ಕೋಲ್ಕತ್ತಾ (ಪಶ್ಚಿಮ ಬಂಗಾಳ): 2023ರ ವಿಶ್ವಕಪ್ನಲ್ಲಿ ಸತತ ನಾಲ್ಕು ಸೋಲು ಕಂಡು ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಉಸಿರು ಬಂದಂತಾಗಿದೆ. ಬಾಂಗ್ಲಾ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಂಡುಬಂದಿದೆ. ಬೌಲಿಂಗ್ನಲ್ಲಿ ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್ ಮಿಂಚಿದರೆ, ಬ್ಯಾಟಿಂಗ್ನಲ್ಲಿ ಅಬ್ದುಲ್ಲಾ ಶಫೀಕ್, ಫಖರ್ ಜಮಾನ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದು ಬಾಂಗ್ಲಾ ವಿರುದ್ಧ ಪಾಕಿಸ್ತಾನ 17 ಓವರ್ ಬಾಕಿ ಇರುವಂತೆ 7 ವಿಕೆಟ್ನಿಂದ ಗೆಲುವು ದಾಖಲಿಸಿದೆ. 7 ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿರುವ ಪಾಕ್, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಮೂಲಕ ಸೆಮೀಸ್ ಕನಸು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.
-
Pakistan win by seven wickets and 105 balls to spare! 👏@iMRizwanPak and @IftiMania give the finishing touches after brilliant knocks by the openers 👊#PAKvBAN | #CWC23 | #DattKePakistani pic.twitter.com/qmKwP26G8H
— Pakistan Cricket (@TheRealPCB) October 31, 2023 " class="align-text-top noRightClick twitterSection" data="
">Pakistan win by seven wickets and 105 balls to spare! 👏@iMRizwanPak and @IftiMania give the finishing touches after brilliant knocks by the openers 👊#PAKvBAN | #CWC23 | #DattKePakistani pic.twitter.com/qmKwP26G8H
— Pakistan Cricket (@TheRealPCB) October 31, 2023Pakistan win by seven wickets and 105 balls to spare! 👏@iMRizwanPak and @IftiMania give the finishing touches after brilliant knocks by the openers 👊#PAKvBAN | #CWC23 | #DattKePakistani pic.twitter.com/qmKwP26G8H
— Pakistan Cricket (@TheRealPCB) October 31, 2023
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶಕ್ಕೆ ಪಾಕ್ ಬೌಲರ್ಗಳ ವಿರುದ್ಧ ಹೋರಾಡಿ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಮಹಮ್ಮದುಲ್ಲಾ (56), ಲಿಟ್ಟನ್ ದಾಸ್ (45), ಶಕೀಬ್ ಅಲ್ ಹಸನ್ (43) ಅವರ ಇನ್ನಿಂಗ್ಸ್ ಬಲದಿಂದ 204 ರನ್ ಗಳಿಸಿತು.
- " class="align-text-top noRightClick twitterSection" data="">
ಈ ಒತ್ತಡರಹಿತ ಗುರಿಯನ್ನು ಪಾಕ್ ಆರಂಭಿಕರು ಉತ್ತಮವಾಗಿ ವಿಕೆಟ್ ಕೊಡದೇ ನಿಭಾಯಿಸಿದರು. ಆರಂಭಿಕರಾದ ಅಬ್ದುಲ್ಲಾ ಶಫೀಕ್ ಮತ್ತು ಫಖರ್ ಜಮಾನ್ 128 ರನ್ನ ಬೃಹತ್ ಜತೆಯಾಟ ಮಾಡಿದರು. ಇಬ್ಬರ ಜತೆಯಾಟದಿಂದ ಪಾಕಿಸ್ತಾನ ಸುಲಭ ಗೆಲುವು ದಾಖಲಿಸುತ್ತದೆ ಎಂಬ ವಾತಾವರಣ ಇತ್ತು. ಆದರೆ, 69 ಬಾಲ್ ಎದುರಿಸಿ 9 ಬೌಂಡರಿ, 2 ಸಿಕ್ಸ್ನಿಂದ 68 ರನ್ ಇನ್ನಿಂಗ್ಸ್ ಕಟ್ಟಿದ್ದ ಅಬ್ದುಲ್ಲಾ ಶಫೀಕ್ ವಿಕೆಟ್ ಕೊಟ್ಟರು. ಇದಾದ ನಂತರ ಬಂದ ನಾಯಕ ಬಾಬರ್ ಅಜಮ್ ರನ್ ಗಳಿಸಲು ಪರದಾಡಿದರು.
