ETV Bharat / sports

ವಿಶ್ವಕಪ್​ ಕ್ರಿಕೆಟ್​​: ಲಯಕ್ಕೆ ಮರಳಿದ ಪಾಕಿಸ್ತಾನಿ ಬೌಲರ್​​ಗಳು; 204ಕ್ಕೆ ಬಾಂಗ್ಲಾ ಆಲ್​ಔಟ್​

author img

By ETV Bharat Karnataka Team

Published : Oct 31, 2023, 5:53 PM IST

Updated : Oct 31, 2023, 6:13 PM IST

Pakistan vs Bangladesh Match: ಕೋಲ್ಕತ್ತಾದ ಈಡನ್​​ಗಾರ್ಡನ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗಿದ್ದು, ಬಾಂಗ್ಲಾ 204ಕ್ಕೆ ಸರ್ವಪತನ ಕಂಡಿದೆ.

ICC Cricket World Cup 2023
ICC Cricket World Cup 2023

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸತತ ನಾಲ್ಕು ಸೋಲುಗಳನ್ನು ಕಂಡ ನಂತರ ಪಾಕಿಸ್ತಾನ ಬೌಲಿಂಗ್​ನಲ್ಲಿ ಸುಧಾರಿಸಿದೆ. ಬಾಂಗ್ಲಾದೇಶದ ವಿರುದ್ಧ ಇಲ್ಲಿನ ಈಡನ್​ಗಾರ್ಡನ್​ ಮೈದಾನದಲ್ಲಿ ಪಾಕ್​ ಬೌಲರ್​​ಗಳು ಕಳೆದ 6 ಪಂದ್ಯಕ್ಕಿಂತ ಇಂದು ಉತ್ತಮ ಬೌಲಿಂಗ್​ ಪ್ರದರ್ಶಿಸಿದರು. ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಲಾ 3 ವಿಕೆಟ್​ ಕಬಳಿಸಿ ಮಿಂಚಿದರು. ಇದರಿಂದ ಬಾಂಗ್ಲಾದೇಶ 45.1 ಓವರ್​ಗೆ 204 ರನ್​ ಗಳಿಸಿ ಆಲ್​ಔಟ್​ ಆಯಿತು. ಈ ಮ್ಯಾಚ್​ ಸೇರಿದಂತೆ ಪಾಕ್​ ಮುಂದಿನ ಎರಡು ಪಂದ್ಯಗಳನ್ನು ಗೆದ್ದಲ್ಲಿ ಸೆಮೀಸ್​ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನದ ವಿರುದ್ಧ ಒಂದು ಗೆಲುವು ದಾಖಲಿಸಿದ ನಂತರ ಸತತ ಐದು ಸೋಲು ಕಂಡಿರುವ ಶಕೀಬ್​ ಅಲ್​ ಹಸನ್​ ಪಡೆ ಇಂದಿನ ಪಂದ್ಯದ ಜತೆಗೆ ಉಳಿದ ಪಂದ್ಯಗಳನ್ನು ಕಳೆದುಕೊಂಡಲ್ಲಿ 2025ರ ಚಾಂಪಿಯನ್ಸ್​​ ಟ್ರೋಫಿಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾ ಟೈಗರ್ಸ್​ಗೆ ಶಾಹೀನ್ ಅಫ್ರಿದಿ ಬೆನ್ನು ಬೆನ್ನು ಶಾಕ್​ ನೀಡಿದರು. ಮೊದಲ ಓವರ್​ನಲ್ಲಿ ತಂಝಿದ್ ಹಸನ್ ವಿಕೆಟ್​ ಕಬಳಿಸಿದರೆ, 3ನೇ ಓವರ್​ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ (4) ಅವರ ವಿಕೆಟ್​ ಪಡೆದರು. ಅಫ್ರಿದಿ ಬೆನ್ನಲ್ಲೇ ಹ್ಯಾರಿಸ್ ರೌಫ್ ಅನುಭವಿ ಆಟಗಾರ ಮುಶ್ಫಿಕರ್ ರಹೀಮ್ (5) ಅವರ ವಿಕೆಟ್​ ಪಡೆದುಕೊಂಡರು.

