಪ್​ ಲೀಗ್​ನಲ್ಲಿ ಎರಡನೇ ಗೆಲುವು ದಾಖಲಿಸಲು 345 ರನ್​ ಗಳಿಸಬೇಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಲಂಕಾ ಪಾಕಿಸ್ತಾನದ ಬೌಲರ್​ಗಳನ್ನು ಚೆಂಡಾಡಿದರು. ಎರಡನೇ ಓವರ್​ನಲ್ಲಿ ಹಸನ್​ ಅಲಿ ಕುಸಾಲ್​ ಪೆರೇರಾ (0) ಅವರ ವಿಕೆಟ್​ ಉರುಳಿಸಿ ಲಂಕಾಗೆ ಶಾಕ್​ ನೀಡಿದರು. ಆದರೆ, ಲಂಕಾ ಈ ಶಾಕ್‌ನಿಂದ ಬಲುಬೇಗ ಹೊರಬಂತು. ಎರಡನೇ ವಿಕೆಟ್​ಗೆ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಶತಕದ ಜೊತೆಯಾಟವಾಡಿದರು. ಅರ್ಧಶತಕ ಗಳಿಸಿದ ನಿಸ್ಸಾಂಕ (51) ವಿಕೆಟ್​ ಕೊಟ್ಟು ಪೆವಿಲಿಯನ್​ಗೆ ಮರಳಿದರೆ, ನಂತರ ಬಂದ ಸದೀರ ಸಮರವಿಕ್ರಮ ಪಿಚ್​ಗೆ ಹೊಂದಿಕೊಂಡಿದ್ದ ಮೆಂಡಿಸ್ 111 ರನ್​ಗಳ ಪಾಲುದಾರಿಕೆ ಮಾಡಿದರು. ಕುಸಲ್ ಮೆಂಡಿಸ್ ಏಕದಿನ ಕ್ರಿಕೆಟ್​ನ ತಮ್ಮ 3ನೇ ಶತಕ ದಾಖಲಿಸಿದರು. 77 ಬಾಲ್​ನಲ್ಲಿ 14 ಬೌಂಡರಿ ಮತ್ತು 6 ಸಿಕ್ಸ್​ನಿಂದ 122 ರನ್‌ ಗಳಿಸಿ ವಿಕೆಟ್​ ಕೊಟ್ಟರು.

Kusal Mendis was once again in pristine touch in Hyderabad against Pakistan ✨#CWC23 | PAK#SL pic.twitter.com/KqmZkIAkSr

— ICC Cricket World Cup (@cricketworldcup) October 10, 2023

ಮೆಂಡಿಸ್ ವಿಕೆಟ್​ ನಂತರ ಸಮರವಿಕ್ರಮಗೆ ಸರಿಯಾದ ಪಾಲುದಾರಿಕೆ ಸಿಗಲಿಲ್ಲ. ಹೀಗಿದ್ದರೂ ಏಕದಿನ ಕ್ರಿಕೆಟ್​ನ ಚೊಚ್ಚಲ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 89 ಬಾಲ್​ ಆಡಿದ ಅವರು 11 ಬೌಂಡರಿ ಮತ್ತು 2 ಸಿಕ್ಸ್​ನಿಂದ 108 ರನ್​ ಕಲೆಹಾಕಿ ವಿಕೆಟ್​ ಕೈಚೆಲ್ಲಿದರು. ನಂತರ ಚರಿತ್ ಅಸಲಂಕಾ (1), ಧನಂಜಯ ಡಿ ಸಿಲ್ವಾ (25), ದಸುನ್ ಶನಕ (12), ಮಹೇಶ್ ತೀಕ್ಷಣ (0) ಮತ್ತು ದುನಿತ್ ವೆಲ್ಲಲಾಗೆ (10) ಗಮನಾರ್ಹ ಇನ್ನಿಂಗ್ಸ್​ ಕಟ್ಟಲಿಲ್ಲ. 50 ಓವರ್‌ಗಳ​ ಮುಕ್ತಾಯಕ್ಕೆ ಶ್ರೀಲಂಕಾ 9 ವಿಕೆಟ್​ ಕಳೆದುಕೊಂಡು 344 ರನ್​ ಕಲೆಹಾಕಿತು.

ಪಾಕಿಸ್ತಾನದ ಪರ ಹಸನ್​ ಅಲಿ ದುಬಾರಿಯಾದರೂ ಪ್ರಮುಖ ನಾಲ್ಕು ವಿಕೆಟ್​ ಉರುಳಿಸುವಲ್ಲಿ ಯಶಸ್ವಿಯಾದರು. ಹ್ಯಾರಿಸ್​ ರೌಫ್​ 2, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮತ್ತು ಶಾಹೀನ್ ಅಫ್ರಿದಿ ತಲಾ ಒಂದೊಂದು ವಿಕೆಟ್​ ಕಿತ್ತರು.