ಬಾಬರ್ ರನ್ಗೆ ಪ್ರಯತ್ನಿಸುವಾಗ ಇತ್ತ ಫಖರ್ ಜಮಾನ್ ತಮ್ಮ ಅರ್ಧಶತಕ ಪೂರೈಸಿಕೊಂಡರು. ಬಾಬರ್ ಕಳೆದ ಪಂದ್ಯದಲ್ಲಿ 80+ ರನ್ ಗಳಿಸಿದರೂ, ಈ ಪಂದ್ಯದಲ್ಲಿ ವಿಫಲರಾದರು. 16 ಬಾಲ್ ಆಡಿದ ಪಾಕ್ ನಾಯಕ 9 ರನ್ಗೆ ವಿಕೆಟ್ ಕೊಟ್ಟರು. ಬಾಬರ್ ಬೆನ್ನಲ್ಲೇ 81 ರನ್ ಗಳಿಸಿದ್ದ ಫಖರ್ ಜಮಾನ್ ಕೂಡಾ ವಿಕೆಟ್ ಕಳೆದುಕೊಂಡರು. ಮೂರು ವಿಕೆಟ್‌ಗಳನ್ನು ಮೆಹಿದಿ ಹಸನ್ ಮಿರಾಜ್ ಕಬಳಿಸಿದರು.
ಕೊನೆಯಲ್ಲಿ ತಂಡದ ಗೆಲುವಿಗೆ ಬೇಕಾಗಿದ್ದ 36 ರನ್ ಅನ್ನು ಮೊಹಮ್ಮದ್ ರಿಜ್ವಾನ್ (26) ಮತ್ತ ಇಫ್ತಿಕರ್ ಅಹ್ಮದ್ (17) ಅಜೇಯವಾಗಿ ಕಲೆಹಾಕಿದರು. ಇದರಿಂದ ಪಾಕಿಸ್ತಾನ 17.3 ಓವರ್ ಬಾಕಿ ಇರುವಂತೆ 7 ವಿಕೆಟ್ಗಳಿಂದ ಜಯ ದಾಖಲಿಸಿತು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ ಮಾತ್ರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
-
Fakhar Zaman slammed a quickfire 81 on his comeback to win the @aramco #POTM 🎉#CWC23 | #PAKvAFG pic.twitter.com/aIwbrnH3KH
— ICC Cricket World Cup (@cricketworldcup) October 31, 2023 " class="align-text-top noRightClick twitterSection" data="
">Fakhar Zaman slammed a quickfire 81 on his comeback to win the @aramco #POTM 🎉#CWC23 | #PAKvAFG pic.twitter.com/aIwbrnH3KH
— ICC Cricket World Cup (@cricketworldcup) October 31, 2023Fakhar Zaman slammed a quickfire 81 on his comeback to win the @aramco #POTM 🎉#CWC23 | #PAKvAFG pic.twitter.com/aIwbrnH3KH
— ICC Cricket World Cup (@cricketworldcup) October 31, 2023
ಫಖರ್ ಜಮಾನ್ ಪಂದ್ಯಶ್ರೇಷ್ಠ: ಪಾಕಿಸ್ತಾನ ತಂಡದ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ಪಂದ್ಯದ ಗೆಲುವಿಗೆ ಬಹುಮುಖ್ಯವಾದ 81 ರನ್ನ ಇನ್ನಿಂಗ್ಸ್ ಕೊಡುಗೆ ನೀಡಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: 'ಇಷ್ಟೊಂದು ರನ್, ಶತಕಗಳನ್ನು ಎಂದಿಗೂ ಯೋಚಿಸಿರಲಿಲ್ಲ': ವಿರಾಟ್ ಕೊಹ್ಲಿ