4ನೇ ವಿಕೆಟ್​ಗೆ ಇನ್ನೋರ್ವ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಜೊತೆಗೆ ಬಡ್ತಿ ಪಡೆದು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಮಹಮ್ಮದುಲ್ಲಾ 79 ರನ್​ನ ಜತೆಯಾಟವನ್ನು ಮಾಡಿದರು. ಇದರಿಂದ 23 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾ 100ರ ಗಡಿ ದಾಟಿತು. 45 ರನ್​ ಗಳಿಸಿ ಆಡುತ್ತಿದ್ದ ಲಿಟ್ಟನ್ ದಾಸ್ ಇಫ್ತಿಕರ್​ ಅಹಮದ್​ ದಾಳಿಗೆ ಬಲಿಯಾದರು. ಅವರ ಬೆನ್ನಲ್ಲೇ ಅರ್ಧಶತಕ ಗಳಸಿ ಮಹಮ್ಮದುಲ್ಲಾ ಅವರು ಸಹ ವಿಕೆಟ್​ ಕಳೆದುಕೊಂಡರು. ಇನ್ನಿಂಗ್ಸ್​ನಲ್ಲಿ ಮಹಮ್ಮದುಲ್ಲಾ 70 ಬಾಲ್​ನಲ್ಲಿ 6 ಬೌಂಡರಿ, 1 ಸಿಕ್ಸ್​ನಿಂದ 56 ರನ್​ ಕಲೆಹಾಕಿದರು.

  • " class="align-text-top noRightClick twitterSection" data="">

ಮಧ್ಯಮ ಕ್ರಮಾಂಕದಲ್ಲಿ ತೌಹಿದ್ ಹೃದಯಾಯ್ ನಾಯಕನಿಗೆ ಸಾಥ್​ ನೀಡಲಿಲ್ಲ. ನಾಯಕ ಶಕೀಬ್​ ಅಲ್​ ಹಸನ್ ಜತೆಗೆ ಕೆಳಕ್ರಮಾಂಕದಲ್ಲಿ ಮೆಹಿದಿ ಹಸನ್ ಮಿರಾಜ್ ಪಾಲುದಾರಿಕೆ ಹಂಚಿಕೊಂಡರು. ಈ ಜೋಡಿ 7ನೇ ವಿಕೆಟ್​ 45 ರನ್​ನ ಪುಟ್ಟ ಜತೆಯಾಟವನ್ನು ಮಾಡಿತು. ಶಕೀಬ್​ 43 ರನ್​ಗೆ ವಿಕೆಟ್​ ಒಪ್ಪಿಸಿದರೆ, ಮೆಹಿದಿ ಹಸನ್ ಮಿರಾಜ್ 25 ಗಳಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಕೊನೆಯಲ್ಲಿ ಮೊಹಮ್ಮದ್ ವಾಸಿಂ ಜೂನಿಯರ್ ಅವರ ದಾಳಿಗೆ ನಲುಗಿದ ಬಾಂಗ್ಲಾ ತಂಡ 204 ರನ್​ಗೆ ಸರ್ವಪತನ ಕಂಡಿತು.

ಶತಕ ವಿಕೆಟ್​ ವೀರ ಅಫ್ರಿದಿ: ಶಾಹೀನ್​ ಶಾ ಅಫ್ರಿದಿ ಏಕದಿನ ಕ್ರಿಕೆಟ್​ನಲ್ಲಿ 100 ವಿಕೆಟ್​ ಕಬಳಿಸಿದ ದಾಖಲೆಯನ್ನು ಬರೆದರು. 51 ಪಂದ್ಯದಲ್ಲಿ ಶತಕ ವಿಕೆಟ್​ ಪಡೆದು ಆಸಿಸ್​ ಆಟಗಾರ ಮಿಚೆಲ್​ ಸ್ಟಾರ್ಕ್ (52)​ ಅವರನ್ನು ಹಿಂದಿಕ್ಕಿದರು. ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಲಾ 3 ವಿಕೆಟ್​ ಕಬಳಿಸಿದರೆ, ಹ್ಯಾರಿಸ್​ ರೌಫ್ 2 ಹಾಗೇ ಉಸಾಮಾ ಮಿರ್, ಇಫ್ತಿಕರ್​ ಅಹಮದ್​ ತಲಾ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಸಂಪೂರ್ಣ ಫಿಟ್‌ ಆಗಿದ್ದಲ್ಲಿ ಮುಂದಿನ ಐಪಿಎಲ್‌ ಆಡುವೆ, ಇಲ್ಲವೇ ಪ್ರೇಕ್ಷಕರೊಂದಿಗೆ ಪಂದ್ಯ ನೋಡುವೆ: ಧೋನಿ

Last Updated : Oct 31, 2023, 6:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.