ಇದನ್ನೂ ಓದಿ: ಸ್ಟಾರ್​ ಆಟಗಾರ ಶುಭ್‌ಮನ್ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಪಾಕ್ ವಿರುದ್ಧ ಕಣಕ್ಕೆ ಅನುಮಾನ

ಹೈದರಾಬಾದ್​ (ತೆಲಂಗಾಣ): ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ ಅವರ ಶತಕದಾಟ ಮತ್ತು ಪಾತುಮ್ ನಿಸ್ಸಾಂಕ ಅವರ ಅರ್ಧಶತಕದ ನೆರವಿನಿಂದ ಏಷ್ಯಾಕಪ್​ ರನ್ನರ್‌ಅಪ್​ ಶ್ರೀಲಂಕಾ 344 ರನ್‌ಗಳ ಬೃಹತ್​ ಮೊತ್ತ ಕಲೆಹಾಕಿತು. ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಿ ಮಣಿದಿದ್ದ ಲಂಕಾ ಇಂದು ಶತಾಯಗತಾಯ ಗೆಲ್ಲಲೇ ಬೇಕೆಂಬ ನಿರ್ಧಾರಕ್ಕೆ ಬಂದಂತಿದೆ. ನೆದರ್ಲೆಂಡ್ ಮಣಿಸಿ ಉತ್ಸಾಹದಲ್ಲಿರುವ ಪಾಕಿಸ್ತಾನ ವಿಶ್ವಕಪ್​ ಲೀಗ್​ನಲ್ಲಿ ಎರಡನೇ ಗೆಲುವು ದಾಖಲಿಸಲು 345 ರನ್​ ಗಳಿಸಬೇಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಲಂಕಾ ಪಾಕಿಸ್ತಾನದ ಬೌಲರ್​ಗಳನ್ನು ಚೆಂಡಾಡಿದರು. ಎರಡನೇ ಓವರ್​ನಲ್ಲಿ ಹಸನ್​ ಅಲಿ ಕುಸಾಲ್​ ಪೆರೇರಾ (0) ಅವರ ವಿಕೆಟ್​ ಉರುಳಿಸಿ ಲಂಕಾಗೆ ಶಾಕ್​ ನೀಡಿದರು. ಆದರೆ, ಲಂಕಾ ಈ ಶಾಕ್‌ನಿಂದ ಬಲುಬೇಗ ಹೊರಬಂತು. ಎರಡನೇ ವಿಕೆಟ್​ಗೆ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಶತಕದ ಜೊತೆಯಾಟವಾಡಿದರು. ಅರ್ಧಶತಕ ಗಳಿಸಿದ ನಿಸ್ಸಾಂಕ (51) ವಿಕೆಟ್​ ಕೊಟ್ಟು ಪೆವಿಲಿಯನ್​ಗೆ ಮರಳಿದರೆ, ನಂತರ ಬಂದ ಸದೀರ ಸಮರವಿಕ್ರಮ ಪಿಚ್​ಗೆ ಹೊಂದಿಕೊಂಡಿದ್ದ ಮೆಂಡಿಸ್ 111 ರನ್​ಗಳ ಪಾಲುದಾರಿಕೆ ಮಾಡಿದರು. ಕುಸಲ್ ಮೆಂಡಿಸ್ ಏಕದಿನ ಕ್ರಿಕೆಟ್​ನ ತಮ್ಮ 3ನೇ ಶತಕ ದಾಖಲಿಸಿದರು. 77 ಬಾಲ್​ನಲ್ಲಿ 14 ಬೌಂಡರಿ ಮತ್ತು 6 ಸಿಕ್ಸ್​ನಿಂದ 122 ರನ್‌ ಗಳಿಸಿ ವಿಕೆಟ್​ ಕೊಟ್ಟರು.

ಮೆಂಡಿಸ್ ವಿಕೆಟ್​ ನಂತರ ಸಮರವಿಕ್ರಮಗೆ ಸರಿಯಾದ ಪಾಲುದಾರಿಕೆ ಸಿಗಲಿಲ್ಲ. ಹೀಗಿದ್ದರೂ ಏಕದಿನ ಕ್ರಿಕೆಟ್​ನ ಚೊಚ್ಚಲ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 89 ಬಾಲ್​ ಆಡಿದ ಅವರು 11 ಬೌಂಡರಿ ಮತ್ತು 2 ಸಿಕ್ಸ್​ನಿಂದ 108 ರನ್​ ಕಲೆಹಾಕಿ ವಿಕೆಟ್​ ಕೈಚೆಲ್ಲಿದರು. ನಂತರ ಚರಿತ್ ಅಸಲಂಕಾ (1), ಧನಂಜಯ ಡಿ ಸಿಲ್ವಾ (25), ದಸುನ್ ಶನಕ (12), ಮಹೇಶ್ ತೀಕ್ಷಣ (0) ಮತ್ತು ದುನಿತ್ ವೆಲ್ಲಲಾಗೆ (10) ಗಮನಾರ್ಹ ಇನ್ನಿಂಗ್ಸ್​ ಕಟ್ಟಲಿಲ್ಲ. 50 ಓವರ್‌ಗಳ​ ಮುಕ್ತಾಯಕ್ಕೆ ಶ್ರೀಲಂಕಾ 9 ವಿಕೆಟ್​ ಕಳೆದುಕೊಂಡು 344 ರನ್​ ಕಲೆಹಾಕಿತು.

ಪಾಕಿಸ್ತಾನದ ಪರ ಹಸನ್​ ಅಲಿ ದುಬಾರಿಯಾದರೂ ಪ್ರಮುಖ ನಾಲ್ಕು ವಿಕೆಟ್​ ಉರುಳಿಸುವಲ್ಲಿ ಯಶಸ್ವಿಯಾದರು. ಹ್ಯಾರಿಸ್​ ರೌಫ್​ 2, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮತ್ತು ಶಾಹೀನ್ ಅಫ್ರಿದಿ ತಲಾ ಒಂದೊಂದು ವಿಕೆಟ್​ ಕಿತ್ತರು.

ಇದನ್ನೂ ಓದಿ: ಸ್ಟಾರ್​ ಆಟಗಾರ ಶುಭ್‌ಮನ್ ಗಿಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಪಾಕ್ ವಿರುದ್ಧ ಕಣಕ್ಕೆ ಅನುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.